ಶನಿವಾರ, ಜನವರಿ 28, 2023
20 °C
ಪಠ್ಯಾಧಾರಿತ ಪರೀಕ್ಷೆ, ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮಕ್ಕೆ ಡಿಡಿಪಿಐ ಜಗದೀಶ್ವರ ಚಾಲನೆ

‘ಪ್ರಾಮಾಣಿಕ ಪ್ರಯತ್ನದಿಂದ ನಿರೀಕ್ಷಿತ ಪ್ರತಿಫಲ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ‘ನಿತ್ಯವೂ ಶಿಕ್ಷಕರು ನೀಡುವ ಚಟುವಟಿಕೆಗಳನ್ನು ತಪ್ಪದೇ ಪೂರ್ಣಗೊಳಿಸಿ, ಸಮಯ ಹೊಂದಿಸಿಕೊಂಡು ಅಭ್ಯಾಸ ಮಾಡಿ. ಗುರಿಯೊಂದೇ ನಿಮ್ಮ ಧ್ಯೇಯವಾಗಿರಬೇಕು' ಎಂದು ಹಾವೇರಿ ಜಿಲ್ಲಾ ಉಪನಿರ್ದೇಶಕ ಜಗದೀಶ್ವರ ಬಿ.ಎಸ್. ಹೇಳಿದರು.

ನಗರದ ಹುಕ್ಕೇರಿಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆ ಹಿನ್ನೆಲೆಯಲ್ಲಿ ಗುರುವಾರ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಾವೇರಿ ಹಾಗೂ ಜಿಲ್ಲಾ ಆಂಗ್ಲಭಾಷಾ ಶಿಕ್ಷಕರ ವೇದಿಕೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಪಠ್ಯಾಧಾರಿತ ಪರೀಕ್ಷೆ ಮತ್ತು ರಸಪ್ರಶ್ನೆ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಕಗಳನ್ನು ಗಳಿಸುವ ಭರದಲ್ಲಿ ಅಮೂಲ್ಯವಾದ ಆರೋಗ್ಯದ ನಿಷ್ಕಾಳಜಿ ತೋರದಿರಿ. ದೇಹದ ಆರೋಗ್ಯ ಸಮಸ್ಥಿತಿ ಕಾಯುವ ಕಾಳಿನ ಪದಾರ್ಥಗಳನ್ನು ಸೇವಿಸಬೇಕು. ನಿಮ್ಮೊಳಗೆ ಹುದುಗಿರುವ ಸಾಮರ್ಥ್ಯವನ್ನು ಬಳಸಿಕೊಳ್ಳಿ. ಪರೀಕ್ಷೆ ಮುಗಿಯುವವರೆಗೂ ಜಾತ್ರೆ, ಹಬ್ಬ, ಟಿವಿ, ಮೊಬೈಲ್‌ ಸಂಪರ್ಕದಿಂದ ದೂರ ಉಳಿದು ಅದೇ ಸಮಯವನ್ನು ಅಭ್ಯಾಸಕ್ಕೆ ಬಳಸಿಕೊಳ್ಳಿ ಎಂದು ಹೇಳಿದರು.

ಕಲಿಕೆಗೆ ಸಂಬಂಧಿಸಿದಂತೆ ಮಗುವಿನ ಸಾಮರ್ಥ್ಯಕ್ಕನುಗುಣವಾಗಿ ಗುರುತಿಸಿ ಅವರಿಗೆ ವೈಯಕ್ತಿಕ ಕಾಳಜಿ ಮತ್ತು ಮಾರ್ಗದರ್ಶನ ನೀಡಬೇಕು. ಕಲಿಕೆಯಲ್ಲಿ ಹಿಂದುಳಿದವರನ್ನು ಕಡೆಗಣಿಸದೆ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು. ಮಕ್ಕಳ ಮೊಬೈಲ್‌ ಬಳಸಿಕೊಂಡು ಅಭ್ಯಾಸದತ್ತ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಬೇಕು ಎಂದು ಶಿಕ್ಷಕರಿಗೆ ಸಲಹೆ ನೀಡಿದರು.

 

ಕ್ವಿಜ್ ಮಾಸ್ಟರ್ ಚಂದ್ರುಗೌಡ ಪಾಟೀಲ, ಕುಮಾರ್ ಕಾಳೆ, ಆನಂದ ದೇಸಾಯಿ ನಿರ್ವಹಣೆ ಮಾಡಿದ ಡಿಜಿಟಲ್ ಕ್ವಿಜ್ ಮಕ್ಕಳು ಮತ್ತು ಶಿಕ್ಷಕರ ಮನಸೊರೆಗೊಂಡಿತು.

ಪಠ್ಯಾಧಾರಿತ ಪರೀಕ್ಷೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ, ಪ್ರಥಮ, ತೃತೀಯ ಮತ್ತು ಇಂಗ್ಲಿಷ್ ಮೀಡಿಯಂ ವಿಭಾಗದಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದ ಮಕ್ಕಳಿಗೆ ಇಂಗ್ಲಿಷ್ ವ್ಯಾಕರಣ ಪುಸ್ತಕ ಮತ್ತು ಪ್ರಮಾಣಪತ್ರ ನೀಡಿ ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ದೈಹಿಕ ಶಿಕ್ಷಣಾಧಿಕಾರಿ ಐ.ಎನ್.ಇಚ್ಚಂಗಿ, ಕನ್ನಡ ವಿಷಯ ಪರಿವೀಕ್ಷಕ ಈರಪ್ಪ ಲಮಾಣಿ, ಎಸ್.ಪಿ.ಮೂಡಲದವರ, ವೃತ್ತಿಶಿಕ್ಷಣ ವಿಷಯ ಪರಿವೀಕ್ಷಕ ಪಿ.ಎಫ್.ಪೂಜಾರ, ಇಸಿಒ ಸಿಕಂದರ್ ಮುಲ್ಲಾ, ಜಿಲ್ಲಾ ಆಂಗ್ಲಭಾಷಾ ಶಿಕ್ಷಕರ ವೇದಿಕೆಯ ಗೌರವಾಧ್ಯಕ್ಷ ಎ.ಸಿ.ಸಂಕಣ್ಣನವರ, ಅಧ್ಯಕ್ಷ ಎಫ್.ಬಿ.ಮರಡೂರ, ಕಾರ್ಯದರ್ಶಿ ರಾಕೇಶ್ ಜಿಗಳಿ, ಖಜಾಂಚಿ ಗುರುರಾಜ ಹುಚ್ಚಣ್ಣನವರ, ಪ್ರವೀಣ್ ಮಸ್ಕಿ, ದಾವಣಗೆರೆ ಪುಷ್ಪ ಮಹಾಲಿಂಗಪ್ಪ ಕಾಲೇಜಿನ ಉಪನ್ಯಾಸಕ ಪದ್ಮನಾಭ ಜಿ., ಜಗದೀಶ ಮಳೀಮಠ, ಮಂಜುನಾಥ ಚೂರಿ, ಲೋಕೇಶ್ ನಾಯ್ಕ್, ರವಿ ಇಟಗಿ, ಜಗದೀಶ ಗೋಣಗೇರಿ, ಪುಷ್ಪ ಬಗಾಡೆ, ಪದ್ಮಾವತಿ ಕಲ್ಲು, ಮಾಲತೇಶ್ ಚಳಗೇರಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು