ಮಂಗಳವಾರ, ಡಿಸೆಂಬರ್ 7, 2021
20 °C
ಯಾವುದೇ ತರಬೇತಿ ಇಲ್ಲ, ಮೂರನೇ ಯತ್ನದಲ್ಲಿ ಯಶಸ್ಸು

ಯುಪಿಎಸ್‌ಸಿ: ಹೆದ್ದುರ್ಗದ ಅಮೃತ್‌ಗೆ 752ನೇ ರ್‍ಯಾಂಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆಲೂರು ತಾಲ್ಲೂಕಿನ ಹೆದ್ದುರ್ಗದ ಎಚ್‌.ವಿ.ಅಮೃತ್‌ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 752ನೇ ರ್‍ಯಾಂಕ್‌ ಪಡೆದಿದ್ದಾರೆ.

ಕಾಫಿ ಬೆಳೆಗಾರ ವಿಶ್ವನಾಥ್‌ ಮತ್ತು ಲೇಖಕಿ ನಂದಿನಿ ಹೆದ್ದುರ್ಗ ಅವರ ಪುತ್ರ ಅಮೃತ್‌ ಬಿಇ ಪದವೀಧರ. 2017ರಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಕ್ಕೆ ಸೇರಿದ್ದರು. ಒಂದೂವರೆ ವರ್ಷದ ನಂತರ ನಾಗರಿಕ ಸೇವಾ ಪರೀಕ್ಷೆ ಬರೆಯಲು ಕೆಲಸಕ್ಕೆ ರಾಜೀನಾಮೆ ನೀಡಿದರು.

‘ಪ್ರಿಲಿಮ್ಸ್‌ಗಾಗಿ ದಿನಕ್ಕೆ ಎಂಟು ತಾಸು ಓದುತ್ತಿದ್ದೆ. ಮುಖ್ಯ ಪರೀಕ್ಷೆಯಲ್ಲಿ 12–14 ತಾಸು ಅಧ್ಯಯನ ಮಾಡುತ್ತಿದ್ದೆ. ಸ್ವಲ್ಪ ಅನಾರೋಗ್ಯ ಸಮಸ್ಯೆಯಾಯಿತು. ಅದರ ನಡುವೆಯೇ ಪರೀಕ್ಷೆ ಬರೆದೆ.  400 ರೊಳಗೆ ರ್‍ಯಾಂಕ್‌ ಬರುವ ನಿರೀಕ್ಷೆ ಇತ್ತು. ಆದರೆ, ಕೆಲ ತಪ್ಪುಗಳಿಂದ ಅದು ಸಾಧ್ಯವಾಗಿಲ್ಲ’ ಎಂದು ಅಮೃತ್‌  ‘ಪ್ರಜಾವಾಣಿ’ಗೆ ತಿಳಿಸಿದರು.

‘ಯುಪಿಎಸ್‌ಸಿಗಾಗಿ ಯಾವುದೇ ಕೋಚಿಂಗ್‌ ತೆಗೆದುಕೊಂಡಿಲ್ಲ. ವೆಬ್‌ಸೈಟ್‌, ಪುಸ್ತಕ ಓದಿಯೇ ಪರೀಕ್ಷೆಗೆ
ಸಿದ್ಧತೆ ನಡೆಸಿದ್ದೆ. ಹಳ್ಳಿಯ ಅಜ್ಜಿ ಮನೆಯಲ್ಲಿ ಪರೀಕ್ಷೆಗೆ ಸಿದ್ಧತೆ ನಡೆಸಿ, ಆಂಥ್ರೋಪಾಲಜಿ ವಿಷಯ ಆಯ್ದುಕೊಂಡು ವ್ಯಾಸಂಗ ಆರಂಭಿಸಿದೆ. ಮೊದಲ ಎರಡು ಪ್ರಯತ್ನದಲ್ಲಿ ಫಲ ದೊರೆಯಲಿಲ್ಲ. ಮೂರನೇ ಯತ್ನದಲ್ಲಿ ಯಶಸ್ಸು ಸಿಕ್ಕಿದೆ. ಐಆರ್‌ಎಸ್‌ ಹುದ್ದೆ ದೊರೆಯುವ ನಿರೀಕ್ಷೆಯಿದೆ’ ಎಂದು ಅಮೃತ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು