ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ, ಹೊಳೆ ಒಡಲು ಸೇರುತ್ತಿರುವ ತ್ಯಾಜ್ಯ

ಅಮಾನಿಕೆರೆ ಹಾಗೂ ಹೇಮಾವತಿ ನಾಲೆ ಪಕ್ಕದಲ್ಲಿ ಬಿಸಾಡುತ್ತಿರುವ ಕಸ, ಸತ್ತ ಪ್ರಾಣಿಗಳ ಕಳೇಬರ
Last Updated 5 ಏಪ್ರಿಲ್ 2021, 2:46 IST
ಅಕ್ಷರ ಗಾತ್ರ

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡುತ್ತಿರುವುದ ರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ. ಜತೆಗೆ ಸತ್ತ ಪ್ರಾಣಿಗಳನ್ನು ಕೆರೆ ಹಾಗೂ ಹೊಳೆ ಸುತ್ತ ಬಿಸಾಡುತ್ತಿರುವ ಕಾರಣ ತ್ಯಾಜ್ಯವು ಕೆರೆ ಒಡಲು ಸೇರಿ ನೀರು ಕಲುಷಿತಗೊಳ್ಳುತ್ತಿದೆ.

ಅಮಾನಿಕೆರೆ ಬಳಿ ಮನೆ, ಹೋಟೆಲ್‌, ಅಂಗಡಿ ತ್ಯಾಜ್ಯ ಹಾಗೂ ಸತ್ತ ಪ್ರಾಣಿಗಳನ್ನು ತಂದು ಹಾಕುತ್ತಿರುವುದ ರಿಂದ ಕೆರೆಯ ಒಡಲು ಸೇರಿನೀರು ಕಲುಷಿತವಾಗುತ್ತಿದೆ. ಈ ನೀರನ್ನು ಜಾನುವಾರುಗಳು ಕುಡಿಯುವುದರಿಂದ ರೋಗರುಜಿನಗಳು ಹರಡುವ ಸಾಧ್ಯತೆ ಇದೆ. ಬಟ್ಟೆ, ಪಾತ್ರೆ ತೊಳೆಯಲು ಸಹ ನೀರು ಬಳಕೆಯಾಗುತ್ತಿದೆ.

ಪಟ್ಟಣದ ಹೊರವಲಯದಲ್ಲಿರುವ ಶ್ರವಣಬೆಳಗೊಳ ರಸ್ತೆ ಪಕ್ಕದಲ್ಲಿಯೂ ಇದೇ ಪರಿಸ್ಥಿತಿ ಇದೆ. ಪ್ಲಾಸ್ಟಿಕ್, ಅನುಪಯುಕ್ತ ವಸ್ತುಗಳನ್ನು ಬಿಸಾಡುತ್ತಿ ದ್ದಾರೆ. ಖಾಲಿ ನಿವೇಶನದಲ್ಲಿಯೂ ಪರಿಸ್ಥಿತಿ ಇದಕ್ಕಿಂತಭಿನ್ನವಾಗಿಲ್ಲ. ಹೇಮಾವತಿ ಎಡದಂಡೆ ನಾಲೆಯಲ್ಲಿ ನೀರು ಹರಿಯುವಾಗ ಮತ್ತು ನೀರು ನಿಲ್ಲಿಸಿದ ಸಂದರ್ಭದಲ್ಲಿಯೂ ತ್ಯಾಜ್ಯ ಎಸೆಯುವುದು ಸಾಮಾನ್ಯವಾಗಿದೆ. ನಾಲೆ ಸಮೀಪ ಕಾಣುವ ತ್ಯಾಜ್ಯದ ರಾಶಿಯೇ ಇದಕ್ಕೆ ಸಾಕ್ಷಿ.

ಅಲ್ಲದೇ ನಾಲೆ ಏರಿಯ ಪಕ್ಕದಲ್ಲಿಯೂ ಸತ್ತ ಪ್ರಾಣಿಗಳನ್ನು ತಂದು ಹಾಕಲಾಗುತ್ತಿದ್ದು, ಮೃತದೇಹ ಕೊಳೆತು ಕೆಟ್ಟ ವಾಸನೆ ಬರುವುದ
ರಿಂದ ಜನರು ಮೂಗು ಮುಚ್ಚಿ ಕೊಂಡು ಸಂಚರಿಸಬೇಕಾದ ಸ್ಥಿತಿ ಇದೆ. ಇದರ ಜತೆಗೆ ನಾಯಿಗಳ ಉಪಟಳ ಹೆಚ್ಚಾಗಿದೆ.

