ಹಾಸನ: ಅರಸೀಕೆರೆ ತಾಲ್ಲೂಕಿನ ಆಲದಹಳ್ಳಿಯಲ್ಲಿ ಶಿವರಾತ್ರಿ ಪ್ರಯುಕ್ತ ಆಯೋಜಿಸಿರುವ ವಿಶೇಷ ಕ್ರಿಕೆಟ್
ಟೂರ್ನ್‌ಮೆಂಟ್ ವಿಜೇತರಿಗೆ ಟ್ರೋಫಿ ಜತೆಗೆ ಜೋಡಿ ಟಗರು, ಎರಡು ವಿಸ್ಕಿ ಬಾಟಲ್ ನೀಡಲಾಗುತ್ತದೆ.
ಸಮಾಧಾನಕರ ಬಹುಮಾನವಾಗಿ ಕೋಳಿಗಳನ್ನು ಕೊಡಲಾಗುತ್ತದೆ.

ಫೆ.10, 11, 12ರ ವರೆಗೆ ನಡೆಯಲಿರುವ ‘ಜೋಡಿಮರಿ ಕ್ರಿಕೆಟ್ ಟೂರ್ನಿ’ ಪಂದ್ಯಾವಳಿಯನ್ನು ಗ್ರಾಮದ ಯುವಕರು ಆಯೋಜಿಸಿದ್ದಾರೆ. ಟೂರ್ನಿಯ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಆಗಿದ್ದು, ‘ಜೋಡಿ ಕುರಿಗಾಗಿ ಕಾದಾಟ’ ಎಂದು ಕಮೆಂಟ್ ಮಾಡಿದ್ದಾರೆ.

‘ಜೋಡಿ ಮರಿ ಕ್ರಿಕೆಟ್ ಟೂರ್ನಿ’ಯಲ್ಲಿ ವಿಜೇತ ತಂಡಕ್ಕೆ ಟ್ರೋಫಿ ಜತೆಗೆ ಜೋಡಿ ಟಗರು ಮತ್ತು ಎರಡು ವಿಸ್ಕಿ
ಬಾಟಲಿ, ರನ್ನರ್ ಅಪ್ ತಂಡ ಹಾಗೂ ತೃತೀಯ ಸ್ಥಾನ ಪಡೆದ ತಂಡಕ್ಕೆ ಒಂದು ಕುರಿ ಜತೆಗೆ ವಿಸ್ಕಿ ಬಾಟಲಿ,
ನಾಲ್ಕನೇ ಸ್ಥಾನ ಪಡೆಯುವ ತಂಡಕ್ಕೆ ನಾಲ್ಕು ಕೋಳಿ ಕೊಡಲಾಗುತ್ತೆ. ಪ್ರವೇಶ ಶುಲ್ಕ ₹1,200. ಬಹುಮಾನಗಳ ಕೆಳಗೆ ದಾನಿಗಳ ಹೆಸರನ್ನು ಪೋಸ್ಟರ್‌ನಲ್ಲಿ ಹಾಕಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.