ಹಾವೇರಿ: ಜೀವನಪೂರ್ತಿ ದುಡಿದು ಮಕ್ಕಳನ್ನು ಸಾಕಿ ಸಲುಹಿ ವೃದ್ಧಾಪ್ಯದಲ್ಲಿರುವ ಹಿರಿಯ ನಾಗರಿಕರ ಮೇಲೆ ಶೋಷಣೆಗಳು ನಿರಂತರವಾಗಿ ನಡೆಯುತ್ತಿವೆ. ಇಂಥ ಹಿರಿಯ ನಾಗರಿಕರ ಪೋಷಣೆ ಹಾಗೂ ಹಕ್ಕುಗಳ ರಕ್ಷಣೆಗಾಗಿ ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ‘ಅನುಭವ ಮಂಟಪ’ ಕೇಂದ್ರ ಆರಂಭಗೊಂಡಿದೆ.

‘ಹಿರಿಯ ನಾಗರಿಕರ ಸಹಾಯವಾಣಿ–1090’ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಭವ ಮಂಟಪ, ಜಿಲ್ಲೆಯಲ್ಲಿರುವ ಹಿರಿಯ ನಾಗರಿಕರ ಕಷ್ಟಗಳನ್ನು ಆಲಿಸುತ್ತಿದೆ. ಸರ್ಕಾರದ ಇಲಾಖೆಗಳ ಮೂಲಕ ಹಿರಿಯ ನಾಗರಿಕರಿಗೆ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತಿದೆ.

ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಚಿತ್ರದುರ್ಗದ ಬಸವೇಶ್ವರ ವಿದ್ಯಾಸಂಸ್ಥೆಯಿಂದ ಅನುಭವ ಮಂಟಪ ಕೇಂದ್ರವನ್ನು ಶುರು ಮಾಡಲಾಗಿದೆ. ಹಿರಿಯ ನಾಗರಿಕರ ದೂರುಗಳ ಪರಿಶೀಲನೆಗಾಗಿ ಜಿಲ್ಲಾ ಮಟ್ಟದ ಸಮಿತಿಯನ್ನೂ ರಚಿಸಲಾಗಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರು ಸಮಿತಿಯ ಅಧ್ಯಕ್ಷರಾಗಿದ್ದಾರೆ. ಉಪವಿಭಾಗಾಧಿಕಾರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ, ಜಿಲ್ಲಾ ಶಸ್ತ್ರ ಚಿಕಿತ್ಸಕ/ಜಿಲ್ಲಾಆರೋಗ್ಯಾಧಿಕಾರಿ, ಬಸವೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ/ಕಾರ್ಯದರ್ಶಿ, ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿಗಳು ಸಮಿತಿಯ ಸದಸ್ಯರಾಗಿದ್ದಾರೆ.

‘ಹಾವೇರಿ ಜಿಲ್ಲೆಯಲ್ಲಿ ಹಿರಿಯ ನಾಗರಿಕರ ಸಮಸ್ಯೆಗಳನ್ನು ಆಲಿಸಲು ಸಹಾಯವಾಣಿ ಕೇಂದ್ರವಿರಲಿಲ್ಲ. ಕೆಲವರು ಕೇಂದ್ರ ತೆರೆಯುವುದಾಗಿ ಹೇಳಿದ್ದರು. ಆದರೆ, ಸಮರ್ಪಕವಾಗಿ ಕಾರ್ಯನಿರ್ವಹಣೆ ಮಾಡಿರಲಿಲ್ಲ. ಹಲವು ವರ್ಷಗಳಿಂದ ಕೇಂದ್ರ ತೆರೆಯುವ ಪ್ರಯತ್ನಗಳು ನಡೆದಿದ್ದವು. ಇದೀಗ ಜಿಲ್ಲಾಡಳಿತದ ಅಧಿಕಾರಿಗಳು, ಚಿತ್ರದುರ್ಗದ ಬಸವೇಶ್ವರ ವಿದ್ಯಾಸಂಸ್ಥೆ ಮೂಲಕ ಹಾವೇರಿಯಲ್ಲಿ ಕೇಂದ್ರ ಆರಂಭಿಸಿದ್ದಾರೆ’ ಎಂದು ಸಮಿತಿಯ ಸದಸ್ಯರೊಬ್ಬರು ಹೇಳಿದರು.

