ಶುಕ್ರವಾರ, ಮೇ 20, 2022
20 °C

80 ಅಡಿ ಆಳದ ಬಾವಿಗೆ ಬಿದ್ದು ಬದುಕುಳಿದ ವ್ಯಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

PV File

ಅರಸೀಕೆರೆ: 80 ಅಡಿ ಆಳದ ಬಾವಿಗೆ ಆಕಸ್ಮಿಕವಾಗಿ ಬಿದ್ದು, ರಾತ್ರಿಯಿಡೀ ಅಲ್ಲೇ ನರಳಾಡಿದ ವ್ಯಕ್ತಿಯೊಬ್ಬರು ಬದುಕುಳಿದ ಪ್ರಸಂಗ ತಾಲ್ಲೂಕಿನ ನಾರಾಯಣಘಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.

ಗ್ರಾಮದಲ್ಲಿರುವ ಬಾವಿ ಕಟ್ಟೆ ಮೇಲೆ ಶುಕ್ರವಾರ ರಾತ್ರಿ 8 ಗಂಟೆ ಸುಮಾರಿಗೆ ಕುಳಿತಿದ್ದ ಮೋಹನ್‌ ‌ಕುಮಾರ್ (40) ಬಾವಿಯೊಳಗೆ ಬಿದ್ದಿದ್ದಾರೆ. ಇವರು ಕೂಗಿಕೊಂಡಿದ್ದು, ಯಾರಿಗೂ ಕೇಳಿಸಿಲ್ಲ. ಬಾವಿಯಲ್ಲಿ ನೀರು ಇರಲಿಲ್ಲ. ಶನಿವಾರ ಬೆಳಿಗ್ಗೆ ಬಾವಿಯಿಂದ ಯಾರೋ ಕೂಗಿಕೊಳ್ಳುತ್ತಿರುವುದು ಗೊತ್ತಾಗಿ ಗ್ರಾಮಸ್ಥರು, ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.

ಬಾವಿಯೊಳಗೆ ಬಿದ್ದಿದ್ದ ಮೋಹನ್‌ ಕುಮಾರ್‌ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮೇಲೆತ್ತಿದ್ದಾರೆ. ಎರಡೂ ಕಾಲು ಮುರಿದಿದ್ದು, ಅರಸೀಕೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು