ವಿಶೇಷ ವರದಿ
ಕೊಣನೂರು: ತಾಲ್ಲೂಕಿನ ಕೆರಗೋಡು ಗ್ರಾಮದಲ್ಲಿ ಮೂರು ತಿಂಗಳ ಹಿಂದೆಯಷ್ಟೇ ದಲಿತರಿಗೆ ಹೇರಿದ್ದ ಬಹಿಷ್ಕಾರದ ನೆನಪು ಮಾಸುವ ಮೊದಲೇ ಇಂಥದ್ದೇ ಇನ್ನೊಂದು ಪ್ರಕರಣ ನಡೆದಿದೆ. ಚಿಕ್ಕಪುಟ್ಟ ವೈಷಮ್ಯಗಳನ್ನೇ ಮುಂದಿಟ್ಟುಕೊಂಡು ಇದೀಗ ಸಮೀಪದ ಸಿದ್ದಾಪುರ ಗ್ರಾಮದ ಕುಟುಂಬವನ್ನು ಬಹಿಷ್ಕರಿಸಿರುವ ಸವರ್ಣೀಯರು ಅನಿಷ್ಟ ಪದ್ದತಿಗೆ ಮತ್ತೆ ಮತ್ತೆ ಮಣೆಹಾಕಿದಂತಾಗಿದೆ.

ಸಿದ್ದಾಪುರದಲ್ಲಿ ಕುಲುವಾಡಿಕೆ ಕೆಲಸ ಮಾಡಲು ನಿರಾಕರಿಸಿದ್ದನ್ನೇ ನೆಪವಾಗಿಸಿಕೊಂಡು ದಲಿತ ಕುಟುಂ ಬಗಳಿಗೆ ಗ್ರಾಮದ ಯಾವುದೇ ಸೌಲಭ್ಯ ಉಪಯೋಗಿಸದಂತೆ ನಿರ್ಬಂಧ ಹೇರಲಾಗಿದೆ. ಒಂದು ವೇಳೆ ಯಾರ ದರೂ ದಲಿತರಿಗೆ ಸಹಕಾರ ನೀಡಿದರೆ ಸಾವಿರದ ನೂರು ರೂಪಾಯಿ ದಂಡ ವಿಧಿಸುವುದಾಗಿ ಬೆದರಿಕೆಯನ್ನೂ ಹಾಕಲಾಗಿದೆ. ಇದರಿಂದ ಬೇಸತ್ತು ಹೋಗಿರುವ ದಲಿತ ಮಹಿಳೆಯರು ಮತ್ತು ಮಕ್ಕಳಲ್ಲಿ ಆತಂಕ ಸೃಷ್ಟಿಸಿದೆ.

ಗ್ರಾಮದಲ್ಲಿ ಒಕ್ಕಲಿಗರು, ಮುಸ್ಲಿ ಮರು, ಮಡಿವಾಳರು, ವಿಶ್ವಕರ್ಮ ಜನಾಂಗ ಹಾಗೂ ಸವಿತಾ ಸಮಾಜ ಸೇರಿ 300 ಕುಟುಂಬಗಳಿದ್ದು, ಇದ ರಲ್ಲಿ ದಲಿತರ 9 ಕುಟುಂಬ ಮಾತ್ರ ಸಾಮಾಜಿಕ ಬಹಿಷ್ಕಾರಕ್ಕೆ ತುತ್ತಾ ಗಿವೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ 17 ಸವರ್ಣೀಯರ ವಿರುದ್ದ ದೂರು ದಾಖಲಾಗಿದೆ.

3 ತಿಂಗಳ ಹಿಂದೆ ನಡೆದ ಕೆರ ಗೋಡು ದಲಿತರ ಬಹಿಷ್ಕಾರ ಪ್ರಕ ರಣ ಇನ್ನೂ ನೆನಪಿನಿಂದ ಮರೆಯಾ ಗಿಲ್ಲ. ಇಂತಹ ಅನಿಷ್ಟ ಪದ್ದತಿಗಳ ವಿರುದ್ದ ಕಾನೂನು ಇದ್ದರೂ ಪ್ರಯೋಜನ ಕಾಣುತ್ತಿಲ್ಲ. ಪ್ರಕರಣಗಳು ಮರು ಕಳಿಸಿ ಮನ ಸ್ಸುಗಳು ಒಡೆದು ಹೋಗುತ್ತಿವೆ.

ಕಗ್ಗಂಟಾದ ಸಮಸ್ಯೆ: ಕೊಣನೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಈಗಾಗಲೇ 17 ಸವರ್ಣೀಯರ ವಿರುದ್ದ ದೂರು ದಾಖಲಾಗಿದೆ. ಆದರೆ, ಶಾಂತಿ ಮತ್ತು ಸುವ್ಯವಸ್ಥೆ ಗಮನದಲ್ಲಿ ಇಟ್ಟು ಯಾರನ್ನೂ ಬಂಧಿಸಿಲ್ಲ. ಇದರ ಕಿಚ್ಚು ಹೆಚ್ಚಾಗುವು ದನ್ನು ಮನಗಂಡು ಸದ್ಯದ ಮಟ್ಟಿಗೆ ಪೊಲೀಸ್ ಭದ್ರತೆ ಒದಗಿಸಿ ಪರಿಸ್ಥಿತಿ ಯನ್ನು ಹತೋಟಿಗೆ ತರಲಾಗಿದೆಯೇ ಹೊರತು, ಎರಡೂಕಡೆಗಳ ಬಿಗಿಪಟ್ಟಿನಿಂದಾಗಿ ಕಗ್ಗಂಟಾಗಿದೆ.

ಬಾರದ ಉಸ್ತುವಾರಿ ಸಚಿವ: 3 ತಿಂಗಳ ಹಿಂದೆ ಕೆರೆಗೋಡಿ ನಲ್ಲಿ ನಡೆದ ದಲಿತರ ಬಹಿಷ್ಕಾರ ಪ್ರಕರ ಣದ ಸಂದರ್ಭದಲ್ಲಿಅಲ್ಲಿಗೆ ದಿಢಿ ೀರ್ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ ಇದುವ ರೆಗೂ ಇತ್ತ ಮುಖ ಮಾಡಿಲ್ಲ ಎಂಬುದು ಇಲ್ಲಿನ ಗ್ರಾಮಸ್ಥರ ಬೇಸರಕ್ಕೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.