ಅಂಗಡಿ, ಹೋಟೆಲ್‌ ಮಾಲೀಕರು ಹಾಗೂ ವಾರ್ಡ್‌ ಜನರು ವಾಹನಗಳಲ್ಲಿ ರಾತ್ರಿ ವೇಳೆ ಕಸವನ್ನು ತಂದು ನಾಲೆಗೆ ಮತ್ತು ಏರಿ ಮೇಲೆ ಬಿಸಾಡುತ್ತಾರೆ. ಕೆಲವರು ನಾಲೆಯ ಪಕ್ಕದಲ್ಲಿ ವಾಮಾಚಾರ ಮಾಡುತ್ತಾರೆ. ನಾಲೆಯ ಪಕ್ಕದ ಉದ್ಯಾನದಲ್ಲಿ ವಾಯುವಿಹಾರ ಮಾಡುವವರಿಗೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ.

ಚನ್ನರಾಯಪಟ್ಟಣದಲ್ಲಿ 23 ವಾರ್ಡ್‌ಗಳಿದ್ದು, 50 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಹೊಸ ಬಡಾವಣೆಗಳು ತಲೆ ಎತ್ತಿವೆ. ಯಾವುದೇ ಬಡಾವಣೆಗೆ ಹೋದರು ಅಲ್ಲಲ್ಲಿ ಕಸದ ರಾಶಿಸ್ವಾಗತಿಸುತ್ತದೆ.

‘ಕಸ ಹಾಕಿದರೆ ದಂಡ ವಿಧಿಸಲಾಗುತ್ತದೆ’ ಎಂಬ ಫಲಕ ಹಾಕಿದ್ದರೂ ಅದೇ ಜಾಗದಲ್ಲಿ ಕಸ ಹಾಕುವುದು ಕಂಡು ಬರುತ್ತಿದೆ. ರಾತ್ರಿ ಮತ್ತು ಮುಂಜಾನೆ ಕೆಲವರು ರಸ್ತೆ ಪಕ್ಕದಲ್ಲಿ ಕಸ ಬಿಸಾಡಿ ಹೋಗುತ್ತಿದ್ದಾರೆ.

ಮನೆ ಮನೆಗಳಿಂದ ಕಸ ಸಂಗ್ರಹಿಸಲು 8 ಟಿಪ್ಪರ್‌ಗಳ ಪೈಕಿ 4 ಆಟೊ ಟಿಪ್ಪರ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು, ಎಲ್ಲಾ ವಾರ್ಡ್‌ಗಳಿಂದ ಕಸ ಸಂಗ್ರಹ ಆಗುತ್ತಿಲ್ಲ. ಮೂರು ದಿನಕ್ಕೊಮ್ಮೆ ಮನೆ ಬಳಿಗೆ ಬಂದು ಕಸ ಸಂಗ್ರಹಿಸುತ್ತವೆ. ನಿತ್ಯ ಕಸ ಸಂಗ್ರಹ ವಾಹನ ಬಂದರೆ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುತ್ತಾರೆ ಜನತೆ.

ಪುರಸಭೆ ವ್ಯಾಪ್ತಿಯಲ್ಲಿ ಸಂಗ್ರಹಿಸಿದ ತ್ಯಾಜ್ಯವನ್ನು ತಾಲ್ಲೂಕು ಕೇಂದ್ರದಿಂದ 12 ಕಿ.ಮೀ. ದೂರದಲ್ಲಿರುವ ನಲ್ಲೂರು ಗ್ರಾಮದ ಸಮೀಪ 22 ಎಕರೆ ಪ್ರದೇಶದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಹಸಿ ಕಸ ಮತ್ತು ಒಣ ಕಸವನ್ನು ಪ್ರತ್ಯೇಕವಾಗಿ ವಿಂಗಡಿಸಲಾಗುತ್ತಿದೆ. ಹಸಿ ಕಸದಿಂದ ಸಾವಯವ ಗೊಬ್ಬರ ತಯಾರಿಸಲಾಗುತ್ತಿದೆ ಎನ್ನುತ್ತಾರೆ ಪುರಸಭೆ ಅಧಿಕಾರಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT