ಗುತ್ತಲ: ಮಳೆಯಾಶ್ರೀತ ಪ್ರದೇಶದಲ್ಲಿ ಸಮರ್ಪಕವಾಗಿ ಮಳೆಯ ನೀರನ್ನು ಸಂಗ್ರಹಿಸಿ ಸುಸ್ತಿರ ಕೃಷಿಯನ್ನಾಗಿಸಿ ಉತ್ಪಾದಕತೆ ಹಾಗೂ ರೈತರು ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಸರ್ಕಾರವು ಕೃಷಿ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ.
ಯೋಜನೆಯಡಿ ರೈತರು ಒಟ್ಟು ಆರು ಘಟಕ ಅನುಷ್ಠಾನಗೊಳಿಸಿಕೊಳ್ಳಬಹುದು. ಬದು, ಕೃಷಿ ಹೊಂಡ ನಿರ್ಮಾಣ, ಕೃಷಿಹೊಂಡಕ್ಕೆ ಪಾಲಿಥೀನ್ ಹೊದಿಕೆ, ತಂತಿಬೇಲಿ, ನೀರು ಎತ್ತಲು ಡಿಸೇಲ್ ಪಂಪ್‌ಸೆಟ್ ಬಳಕೆ,ಹಾಗೆ ಬೆಳೆಗಳಿಗೆ ನೀರು ಹಾಯಿಸಲು ಸ್ಪಿಂಕ್ಲರ್ ಘಟಕ ಆರಂಭಿಸಬಹುದು.
ಆಸಕ್ತ ರೈತರು ಸೆ.5 ಒಳಗಾಗಿ ಹೋಬಳಿಯ ರೈತ ಸಂರ್ಪಕ ಕೇಂದ್ರಗಳಿಗೆ ಭೇಟಿ ನೀಡಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ವೀರಭದ್ರಪ್ಪ.ಬಿ.ಎಚ್.ತಿಳಿಸಿದ್ದಾರೆ.