ಹಾವೇರಿ: ಮುಷ್ಕರದಲ್ಲಿ ಸಕ್ರಿಯವಾಗಿ ಪಾಲ್ಗೊಂಡು, ಕರ್ತವ್ಯಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಹಾವೇರಿ ವಿಭಾಗದಿಂದ 38 ನೌಕರರನ್ನು ಬೇರೆ ವಿಭಾಗಗಳಿಗೆ ಹಾಗೂ ಹಾವೇರಿ ವಿಭಾಗೀಯ ಕಚೇರಿಯಿಂದ 17 ಆಡಳಿತಾತ್ಮಕ ಸಿಬ್ಬಂದಿಯನ್ನು ಜಿಲ್ಲೆಯ ಇತರ ಡಿಪೋಗಳಿಗೆ ವರ್ಗಾವಣೆ ಮಾಡಲಾಗಿದೆ.

28 ಚಾಲಕರು ಮತ್ತು ನಿರ್ವಾಹಕರು ಹಾಗೂ 10 ತಾಂತ್ರಿಕ ಸಿಬ್ಬಂದಿ ಸೇರಿದಂತೆ ಒಟ್ಟು 38 ನೌಕರರನ್ನು ಹಾವೇರಿ ವಿಭಾಗದಿಂದ ಬೆಳಗಾವಿ, ಉತ್ತರಕನ್ನಡ, ಚಿಕ್ಕೋಡಿ, ಗದಗ, ಧಾರವಾಡ ಮುಂತಾದ ವಿಭಾಗ/ ಘಟಕಗಳಿಗೆ ವರ್ಗಾವಣೆ ಮಾಡಿ ವ್ಯವಸ್ಥಾಪಕ ನಿರ್ದೇಶಕರು ಆದೇಶ ಹೊರಡಿಸಿದ್ದಾರೆ.

ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ಆಡಳಿತಾತ್ಮಕ ಕಾರಣಗಳ ಮೇರೆಗೆ ವರ್ಗಾವಣೆ ಮಾಡಲಾಗಿದೆ. ನೌಕರರು ವರ್ಗಾಯಿಸಿದ ಸ್ಥಳಗಳಲ್ಲಿ ಹಾಜರಾದ ನಂತರವೇ ವರ್ಗಾವಣೆ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಾರೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ಹಾವೇರಿ ವಿಭಾಗೀಯ ಕಚೇರಿಯ ಲೆಕ್ಕಪತ್ರ ವಿಭಾಗ, ಉಗ್ರಾಣ, ಕಾರ್ಯಾಗಾರಗಳಿಂದ ಒಟ್ಟು 17 ನೌಕರರನ್ನು ಹಿರೇಕೆರೂರು, ರಾಣೆಬೆನ್ನೂರು, ಹಾನಗಲ್, ಸವಣೂರು ಘಟಕಗಳಿಗೆ ವರ್ಗಾವಣೆ ಮಾಡಲಾಗಿದೆ. ಈ ನೌಕರರು ಕೂಡಲೇ ವರ್ಗಾಯಿಸಿದ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ’ ಎಂದು ವಾ.ಕ.ರ.ಸಾ.ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ತಿಳಿಸಿದರು.

ಸಂಚಾರ ಆರಂಭಿಸಿದ 10 ಬಸ್ಗಳು:

7 ಚಾಲಕರು ಮತ್ತು 7 ನಿರ್ವಾಹಕರು ಶನಿವಾರ ಕರ್ತವ್ಯಕ್ಕೆ ಹಾಜರಾದರು. 10 ಟ್ರೈನಿ ಸಿಬ್ಬಂದಿ ಸೇರಿದಂತೆ ಒಟ್ಟಾರೆ 50 ನೌಕರರು ಕರ್ತವ್ಯಕ್ಕೆ ಮರಳಿದರು. ಈ ಹಿನ್ನೆಲೆಯಲ್ಲಿ ಹಾವೇರಿ ವಿಭಾಗದಲ್ಲಿ ಶನಿವಾರ ಒಟ್ಟು 10 ಸಾರಿಗೆ ಬಸ್ಗಳು ಸಂಚಾರ ಆರಂಭಿಸಿದವು.