17 ದಿನಗಳಲ್ಲಿ 4 ಪ್ರಕರಣ ದಾಖಲು: ಹಳೇ ಪಿ.ಬಿ. ರಸ್ತೆಯಲ್ಲಿರುವ ಜಿಲ್ಲಾ ಎಸ್ಪಿ ಕಚೇರಿಯ ನೆಲ ಮಹಡಿಯ ಕೊಠಡಿಯಲ್ಲಿ ‘ಅನುಭವ ಮಂಟಪ’ ಕೇಂದ್ರ ತೆರೆಯಲಾಗಿದೆ. ಹಿರಿಯ ನಾಗರಿಕರ ದೂರು ಆಲಿಸಲು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಸದ್ಯದ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30 ಗಂಟೆಯವರೆಗೂ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಹೊಸ ಕಚೇರಿ ಆಗಿರುವುದರಿಂದ ದೂರವಾಣಿ ಸಂಪರ್ಕ ಪಡೆಯುವ ಪ್ರಕ್ರಿಯೆ ನಡೆಯುತ್ತಿದೆ. ದೂರವಾಣಿ ಸಂಪರ್ಕ ಬಂದ ನಂತರ, ಹಿರಿಯ ನಾಗರಿಕರ ಸಹಾಯವಾಣಿ–1090ಕ್ಕೆ ಬರುವ ಹಾವೇರಿ ಜಿಲ್ಲೆಗೆ ಸಂಬಂಧಪಟ್ಟ ಕರೆಗಳನ್ನು ಕೇಂದ್ರಕ್ಕೆ ವರ್ಗಾವಣೆ ಮಾಡಲಾಗುತ್ತಿದೆ. ಅನುಭವ ಮಂಟಪದ ಸಿಬ್ಬಂದಿಯೇ ಅಂಥ ಕರೆಗಳ ವಿಚಾರಣೆ ಮಾಡಿ, ಮುಂದಿನ ಕ್ರಮ ಜರುಗಿಸಲಿದ್ದಾರೆ.

‘ಹಾವೇರಿ ಜಿಲ್ಲಾ ಎಸ್ಪಿ ಕಚೇರಿಯಲ್ಲಿ ಏಪ್ರಿಲ್ 4ರಂದು ಕೇಂದ್ರವನ್ನು ಉದ್ಘಾಟಿಸಲಾಗಿದೆ. ಕೇಂದ್ರ ಆರಂಭವಾಗಿ 17 ದಿನವಾಗಿದೆ. ಕುಟುಂಬದವರು ಹಾಗೂ ಇತರರಿಂದ ಶೋಷಣೆಗೆ ಒಳಗಾದ ನಾಲ್ವರು ವೃದ್ಧರು, ಕೇಂದ್ರಕ್ಕೆ ದೂರು ನೀಡಿದ್ದಾರೆ. ದೂರುಗಳ ಪರಿಶೀಲನೆ ನಡೆಯುತ್ತಿದೆ. ವೃದ್ಧರು ತಮ್ಮ ಮಕ್ಕಳು ಹಾಗೂ ಪರಿಚಯಸ್ಥರ ಜೊತೆಗೆ ಬಂದು ದೂರು ನೀಡಿದ್ದಾರೆ’ ಎಂದು ಕೇಂದ್ರದ ಸಿಬ್ಬಂದಿ ಹೇಳಿದರು.

