ಸಕಲೇಶಪುರ: ಬಸವಣ್ಣನ ವಚನಗಳು ಎಲ್ಲ ಕಾಲಕ್ಕೂ ಮಾನವ ಧರ್ಮದ ಕಲ್ಯಾಣಕ್ಕೆ ಅಡಿಗಲ್ಲುಗಳಾಗಿವೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.

ಇಲ್ಲಿಯ ಗುರುವೇಗೌಡ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಮಲೆನಾಡು ವೀರಶೈವ ಸಮಾಜ ಹಮ್ಮಿಕೊಂಡಿದ್ದ ಬಸವೇಶ್ವರ ಕಂಚಿನ ಪತ್ಥಳಿ ಲೋಕಾರ್ಪಣೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಜಾತಿ ಧರ್ಮಗಳ ಹೆಸರಿನಲ್ಲಿ ಮನ್ಯಷ್ಯರನ್ನು ಮೇಲು ಕೀಳು ಎಂದು ಬೇರ್ಪಡಿಸುವ ಗೋಡೆಗಳನ್ನು ತಮ್ಮ ವಚನ ಕ್ರಾಂತಿಯ ಮೂಲಕ ಕಳಚುವ ಕೆಲಸ ಮಾಡಿದರು. ಇಂತಹ ಒಂದು ಕಲ್ಯಾಣ ಕೆಲಸಕ್ಕಾಗಿ ಬಸವಣ್ಣ ತನ್ನ ಜೀವನವನ್ನೆ ಮುಡುಪಾಗಿಟ್ಟ ಪರಿಣಾಮ 10 ಶತಮಾನಗಳ ನಂತರ ಈಗಲೂ ಅವರನ್ನು ನೆನೆಯುತ್ತಿದ್ದೇವೆ. ಭೂಮಿ ಮೇಲೆ ಹುಟ್ಟಿದ ಯಾವುದೆ ದಾರ್ಶನಿಕರು ಮಹಿಳೆಯರ ಬಗ್ಗೆ ಮಾತನಾಡಲು ಚಿಂತಸದ ಕಾಲದಲ್ಲಿ ಮಹಿಳೆಯರಿಗೆ ಪ್ರಪ್ರಥಮ ಬಾರಿಗೆ ಸ್ವತಂತ್ರ ನೀಡಿದವರು ಬಸವಣ್ಣನವರು. ಕಾಯಕ ಸಿದ್ಧಾಂತವನ್ನು ಜಗತ್ತಿಗೆ ನೀಡಿದ ಕೀರ್ತಿ ಸಹ ಬಸವಣ್ಣನವರಿಗೆ ಸಲ್ಲುತ್ತದೆ. ಪ್ರಪಂಚದ ಮೊದಲ ಪಾರ್ಲಿಮೆಂಟ್ ಸ್ಥಾಪನೆ ಮಾಡಿದ್ದರು. ಅವರ ವಚನಗಳ ಸಾರವನ್ನು ಮಕ್ಕಳಿಗೆ ಬೋಧನೆ ಮಾಡ ಬೇಕಿದೆ. ಇದರಿಂದಾಗಿ ಮಕ್ಕಳಲ್ಲಿ ಸಂಸ್ಕಾರ, ಸಂಸ್ಕೃತಿ ವೃದ್ಧಿಸಲಿದ್ದು, ಜೀವನದ ಪಾಠವಾಗಲಿದೆ ಎಂದರು.

ನಮ್ಮ ಸಂವಿಧಾನವನ್ನು ಹಲವು ಬಾರಿ ಬದಲಿಸಿದ್ದೆವೆ. ಆದರೆ, ಬಸವಣ್ಣನವರು ನೀಡಿದ ವಚನಗಳ ಸಾಲು ಒಮ್ಮೆಯು ಬದಲಾಗಿಲ್ಲ. ಪ್ರಪಂಚದ ಎಲ್ಲ ಜನರು ನಮ್ಮವರು ಎಂದ ಬಸವಣ್ಣನವರ ‘ಮಾನವ ಧರ್ಮಕ್ಕೆ ಜಯವಾಗಲಿ’ ಎಂಬ ಸಾಲನ್ನು ಯಾವ ಧರ್ಮದಲ್ಲೂ ಕಾಣಲು ಸಾಧ್ಯವಿಲ್ಲ ಎಂದರು.

ವೀರಶೈವಸಮಾಜದ ಮುಖಂಡ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ವಿಶ್ವ ಸಾಹಿತ್ಯವೆ ಒಂದು ತೂಕವಾದರೆ ವಚನ ಸಾಹಿತ್ಯದ ತೂಕವೇ ಒಂದು. ಇಂತಹ ವಚನಗಳನ್ನು ನೀಡಿದ ಬಸವಣ್ಣನವರ ಹೆಸರು ಅಜರಾಮರವಾಗಿರಲಿದೆ. ಜಾತಿ ಸಂಕೋಲೆಯನ್ನು ಮೆಟ್ಟಿ ನಿಲ್ಲುವ ಮೊದಲ ಯತ್ನ ಬಸವಣ್ಣನವರಿಂದ ನಡೆದಿದೆ. ಇದರಿಂದಾಗಿ ಬಸವಣ್ಣನವರ ಅನುಯಾಯಿಗಳು ಪ್ರತಿನಿಧಿಸುವ ವೀರಶೈವ ಸಮಾಜ ಇಂದಿಗೂ ಎಲ್ಲ ಸಮಾಜವನ್ನು ನಮ್ಮವರು ಎಂದು ಅಪ್ಪಿಕೊಂಡು ನಡೆಯುವ ಏಕೈಕ ಸಮಾಜವಾಗಿದೆ ಎಂದರು.

ಮಲೆನಾಡು ವೀರಶೈವ ಸಮಾಜದ ಮಾಜಿ ಅಧ್ಯಕ್ಷ ಎಚ್.ಎಂ ಶಶಿಧರ್ ಅವರನ್ನು ಸನ್ಮಾನಿಸಲಾಯಿತು. ತಾಲ್ಲೂಕು ಮಲೆನಾಡು ವೀರಶೈವ ಸಮಾದ ಅಧ್ಯಕ್ಷ ಮೂಗಲಿ ಧರ್ಮಪ್ಪ, ಪ್ರಧಾನ ಕಾರ್ಯದರ್ಶಿ ಯಡೇಹಳ್ಳಿ ಆರ್. ಮಂಜುನಾಥ್, ಉಪಾಧ್ಯಕ್ಷ ಎ.ಜಿ. ಗಗನ್, ಯುವ ವೇದಿಕೆ ಅಧ್ಯಕ್ಷ ಶಶಿಕುಮಾರ್, ಅಕ್ಕಮಹಾದೇವಿ ಮಹಿಳಾ ಸಮಾಜದ ಅಧ್ಯಕ್ಷ ಕೋಮಲಾ ದಿನೇಶ್, ಮಾಜಿ ಅಧ್ಯಕ್ಷ ಎಚ್.ಎನ್. ದೇವರಾಜ್, ವೀರಶೈವ ಸಮಾಜದ ಮುಖಂಡರಾದ ಬ್ಯಾಕರವಳ್ಳಿ ಜಯರಾಜ್, ವಿದ್ಯಾಶಂಕರ್, ಅರೆಕೆರೆ ನರೇಶ್, ಬ್ಯಾಕರವಳ್ಳಿ ವಿಜಯ್ಕುಮಾರ್, ನೌಕರರ ಸಂಘದ ಅಧ್ಯಕ್ಷ ಓಂಕಾರ್ ಮೂರ್ತಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.