ಗುರುವಾರ , ಜನವರಿ 23, 2020
28 °C
ಪೌರತ್ವ (ತಿದ್ದುಪಡಿ) ಕಾಯಿದೆ ಜಾರಿಗೆ ಮುಸ್ಲಿಂ ಒಕ್ಕೂಟ ವಿರೋಧ

ವ್ಯಾಪಾರ ವಹಿವಾಟು ಸ್ಥಗಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‌ ಹಾಸನ: ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ (ತಿದ್ದುಪಡಿ) ಕಾಯಿದೆ ತಿದ್ದುಪಡಿಯನ್ನು ಖಂಡಿಸಿ ಬುಧವಾರ ಮುಸ್ಲಿಂ ಹಿತರಕ್ಷಣಾ ಒಕ್ಕೂಟ ಕರೆ ನೀಡಿದ್ದ ಬಂದ್‌ಗೆ ಮುಸ್ಲಿಂ ಸಮುದಾಯದವರು ಬುಧವಾರ ಸ್ವಯಂ ಪ್ರೇರಿತವಾಗಿ ಅಂಗಡಿಗಳ ಬಾಗಿಲು ಮುಚ್ಚಿ ಬೆಂಬಲ ಸೂಚಿಸಿದರು.

ನಗರದ ವಲ್ಲಭಭಾಯಿ ರಸ್ತೆ, ಹಳೆ ಮಟನ್‌ ಮಾರುಕಟ್ಟೆ ರಸ್ತೆ, ಚಿಪ್ಪಿನ ಕಟ್ಟೆ, ಪೆನ್ಷನ್‌ ಮೊಹಲ್ಲಾದಲ್ಲಿ ವರ್ತಕರು ವ್ಯಾಪಾರ ವಹಿವಾಟುಗಳನ್ನು ಮಧ್ಯಾಹ್ನದವರೆಗೆ ಸ್ಥಗಿತಗೊಳಿಸಿದ್ದರು. 

ಅಮಿರ್‌ ಹಸನ್‌ ಕಾಂಪ್ಲೆಕ್ಸ್‌ ಮೈದಾನದಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದರು.  ‌ನಗರದ 50 ಮಸೀದಿಯ ಇಮಾಮ್‌ಗಳು ಪಾಲ್ಗೊಂಡು, ಕೂಡಲೇ ಈ ಕಾಯ್ದೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಅಧ್ಯಕ್ಷ ನಾಸೀರ್‌ ಹುಸೇನ್‌ ರೆಜ್ಜಿ ಮಾತನಾಡಿ, ‘ದೇಶದಲ್ಲಿ ಸಂವಿಧಾನವೇ ಮುಖ್ಯ. ಯಾವುದೇ ಪಕ್ಷದ ಸರ್ಕಾರ ಇರಲಿ ಆಳುವ ಪಕ್ಷಗಳು ಎಲ್ಲಾ ಧರ್ಮದವರನ್ನು ಒಂದೇ ರೀತಿ ನೋಡಬೇಕು. ಧರ್ಮದ ಹೆಸರಿನಲ್ಲಿ ಒಡೆದು ಆಳುವ ನೀತಿ ಅನುಸರಿಸಬಾರದು. ನಾವೆಲ್ಲರೂ ಭಾರತೀಯರು. ತಾಯಿಯನ್ನ ಪ್ರೀತಿಸುವಷ್ಟೇ ಜನ್ಮ ಭೂಮಿಯನ್ನು ಪ್ರೀತಿಸುತ್ತೇವೆ’ ಎಂದರು.

‘ಬೇರೆ ಕಾನೂನುಗಳನ್ನು ಮುಸ್ಲಿಂ ಸಮುದಾಯದ ಮೇಲೆ ಏರಿ ದುರ್ಬಲ ಮಾಡಲು ಹೊರಟಿರುವುದು ಸರಿಯಲ್ಲ. ಹಾಗಾಗಿ ಈ ಕಾಯ್ದೆಯನ್ನು ವಿರೋಧಿಸುತ್ತೇವೆ’ ಎಂದರು.

ಧಾರ್ಮಿಕ ಗುರುಗಳಾದ ಮುಫ್ತಿ, ಜುಬೇರ್‌ ಅಹಮದ್‌, ಫಾರೂಕ್‌, ಸೈಯದ್‌ ತಾಜ್‌, ಹೈದರಾಲಿ ಖಾನ್‌, ಮಹಮದ್‌ ಅನ್ಸರ್‌ ಸಾಹೇಬ್‌ ಭಾಗವಹಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು