ಹಾವೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನದ ಚುನಾವಣೆಗೆ ಒಟ್ಟು ನಾಲ್ವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ. ನಾಲ್ವರು ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ವಾಪಸ್ ಪಡೆದಿದ್ದಾರೆ.

ರಾಣೆಬೆನ್ನೂರಿನ ವೆಂಕಟೇಶ ಈಡಿಗರ, ರಾಣೆಬೆನ್ನೂರಿನ ಪ್ರಭುಲಿಂಗಪ್ಪ ಹಲಗೇರಿ, ಹಾನಗಲ್ ತಾಲ್ಲೂಕು ಸಾಂವಸಗಿ ಗ್ರಾಮದ ಮಾರುತಿ ಶಿಡ್ಲಾಪುರ ಹಾಗೂ ಬ್ಯಾಡಗಿಯ ಲಿಂಗಯ್ಯ ಹಿರೇಮಠ ಅವರು ಅಂತಿಮ ಕಣದಲ್ಲಿ ಉಳಿದಿದ್ದಾರೆ.

ರಟ್ಟೀಹಳ್ಳಿಯ ಮಲ್ಲಿಕಾರ್ಜುನ ಹೆರಕಾರ, ರಾಣೆಬೆನ್ನೂರಿನ ರಾಮಪ್ಪ ನಂದಿಹಳ್ಳಿ, ಹಾವೇರಿಯ ಸಿದ್ಧೇಶ್ವರ ಕಾಡದೇವರಮಠ, ರಾಣೆಬೆನ್ನೂರಿನ ಹಾಲೇಶ ಶಿವಪ್ಪನವರ ಈ ನಾಲ್ವರೂ ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆಯನ್ನು ಸೋಮವಾರ ಹಿಂತೆಗೆದುಕೊಂಡು ಚುನಾವಣೆಯಿಂದ ಹಿಂದೆ ಸರಿದರು.ಏ. 12ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕಡೆಯ ದಿನವಾಗಿತ್ತು.

ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಒಟ್ಟು 9 ಆಕಾಂಕ್ಷಿಗಳಿಂದ ಒಟ್ಟು 15 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ 8 ಕ್ರಮಬದ್ಧಗೊಂಡು, ಕೆ.ಎಸ್. ನಾಗರಾಜ ಅವರು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿತ್ತು. ಮೇ 9ರಂದು ಚುನಾವಣೆ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.