ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SSLC Result 2024 | ಒಟ್ಟಿಗೆ ತೇರ್ಗಡೆಯಾದ ತಾಯಿ–ಮಗ

Published 9 ಮೇ 2024, 13:32 IST
Last Updated 9 ಮೇ 2024, 13:32 IST
ಅಕ್ಷರ ಗಾತ್ರ

ಆಲೂರು (ಹಾಸನ): ತಾಲ್ಲೂಕಿನ ಚಿನ್ನಳ್ಳಿಯ ತಾಯಿ ಟಿ.ಆರ್. ಜ್ಯೋತಿ ಮತ್ತು ಮಗ ಸಿ.ಬಿ. ನಿತಿನ್ ಒಟ್ಟಿಗೇ ಎಸ್‌ಎಸ್‌ಎಲ್‌ಸಿ ತೇರ್ಗಡೆಯಾಗಿದ್ದಾರೆ.

ಸಕಲೇಶಪುರ ತಾಲ್ಲೂಕು ಬಾಳ್ಳುಪೇಟೆ ಸಿದ್ದಣ್ಯಯ್ಯ ಹೈಸ್ಕೂಲ್‍ನಲ್ಲಿ ಪುನರಾವರ್ತಿತ ಅಭ್ಯರ್ಥಿಯಾಗಿ ಪರೀಕ್ಷೆ ಬರೆದಿದ್ದ ಟಿ.ಆರ್. ಜ್ಯೋತಿ ಅವರು 625 ಕ್ಕೆ 250 ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ.

ಬಾಳ್ಳುಪೇಟೆ ವಿವೇಕ ವಿದ್ಯಾಸಂಸ್ಥೆ ಶಾಲೆಯಲ್ಲಿ ಓದುತ್ತಿದ್ದ ಸಿ.ಬಿ. ನಿತಿನ್ 582 ಅಂಕ ಗಳಿಸಿ ತೇರ್ಗಡೆಯಾಗಿದ್ದಾರೆ. ಇಬ್ಬರೂ ತೇರ್ಗಡೆಯಾಗಿರುವುದು ಮನೆಯ ಸಂಭ್ರಮವನ್ನು ಇಮ್ಮಡಿಸಿದೆ.

‘ಪ್ರಜಾವಾಣಿ’ ಜೊತೆ ಮಾತನಾಡಿದ ಜ್ಯೋತಿ, ‘ಗ್ರಾಮದಲ್ಲಿ ಹಾಲಿನ ಡೇರಿ ತೆರೆಯಬೇಕೆಂಬ ಉದ್ದೇಶದಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದೆ. ಎರಡನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದೇನೆ. ಪಿಯುಸಿ ಪರೀಕ್ಷೆ ಬರೆಯಲು ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಪತಿ ಭುವನೇಶ್ ಬೇಕರಿ ಇಟ್ಟುಕೊಂಡಿದ್ದಾರೆ. ನಾನು ಉತ್ತೀರ್ಣಳಾಗಿರುವುದು ಜೀವನದ ಸಾಧನೆಗೆ ಮೈಲಿಗಲ್ಲಾಗಿದೆ’ ಎಂದರು.



ಸಿ.ಬಿ. ನಿತಿನ್
ಸಿ.ಬಿ. ನಿತಿನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT