ಹಾಸನ: ನಗರದ ಹೊರವಲಯದ ಗೆಂಡೆಕಟ್ಟೆ ಅರಣ್ಯ ಪ್ರದೇಶದ ಐಬಿಯಿಂದ ಎಸಿಎಫ್ ಅಧಿಕಾರಿಯನ್ನು ಅಪರಿಚಿತರು ಅಪಹರಿಸಿದ್ದಾರೆ ಎಂಬ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಬೆಸ್ತು ಬಿದ್ದಿದ್ದಾರೆ.

ಪ್ರಕರಣ ಒಂದರಲ್ಲಿ ಶೀಘ್ರ ಚಾರ್ಜ್ ಶೀಟ್ ಸಲ್ಲಿಕೆಗಾಗಿ ಗೂಗಲ್ ಪೇ ಮೂಲಕ ಲಂಚ ಪಡೆದಿದ್ದ ಅರಣ್ಯ ಸಂಚಾರದಳದ ಎಸಿಎಫ್ ಸತೀಶ್, ಮಂಗಳವಾರ ರಾತ್ರಿ ಲೋಕಾಯುಕ್ತರ ಪೊಲೀಸರ ವಶದಲ್ಲಿ ಪತ್ತೆಯಾಗಿದ್ದಾರೆ. ಎಸಿಎಫ್ ಅಪಹರಣವಾಗಿಲ್ಲ ಎನ್ನುವುದನ್ನು ಖಚಿತಪಡಿಸಿಕೊಂಡ ಬಡಾವಣೆ ಪೊಲೀಸರು ವಾಪಸ್ ತೆರಳಿದರು.

ಘಟನೆಯ ವಿವರ: ಅರಸೀಕೆರೆ ತಾಲ್ಲೂಕಿನ ಯಾದಪುರ ಗ್ರಾಮದ ಅಖಿಲೇಶ್ ಅವರಿಂದ ₹ 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದ ಸತೀಶ್, ನ. 19ರಂದು ಮೊದಲ ಕಂತಾಗಿ ₹ 5 ಸಾವಿರ ಗೂಗಲ್ ಪೇ ಮೂಲಕ ಪಡೆದಿದ್ದರು. ಮಂಗಳವಾರ ಉಳಿದ ₹ 10 ಸಾವಿರ ಅನ್ನು ಗೂಗಲ್ ಪೇ ಮೂಲಕ ಪಡೆದಿದ್ದರು.

ಈ ವೇಳೆ ಹಾಸನದ ಹೊರವಲಯದ ಗೆಂಡೆಕಟ್ಟೆ ಅರಣ್ಯದ ಐಬಿ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದ ಪೊಲೀಸ ತಂಡ, ಸತೀಶ್ ಅವರನ್ನು ವಶಕ್ಕೆ ಪಡೆದಿತ್ತು.

ಅಪರಹಣದ ಶಂಕೆ: ಎಸಿಎಫ್ ಸತೀಶ್ ಅವರನ್ನು ಬಂಧಿಸಿದ ಲೋಕಾಯುಕ್ತ ಪೊಲೀಸರು, ಗೆಂಡೆಕಟ್ಟೆ ಐಬಿಯಿಂದ ಕರೆದೊಯ್ದರು. ಆದರೆ, ಇದನ್ನು ತಪ್ಪಾಗಿ ತಿಳಿದುಕೊಂಡ ಅರಣ್ಯ ಸಿಬ್ಬಂದಿ, ಅಪರಿಚಿತರು ಎಸಿಎಫ್ ಅವರನ್ನು ಅಪಹರಣ ಮಾಡಿದ್ದಾರೆ ಎಂದು ಆರ್ಎಫ್ಒ ವಿಶ್ವನಾಥ್ ಅವರಿಗೆ ಮಾಹಿತಿ ನೀಡಿದ್ದರು.

ವಿಶ್ವನಾಥ್ ಕೂಡ ಹಲವು ಬಾರಿ ಸತೀಶ್ ಅವರಿಗೆ ಕರೆ ಮಾಡಿದರೂ, ಕರೆ ಸ್ವೀಕರಿಸಲಿಲ್ಲ. ಇದರಿಂದ ಗಾಬರಿಗೊಂಡ ವಿಶ್ವನಾಥ್, ಬಡಾವಣೆ ಠಾಣೆಗೆ ದೂರು ನೀಡಿದ್ದರು. ಬಳಿಕ ಕಾರ್ಯಾಚರಣೆ ಆರಂಭಿಸಿದ ಪೊಲೀಸರು, ಸತೀಶ್ ಅವರ ಫೋನ್ ಲೋಕೇಶನ್ ಆಧರಿಸಿ ಹುಡುಕಾಟ ನಡೆಸಿದರು. ಆದರೆ, ಲೊಕೇಶನ್ ನಗರದ ಜಿಲ್ಲಾಧಿಕಾರಿ ಕಚೇರಿ ಮೇಲ್ಮಹಡಿಯ ಲೋಕಾಯುಕ್ತ ಠಾಣೆಯದಾಗಿದ್ದು, ಸತೀಶ್ ಅಲ್ಲಿಯೇ ಇರುವುದು ಗೊತ್ತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.