ಶನಿವಾರ, ಸೆಪ್ಟೆಂಬರ್ 25, 2021
27 °C

ತಲೆಕೂದಲಲ್ಲಿ ಮೂಡಿದ ಧ್ವಜ ಸ್ತಂಭ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರಾಣೆಬೆನ್ನೂರು: ಸ್ವಾತಂತ್ರ್ಯ ದಿನಾಚರಣೆ ಬಂದರೆ ಇಲ್ಲೊಬ್ಬರಿಗೆ ಎಲ್ಲಿಲ್ಲದ ಸಡಗರ. ಈ ಬಾರಿಯೂ ತಲೆಕೂದಲುಗಳನ್ನು ಧ್ವಜ ಸ್ತಂಭದ ಆಕಾರದಲ್ಲಿ ಕತ್ತರಿಸಿದ ದೇಶಾಭಿಮಾನ ಮೆರೆದಿದ್ದಾರೆ.

ವೃತ್ತಿಯಲ್ಲಿ ಕ್ಷೌರಿಕರಾದರೂ ಗೃಹ ರಕ್ಷಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗಾಂಧಿ ಗಲ್ಲಿಯ ನಿವಾಸಿ ಜಗದೀಶ ನಿಂಗಪ್ಪ ಹಡಪದ, ಪ್ರತಿ ಬಾರಿ ಸ್ವಾತಂತ್ರ್ಯ ಉತ್ಸವ ದಿನಾಚರಣೆಯಂದು ಹೊಸ ಬಗೆಯ ವಿಶೇಷದಿಂದ ಗಮನ ಸೆಳೆಯುತ್ತಿದ್ದಾರೆ.

ತಲೆಯ ಕೂದಲುಗಳಲ್ಲಿ ಧ್ವಜ, ಭಾರತ ನಕಾಶೆ, ಸ್ವಾತಂತ್ರ್ಯೋತ್ಸವ, ಹಿಂದೂಸ್ಥಾನ, ಜೈ ಹಿಂದ್ ಸೇರಿದಂತೆ ವಿವಿಧ ಘೊಷಣೆಗಳನ್ನು ಬರೆದು ದೇಶಾಭಿಮಾನ ಮೂಡಿಸುತ್ತಾರೆ. ಈ ಬಾರಿ ತಲೆಯ ಹಿಂಭಾಗದಲ್ಲಿ ರಾಷ್ಟ್ರಧ್ವಜ ಹಾಗೂ 75ರ ಸಂಭ್ರಮ ಎಂಬ ಶೀರ್ಷಿಕೆಯನ್ನು ಮೂಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು