ಬ್ಯಾಡಗಿ: ‘ಪಟ್ಟಣದ ವರ್ತಕರ ಸಂಘ, ವಿವಿಧ ದಾನಿಗಳ ಸಹಾಯ ಮತ್ತು ಸಹಕಾರದಿಂದ 1.5 ಎಕರೆ ನಿವೇಶನದಲ್ಲಿ ಅಂದಾಜು ₹ 4 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾದ ಸಮುದಾಯ ಭವನ ನಿರ್ಮಾಣವಾಗಲಿದೆ’ ಎಂದು ವರ್ತಕರ ಸಂಘದ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.

ಪಟ್ಟಣದ ಶಿಡೇನೂರ ರಸ್ತೆಯಲ್ಲಿ ಇರುವ ಸಂಘದ ನಿವೇಶನದಲ್ಲಿ ನೂತನ ಸಮುದಾಯ ಭವನ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

‘ಪಟ್ಟಣದ ಜನಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ವರ್ತಕರ ಸಂಘದ ವತಿಯಿಂದ ಈ ಹಿಂದೆ ಸಿದ್ದೇಶ್ವರ ಸಮುದಾಯ ಭವನ ನಿರ್ಮಿಸಲಾಗಿತ್ತು. ಆದರೆ ಈಗ ಜನಸಂಖ್ಯೆ ಮತ್ತಷ್ಟು ಹೆಚ್ಚಿದೆ. ಇಲ್ಲಿಯ ಜನರು ಬೇರೆ ಊರುಗಳಿಗೆ ಹೋಗಲು ತಗುಲಬಹುದಾದ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶ ಹೊಂದಿದೆ. ಜನರ ಅಗತ್ಯಕ್ಕೆ ತಕ್ಕಂತೆ ಕಲ್ಯಾಣ ಮಂಟಪದ ನಿರ್ಮಾಣ ಅಗತ್ಯವಾಗಿದೆ’ ಎಂದು ಮನಗಂಡಿರುವ ಸಂಘ ಸುಸಜ್ಜಿತ ಸಮುದಾಯ ಭವನ ನಿರ್ಮಾಣಕ್ಕೆ ಮುಂದಾಗಿದೆ’ ಎಂದು ಹೇಳಿದರು.

‘ನಿರ್ಮಾಣವಾಗಲಿರುವ ಹೊಸ ಸಮುದಾಯ ಭವನದಲ್ಲಿ 20 ರಿಂದ 30 ವಿಶಾಲ ಕೊಠಡಿಗಳು, ಕೆಳಗಡೆ ಊಟದ ಹಾಲ್ ಸೇರಿದಂತೆ ಆಧುನಿಕ ಸೌಲಭ್ಯ ಕಲ್ಪಿಸಲಾಗುವುದು ಎಂದರು.

ಸಂಘದ ಗೌರವ ಕಾರ್ಯದರ್ಶಿ ವಿ.ಎಸ್. ಮೋರಿಗೇರಿ ಮಾತನಾಡಿ, ‘ಈ ಹಿಂದೆ ವರ್ತಕರು ಈ ನಿವೇಶನದಲ್ಲಿ ಕ್ರೀಡಾ ಕೇಂದ್ರ ಸ್ಥಾಪನೆ ಮಾಡಿದ್ದರು’ ಎಂದು ಹೇಳಿದರು.

ವರ್ತಕರ ಸಂಘದ ಉಪಾಧ್ಯಕ್ಷ ಎ.ಆರ್.ನದಾಫ್, ಜಂಟಿ ಗೌರವ ಕಾರ್ಯದರ್ಶಿ ಮಹಾಂತೇಶ ಆಲದಗೇರಿ, ಸದಸ್ಯರಾದ ಚಂದ್ರಣ್ಣ ಅಂಗಡಿ, ಮಲ್ಲಣ್ಣ ಹುಚಗೊಂಡರ, ಶೈಲೇಶ ಬೂದಿಹಾಳಮಠ. ಕುಮಾರಗೌಡ್ರ ಪಾಟೀಲ, ಸತೀಶಗೌಡ್ರ ಪಾಟೀಲ, ಜಗದೀಶ ರೋಣದ, ದೇವರಾಜ ಹುಡೇದ, ವೀರಯ್ಯ ಬೂದಿಹಾಳಮಠ, ಸಿದ್ದನಗೌಡ ಪಾಟೀಲ, ಬಸನಗೌಡ ಕಲ್ಲಪ್ಪಗೌಡ್ರ, ಚನ್ನಬಸನಗೌಡ ಪಾಟೀಲ, ಬಸವಣ್ಣೆಪ್ಪ ಛತ್ರದ, ವರ್ತಕರಾದ ರಾಮಣ್ಣ ಉಕ್ಕುಂದ, ಮಾಲತೇಶ ಅರಳಿಮಟ್ಟಿ, ನಿಜಲಿಂಗಪ್ಪ ಹುಗ್ಗಿ, ಮಲ್ಲೇಶ ಬಣಕಾರ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.