‘ಮಕ್ಕಳು ಹಾಗೂ ಸೊಸೆಯಂದಿರಿಂದ ಶೋಷಣೆ ಆಗುತ್ತಿರುವ ಬಗ್ಗೆ ವೃದ್ಧರು ದೂರು ನೀಡಿದ್ದಾರೆ. ಜಮೀನು ಹಾಗೂ ಇತರೆ ಆಸ್ತಿ ವಿಚಾರವಾಗಿ ವೃದ್ಧರ ಮೇಲೆ ದಬ್ಬಾಳಿಕೆ ನಡೆದಿದ್ದು, ಹಲ್ಲೆಯೂ ಆಗಿದೆ. ಈ ಬಗ್ಗೆಯೂ ವೃದ್ಧರು ಅಳಲು ತೋಡಿಕೊಂಡಿದ್ದಾರೆ. ಎಲ್ಲ ದೂರುಗಳನ್ನು ದಾಖಲಿಸಿಕೊಂಡು, ಕಾನೂನು ಪ್ರಕ್ರಿಯೆ ಶುರು ಮಾಡಲಾಗಿದೆ’ ಎಂದು ತಿಳಿಸಿದರು.

3 ತಿಂಗಳ ಜೈಲು ಶಿಕ್ಷೆ; ಪಾಲಕರ ಪೋಷಣೆ ಹಾಗೂ ಸಂರಕ್ಷಣೆ ಕುರಿತು ಯಾವುದಾದರೂ ಸಮಸ್ಯೆಯಿದ್ದರೆ ಹಿರಿಯ ನಾಗರಿಕರು, ಉಪ ವಿಭಾಗಾಧಿಕಾರಿಗೆ ದೂರು ನೀಡಬಹುದು. ಗರಿಷ್ಠ 10 ಸಾವಿರ ನಿರ್ವಹಣೆ ಭತ್ಯೆ ಕೊಡಿಸಲು ಕಾಯ್ದೆಯಲ್ಲಿ ಅವಕಾಶವಿದೆ. ಭತ್ಯೆ ನೀಡಲು ಸಂಬಂಧಪಟ್ಟವರು ತಪ್ಪಿದರೆ, 3 ತಿಂಗಳ ಜೈಲು ವಾಸ ಹಾಗೂ ₹ 5 ಸಾವಿರ ದಂಡ ವಿಧಿಸಲು ಸಹ ಅವಕಾಶವಿದೆ.

‘1090; ದಿನದ 24 ಗಂಟೆ ಕೆಲಸ’

‘ಪಾಲಕರ ಪೋಷಣೆ ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ಕಾಯ್ದೆ–2007ರ ಅನ್ವಯ ಹಿರಿಯ ನಾಗರಿಕರ ಹಕ್ಕುಗಳನ್ನು ರಕ್ಷಣೆ ಮಾಡಲು ಸಹಾಯವಾಣಿ– 1090 ಆರಂಭಿಸಲಾಗಿದೆ. ಈ ಸಹಾಯವಾಣಿ ದಿನದ 24 ಗಂಟೆಯೂ ಕಾರ್ಯನಿರ್ವಹಿಸುತ್ತದೆ’ ಎಂದು ಸಿಬ್ಬಂದಿ ಹೇಳಿದರು. ‘ಮಕ್ಕಳು ಕುಟುಂಬದ ಸದಸ್ಯರು ಅಕ್ಕ–ಪಕ್ಕದ ಮನೆಯವರು ಸರ್ಕಾರಿ ನೌಕರರು ಹಾಗೂ ಇತರೆ ಯಾರಾದರೂ ತೊಂದರೆ ನೀಡುತ್ತಿದ್ದರೆ ಹಿರಿಯ ನಾಗರಿಕರು ದೂರು ನೀಡಬಹುದು. ತಮ್ಮ ಯಾವುದೇ ಸಮಸ್ಯೆಯಿದ್ದರೂ ಅದರ ಪರಿಹಾರಕ್ಕಾಗಿ ಸಹಾಯವಾಣಿ ಸಂಪರ್ಕಿಸಬಹುದು’ ಎಂದು ತಿಳಿಸಿದರು. ‘ವೃದ್ಧಾಪ್ಯ ವೇತನ ಹಾಗೂ ಸರ್ಕಾರದ ಸೌಲಭ್ಯ ಪಡೆಯಲು ಸಹ ವೃದ್ಧರು ಸಂಪರ್ಕಿಸಬಹುದು. ಉಚಿತ ಕಾನೂನು ನೆರವು ಇದೆ. ವೃದ್ಧಾಶ್ರಮದಲ್ಲೂ ಇರಲು ಅವಕಾಶ ಕಲ್ಪಿಸಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.