ಈವರೆಗೂ ಜೋಳ ಹುಟ್ಟಿದ ನಂತರ ಕಾಂಡ ಕೊರೆಯುವ ಹುಳು ಬರುತ್ತಿತ್ತು. ಆದರೆ ಈ ವರ್ಷ ಆ ಕಾಯಿಲೆ ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಪ್ರಸಕ್ತ ಸಾಲಿನಲ್ಲಿ ಗಿಡಗಳು ಬಿಳಿ ಸುಳಿ ರೋಗಕ್ಕೆ ತುತ್ತಾಗುತ್ತಿವೆ
ನಾಗೇಶ್ ಹಳೆ ಆಲೂರಿನ ರೈತ
ಒಂದೇ ಬೆಳೆಯಿಂದ ರೋಗ ಉಲ್ಬಣ
ಪ್ರತಿ ವರ್ಷ ಒಂದೇ ಜಮೀನಿನಲ್ಲಿ ಏಕದಳ ಜೋಳ ಬೆಳೆಯತ್ತಿದ್ದು ರೋಗ ಉಲ್ಬಣವಾಗುತ್ತಿದೆ. ಒಂದು ವರ್ಷದಲ್ಲಿ ನೀರಾವರಿ ಸಹಕಾರದಿಂದ ಎರಡು ಬಾರಿ ಬೆಳೆಯುತ್ತಿದ್ದಾರೆ. ಇದು ರೋಗಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಈ ರೋಗ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಮೇಶ್ ಕುಮಾರ್ ತಿಳಿಸಿದ್ದಾರೆ. ಬಿಳಿಸುಳಿ ರೋಗ ತುತ್ತಾಗಿರುವುದನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದೆ. ಮೆಟಲಾಕ್ಸಿಲ್ 4 ಮತ್ತು ಮೆನಕೋಸೆಡ್ ಮಿಶ್ರಣ ಮಾಡಿ 4 ಗ್ರಾಂ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಭೂಮಿಯಿಂದ ನೀರು ಬಸಿಯಲು ಕ್ರಮ ಕೈಗೊಳ್ಳಬೇಕು. ರೋಗ ಲಕ್ಷಣ ಕಂಡುಬಂದ ಗಿಡಗಳನ್ನು ಕೂಡಲೇ ಕಿತ್ತು ಹಾಕಬೇಕು. ತಂಪಾದ ವಾತಾವರಣ ಮತ್ತು ತೇವಾಂಶ ಗಾಳಿಯಿಂದ ರೋಗ ಹರಡುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.