‘ಹಾವೇರಿ ಘಟಕದಿಂದ 2, ರಾಣೆಬೆನ್ನೂರು ಘಟಕದಿಂದ 4, ಸವಣೂರು ಘಟಕದಿಂದ 2, ಬ್ಯಾಡಗಿ ಘಟಕದಿಂದ 2 ಬಸ್ಗಳು ವಿವಿಧ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ದವು. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಪ್ರತಿ ಬಸ್ನಲ್ಲಿ ಕೆಎಸ್ಆರ್ಟಿಸಿ ಟ್ರಾಫಿಕ್ ಇನ್ಸ್ಪೆಕ್ಟರ್ ಮತ್ತು ಪೊಲೀಸ್ ಕಾನ್ಸ್ಟೆಬಲ್ ಕೂಡ ಪ್ರಯಾಣ ಮಾಡುತ್ತಿದ್ದಾರೆ. ಎಲ್ಲೂ ಅಹಿತಕರ ಘಟನೆ ನಡೆದಿಲ್ಲ’ ಎಂದು ಹಾವೇರಿ ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂಬಾಬಾ ಮುದ್ದೇಬಿಹಾಳ ತಿಳಿಸಿದರು.

ಮ್ಯಾಕ್ಸಿಕ್ಯಾಬ್ ಸೇವೆ ಮುಂದುವರಿಕೆ:

ಮುಷ್ಕರದ ಹಿನ್ನೆಲೆಯಲ್ಲಿ ನಿಯೋಜಿಸಿರುವ ಮ್ಯಾಕ್ಸಿಕ್ಯಾಬ್ ಮತ್ತು ಖಾಸಗಿ ಬಸ್ಗಳು ಶನಿವಾರ ಕೂಡ ಜಿಲ್ಲೆಯಲ್ಲಿ ಸಂಚರಿಸಿದವು. ಹಾವೇರಿ ಸಾರಿಗೆ ಬಸ್ ನಿಲ್ದಾಣದಲ್ಲೇ ಮ್ಯಾಕ್ಸಿಕ್ಯಾಬ್ಗಳು ನಿಂತು ಪ್ರಯಾಣಿಕರನ್ನು ಗದಗ, ಹುಬ್ಬಳ್ಳಿ, ಶಿರಸಿ, ದಾವಣಗೆರೆ ಕಡೆಗೆ ಕರೆದೊಯ್ದವು.

ಮುಖ್ಯಮಂತ್ರಿಗೆ ಎಸ್ಎಫ್ಐ ಮನವಿ

ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸಿ ವಿದ್ಯಾರ್ಥಿಗಳಿಗೆ ಹಾಗೂ ಜನಸಾಮಾನ್ಯರಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಲು ಒತ್ತಾಯಿಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೇಲ್ ಮೂಲಕ ಎಸ್ಎಫ್ಐ ಮನವಿ ಸಲ್ಲಿಸಿದೆ.

ರಾಜ್ಯ ರಸ್ತೆ ಸಾರಿಗೆ ನಿಗಮಗಳು ಮತ್ತು ಬೆಂಗಳೂರು ಮಹಾನಗರ ಸಾರಿಗೆ ನಿಗಮ ನೌಕರರು ಏಪ್ರಿಲ್ 7ರಿಂದ ಬಸ್ಸುಗಳನ್ನು ಬಂದ್ ಮಾಡುವುದರ ಮೂಲಕ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯ ಸಾರಿಗೆ ನೌಕರರ ಬೇಡಿಕೆಗಳ ಕುರಿತು ರಾಜ್ಯ ಸರ್ಕಾರ ಸಹಾನುಭೂತಿಯಿಂದ ಮಾತುಕತೆ ಮೂಲಕ ಪರಿಹಾರೋಪಾಯವನ್ನು ಕಂಡುಕೊಳ್ಳಲು ಮುಂದಾಗದಿರುವ ಕಾರಣ ರಾಜ್ಯದ ವಿದ್ಯಾರ್ಥಿಗಳು ಮತ್ತು ಜನತೆ ಸಾರಿಗೆ ಸಮಸ್ಯೆಯ ಸಂಕಷ್ಟವನ್ನು ಎದುರಿಸಬೇಕಾಗಿ ಬಂದಿದೆ ಎಂದು ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.