ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: 110 ವಿಶೇಷ ಹೆಚ್ಚುವರಿ ಸಾರಿಗೆ ಕಾರ್ಯಾಚರಣೆ

Published 23 ಜನವರಿ 2024, 14:26 IST
Last Updated 23 ಜನವರಿ 2024, 14:26 IST
ಅಕ್ಷರ ಗಾತ್ರ

ಹಾವೇರಿ: ವಾರಾಂತ್ಯದ ರಜೆ ದಿನಗಳಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 110 ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ಜನವರಿ 26, 27 ಹಾಗೂ 28ರ ರಜೆಗಳನ್ನು ಉಪಯೋಗಿಸಿಕೊಂಡು, ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ ಸಂಸ್ಥೆಯ ವ್ಯಾಪ್ತಿಯಲ್ಲಿನ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳಿಂದ ರಜೆ ಅವಧಿಯಲ್ಲಿ ಸುಮಾರು 110 ವಿಶೇಷ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುತ್ತಿದೆ.

ರಜೆ ಅವಧಿ ಮುಗಿದ ಮೇಲೆ ಜ.28ರಂದು ಮತ್ತು ನಂತರದ ದಿನಗಳಂದು ಪ್ರಮುಖ ಸ್ಥಳಗಳಿಂದ ಜನದಟ್ಟಣೆಗೆ ಅನುಗುಣವಾಗಿ ಹೆಚ್ಚುವರಿ ಸಾರಿಗೆಗಳನ್ನು ಕಾರ್ಯಾಚರಣೆಗೊಳಿಸಲಾಗುವುದು. ವಿಶೇಷ ಹೆಚ್ಚುವರಿ ಸಾರಿಗೆಗಳ ಸದುಪಯೋಗ ಪಡೆದುಕೊಳ್ಳುವಂತೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದುರ್ಗಾದೇವಿ ಜಾತ್ರೆ: ಉಡಿ ತುಂಬುವ ಕಾರ್ಯಕ್ರಮ
ಸವಣೂರು: ತಾಲ್ಲೂಕಿನ ಹುರಳಿಕುಪ್ಪಿ ಗ್ರಾಮದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಪ್ರಾತಃಕಾಲ ದೇವಿಗೆ ಅಭಿಷೇಕ ಪುಷ್ಪಾರ್ಚನೆ ಸೇರಿದಂತೆ ಉಡಿ ತುಂಬುವ ಕಾರ್ಯಕ್ರಮ ವಿಜೃಂಭನೆಯಿಂದ ಜರುಗಿತು. ಜಾತ್ರಾ ಮಹೋತ್ಸವದ ಅಂಗವಾಗಿ ದುರ್ಗಾದೇವಿ ಉತ್ಸವ ಮೂರ್ತಿ ಮೆರವಣಿಗೆ ಡೊಳ್ಳು ಭಜನೆ ಜಾಂಜ್‌ಮೇಳ ಸೇರಿದಂತೆ ಸಕಲ ವಾದ್ಯವೈಭವದೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸುತ್ತಿದ್ದಂತೆ ಭಕ್ತರು ರಥಬೀದಿ ಉದ್ದಕ್ಕೂ ದೇವಿಯ ದರ್ಶನ ಪಡೆದು ಪುನೀತರಾದರು. ನಂತರ ಮೇಡ್ಲೆರೇಶ್ವರ ದೇವಸ್ಥಾನದ ಕಮಿಟಿ ವತಿಯಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಿತು. ದೇವಿಯ ದರ್ಶನ ಪಡೆಯಲು ಬಂದ ಭಕ್ತರು ಹಣ್ಣು ಕಾಯಿ ನೈವೇದ್ಯ ಸಲ್ಲಿಸುವ ಮೂಲಕ ತಮ್ಮ ಹರಕೆ ಸಲ್ಲಿಸಿದರು. ಜಂಗಿ ಕುಸ್ತಿ: ದುರ್ಗಾದೇವಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರದವರೆಗೆ ರಾಜ್ಯಮಟ್ಟದ ಬಯಲು ಜಂಗಿ ಕುಸ್ತಿಗಳು ನಿರಂತರವಾಗಿ ನಡೆಯಲಿವೆ. ಹೊನ್ನಪ್ಪ ಕೊಳ್ಳವರ ಬರಮಪ್ಪ ಕಲಾದಗಿ ಹೊನ್ನಪ್ಪ ಕೊಳ್ಳವರ ಅಶೋಕ ಬಿಜ್ಜೂರ ಮಾಲತೇಶ ಪೂಜಾರ ನಿಂಗಪ್ಪ ಮತ್ತೂರು ಫಕೀರೇಶ ಪೂಜಾರ ನಿಂಗಪ್ಪ ಸಂದ್ಲಿ ನಿಂಗಪ್ಪ ಯರೆಸೀಮಿ. ನಿಂಗಪ್ಪ ಅಜ್ಜಣ್ಣವರ ಸುರೇಶ ಅಜ್ಜಣ್ಣವರ ಹನುಮಂತಪ್ಪ ಬಂಡಿವಡ್ಡರ ಮಂಜು ಕೊಪ್ಪದ ರಾಮಣ್ಣ ವೈಯ್ಯಾಳಿ ಬಸವಂತಪ್ಪ ಭಜಂತ್ರಿ ಉಡಚಪ್ಪ ಅಜ್ಜಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT