ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರಸಭೆ ಅಧಿಕಾರ ಚುಕ್ಕಾಣಿ ಯಾವ ಪಕ್ಷಕ್ಕೆ?

Last Updated 1 ಸೆಪ್ಟೆಂಬರ್ 2018, 11:08 IST
ಅಕ್ಷರ ಗಾತ್ರ

ಅರಸೀಕೆರೆ: ನಗರಸಭೆಯ ಚುನಾವಣೆ ಹಿಂದೆಯೇ ಈ ಎಲ್ಲರ ಚಿತ್ರ ಫಲಿತಾಂಶದತ್ತ ತಿರುಗಿದ್ದು, ನಗರಸಭೆಯ ಆಡಳಿತ ಚುಕ್ಕಾಣಿ ಯಾವ ಪಕ್ಷಕ್ಕೆ ಎಂಬ ಕುತೂಹಲ ಕೆರಳಿದೆ.

ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 69.32ರಷ್ಟು ಮತದಾನ ಆಗಿದೆ. 31ವಾರ್ಡ್‌ಗಳಿಗೆ ಚುನಾವಣೆ ನಡೆಸಿದ್ದು, ಗೆಲುವಿನ ಲೆಕ್ಕಾಚಾರ ಪ್ರಮುಖ ಪಕ್ಷಗಳಲ್ಲಿ ಆರಂಭವಾಗಿದೆ.

ಸ್ಪಷ್ಟಬಹುಮತ ಪಡೆದು ಮರಳಿ ಅಧಿಕಾರ ಹಿಡಿಯುವ ಲೆಕ್ಕಾಚಾರದಲ್ಲಿ ಜೆಡಿಎಸ್‌ ಇದೆ. ಅಗತ್ಯ ಬಿದ್ದರೆ ಪಕ್ಷೇತರರ ಬೆಂಬಲ ಪಡೆಯುವ ನಿಟ್ಟಿನಲ್ಲಿಯೂ ಚಿಂತನೆ ನಡೆದಿದೆ ಎನ್ನುತ್ತಾರೆ ಮುಖಂಡರೊಬ್ಬರು.

ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಪ್ರತೀ ವಾರ್ಡ್‌ನಲ್ಲಿಯೂ ಪ್ರಚಾರ ನಡೆಸಿದ್ದು, ಪ್ರಚಾರದ ಮುಂಚೂಣಿಯಲ್ಲಿ ಇದ್ದರು.

ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪಕ್ಷದ ತಾಲ್ಲೂಕು ಮುಖಂಡರು ಮತ್ತು ಕೆಪಿಸಿಸಿ ಉಪಾಧ್ಯಕ್ಷ ಬಿ. ಶಿವರಾಂ, ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿ ಹಲವು ಪ್ರಚಾರ ನಡೆಸಿದ್ದರು.

ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳನ್ನು ಆಧರಿಸಿ ಇವರು ಪ್ರಚಾರ ನಡೆಸಿದ್ದಾರೆ. ಹಿನ್ನೆಲೆಯಲ್ಲಿ ಗೆಲುವಿನ ಲೆಕ್ಕಾಚಾರದ ಜೊತೆಗೆ ಪಕ್ಷೇತರರ ಒಲವು ಯಾರ ಕಡೆಗೆ ಇರಬಹುದು ಎಂಬ ಅನಿಸಿಕೆಯೂ ಫಲಿತಾಂಶದ ಕುತೂಹಲವನ್ನು ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT