ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುತ್ತಲ: ಎರಡು ಬಾರಿ ಕಾರು ಸುಟ್ಟ ದುಷ್ಕರ್ಮಿ

Published 25 ಜೂನ್ 2024, 15:26 IST
Last Updated 25 ಜೂನ್ 2024, 15:26 IST
ಅಕ್ಷರ ಗಾತ್ರ

ಗುತ್ತಲ: ಇಲ್ಲಿಗೆ ಸಮೀಪದ ಹಾವನೂರ ಗ್ರಾಮದ ಮಹಬೂಬಲಿ ಶಿರಹಟ್ಟಿ ಎಂಬುವವರಿಗೆ ಸೇರಿದ ಇಕೋ ವಾಹನವನ್ನು ಸೊಮವಾರ ಮಧ್ಯರಾತ್ರಿ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿ ಸುಡಲು ಪ್ರಯತ್ನಿಸಿ ವಿಫಲವಾಗಿರುವ ಘಟನೆ ನಡೆದಿದೆ.

ಗ್ರಾಮದ ವಿಜಯ ಆಯಿಲ್ ಮಿಲ್‌ನ ಆವರಣದಲ್ಲಿ ನಿಲುಗಡೆ ಮಾಡಿದ್ದ ಇಕೋ ವಾಹನ ಸುಡಲು ಬಂದ ದುಷ್ಕರ್ಮಿ ಕಲ್ಲಿನಿಂದ ಬಲವಾಗಿ ಗ್ಲಾಸ್‌ಗೆ ಹೊಡೆದಿದ್ದಾನೆ. ಶಬ್ದಕ್ಕೆ ಮಿಲ್ ಕಾವಲುಗಾರರು ಎಚ್ಚರಗೊಂಡು ಕೂಗಾಡಿದ್ದಾರೆ. ದುಷ್ಕರ್ಮಿ ಪೆಟ್ರೊಲ್ ಸುರಿದು ಬೆಂಕಿ ಹಚ್ಚಿ ಓಡಿ ಹೊಗಿದ್ದಾನೆ. ಆದರೆ ಕಾರು ಸ್ವಲ್ಪ ಪ್ರಮಾಣದಲ್ಲಿ ಸುಟ್ಟಿದೆ.

‘ಇವರ ಏಳಿಗೆ ಸಹಿಸದ ದುಷ್ಕರ್ಮಿ ಒಬ್ಬರು 2023ರಲ್ಲಿ ಇವರ ಅಂಗಡಿಯನ್ನು ಕಳ್ಳತನ ಮಾಡಿದ್ದರು. 2024 ಜನವರಿ 11 ರಂದು ಮಧ್ಯರಾತ್ರಿ ಇವರ ಮನೆ ಎದುರಿಗೆ ನಿಲ್ಲಿಸಿದ್ದ ಮಾರುತಿ ಓಮಿನಿ ವಾಹನಕ್ಕೆ ಬೆಂಕಿ ಹಚ್ಚಿದ್ದರು ವಾಹನ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಕಾರು ಬಾಡಗಿ ಓಡಿಸಿ ಜೀವನ ಸಾಗಿಸುತ್ತಿದ್ದ ಮಹಬೂಬಲಿ ಸಾಲ ಮಾಡಿ 4 ತಿಂಗಳದ ಹಿಂದೆ ಇಕೋ ವಾಹನ ಖರಿದಿಸಿದ್ದಾರೆ. ಮನೆ ಎದುರಿಗೆ ಬೇಡವೆಂದು ಸುರಕ್ಷಿತ ಸ್ಥಳವೆಂದು ವಿಜಯ ಆಯಿಲ್ ಮಿಲ್‌ನಲ್ಲಿ ನಿಲುಗಡೆ ಮಾಡಿದ್ದರು. ಆದರೆ ಅಲ್ಲಿಯೂ ಸಹ ದುಷ್ಕರ್ಮಿಗಳು ಸುಡಲು ಯತ್ನಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಗುತ್ತಲ ಪಿಎಸ್‌ಐ ಮಹಾಂತೇಶ ಎಂ.ಎಂ. ಪರೀಸಿಲಿಸಿ ಆರೋಪಿಯನ್ನು ಪತ್ತೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೊಮವಾರ ಸುಡಲು ಯತ್ನಿಸಿದ ಇಕೋ ವಾಹನ
ಸೊಮವಾರ ಸುಡಲು ಯತ್ನಿಸಿದ ಇಕೋ ವಾಹನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT