ಶಿಗ್ಗಾವಿ: ‘ಬಂಕಾಪುರ ಪುರಸಭೆಗೆ ನಗರೋತ್ಥಾನ ಯೋಜನೆಯಡಿ ₹ 2.90 ಕೋಟಿ ಅನುದಾನ ಬಿಡುಗಡೆಯಾಗಿದೆ. ಇದರಡಿ ತ್ವರಿತವಾಗಿ ಕಾಮಗಾರಿ ಕೈಗೊಂಡು ಪಟ್ಟಣವನ್ನು ಅಭಿವೃದ್ಧಿಪಡಿಸಬೇಕು. ಕಾಮಗಾರಿಯಲ್ಲಿ ಏನಾದರೂ ವಿಳಂಬವಾದರೆ ತಕ್ಷಣವೇ ಕಾರಣ ತಿಳಿಸಬೇಕು’ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಅವರು ಸೂಚನೆ ನೀಡಿದರು.

ತಾಲ್ಲೂಕಿನ ಬಂಕಾಪುರಕ್ಕೆ ಬುಧವಾರ ಭೇಟಿ ನೀಡಿದ ಅವರು, ಪಟ್ಟಣದ ಸ್ವಚ್ಛತೆ ಹಾಗೂ ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ವೀಕ್ಷಿಸಿದರು.

‘ನಗರೂತ್ಥಾನ ಯೋಜನೆಯಡಿ ರಸ್ತೆ, ಚರಂಡಿಗಳ ನಿರ್ಮಾಣ, ಸಿಡಿಗಳ ನಿರ್ಮಾಣ, ನೀರು ಸರಬುರಾಜು ಸೇರಿದಂತೆ ವಿವಿಧ ಕಾಮಗಾರಿಗಳನ್ನು ಕೈಗೊಳ್ಳಬೇಕು. ಗುಣಮಟ್ಟದ ಕಾಮಗಾರಿಗಳ ಮೂಲಕ ಪಟ್ಟಣದ ಅಭಿವೃದ್ಧಿ ಮುಂದಾಗಬೇಕು’ ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

‘ಸಹಾಯಕ ಕಾರ್ಯಪಾಲಕ ಎಂಜಿನಿಯರ್, ಮುಖ್ಯಾಧಿಕಾರಿ, ಎಂಜಿನಿಯರ್, ಯೋಜನಾ ಸಮಾಲೋಚಕರು, ಗುತ್ತಿಗೆದಾರರು ಕಾಮಗಾರಿಗಳು ವಿಳಂಬವಾಗದಂತೆ ಗಮನ ಹರಿಸಬೇಕು’ ಎಂದರು.

‘ಸರ್ಕಾರದ ಯೋಜನೆಗಳು, ನಿಗದಿಪಡಿಸಿದ ಅವಧಿಯಲ್ಲಿ ಮುಗಿಯಬೇಕು. ಪ್ರತಿ ಯೋಜನೆ ಗುಣಮಟ್ಟದ್ದಾಗಿರಬೇಕು. ಅಂದಾಗ ಮಾತ್ರ, ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಸಾಧ್ಯವಾಗುತ್ತದೆ. ಕಾಮಗಾರಿಗಳಿಗೆ ಕುಂಟುನೆಪ ಹೇಳಿ ಕಾಲಹರಣ ಮಾಡಬಾರದು’ ಎಂದು ಹೇಳಿದರು.

ಪಡಿತರ ಚೀಟಿ ಪರಿಶೀಲನೆ: ಪಡಿತರ ಚೀಟಿಗಳ ಬಗ್ಗೆ ಸಾರ್ವಜನಿಕರ ಮನವಿ ಆಲಿಸಿ ಮಾತನಾಡಿದ ಜಿಲ್ಲಾಧಿಕಾರಿ, ‘ಬಿಪಿಎಲ್ ಪಡಿತರ ಚೀಟಿಗಳನ್ನು ಸರ್ಕಾರದ ಮಾನದಂಡಗಳ ಪ್ರಕಾರ ಪರಿಶೀಲನೆ ಮಾಡಲಾಗುತ್ತಿದೆ. ಅರ್ಹರು ಹಾಗೂ ಅನರ್ಹರು ಯಾರು ಎಂಬುವುದನ್ನು ಗುರುತಿಸಲಾಗುತ್ತಿದೆ. ಅರ್ಹ ಬಡ ಜನತೆಗೆ ನ್ಯಾಯ ನೀಡುವ ಕೆಲಸ ಮಾಡಲಾಗುತ್ತಿದೆ’ ಎಂದರು.

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಬಗ್ಗೆ ಮಾತನಾಡಿದ ಅವರು, ‘ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸಲಾಗುತ್ತಿರುವ ಸಮೀಕ್ಷೆ ಕಾರ್ಯ, ಮುಕ್ತಾಯದ ಹಂತದಲ್ಲಿದೆ. ಜಿಲ್ಲೆಯ ಎಲ್ಲ ತಾಲ್ಲೂಕಿನಲ್ಲೂ ಸಮೀಕ್ಷೆ ಕೆಲಸದ ಪರಿಶೀಲನೆ ನಡೆಯುತ್ತಿದೆ’ ಎಂದರು.

‘ಗಣತಿದಾರರು, ಸಮೀಕ್ಷೆ ಕಾರ್ಯ ಉತ್ತಮವಾಗಿ ಮಾಡುತ್ತಿದ್ದಾರೆ. ಬಿಟ್ಟು ಹೋಗಿರುವ ಕುಟುಂಬಗಳ ವಿವರಗಳನ್ನು ಪಡೆಯಲಾಗುತ್ತಿದೆ. ಯಾರಾದರೂ ಸಮೀಕ್ಷೆ ಮಾಡಿಸುವವರು ಇದ್ದರೆ, ಸಂಬಂಧಪಟ್ಟ ಇಲಾಖೆ ಕಚೇರಿ ಹಾಗೂ ಅಧಿಕಾರಿಗಳನ್ನು ಸಂಪರ್ಕಿಸಬೇಕು’ ಎಂದು ಹೇಳಿದರು.

ಮುಖ್ಯಾಧಿಕಾರಿ ಶಿವಾನಂದ ಅಜ್ಜಣ್ಣವರ, ಉಪತಹಶೀಲ್ದಾರ್ ವೆಂಕಟೇಶ ಕುಲಕರ್ಣಿ ಇದ್ದರು.

ಪಡಿತರ ಬಿಪಿಎಲ್ ಕಾರ್ಡ್ಗಳನ್ನು ಸರ್ಕಾರ ಮಾನದಂಡದ ಪ್ರಕಾರ ಪರಿಶೀಲನೆ ಮಾಡುತ್ತಿದೆ. ಅರ್ಹರು, ಅನರ್ಹರು ಯಾರು ಎಂಬುವುದನ್ನು ಗುರುತಿಸುವ ಮೂಲಕ ಅರ್ಹ ಬಡ ಜನತೆಗೆ ನ್ಯಾಯ ನೀಡುವ ಕೆಲಸ ಮಾಡಲಾಗುತ್ತಿದೆ
ವಿಜಯಮಹಾಂತೇಶ ದಾನಮ್ಮನವರ, ಜಿಲ್ಲಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.