ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಹೆಚ್ಚಳ

Published 4 ಆಗಸ್ಟ್ 2023, 14:23 IST
Last Updated 4 ಆಗಸ್ಟ್ 2023, 14:23 IST
ಅಕ್ಷರ ಗಾತ್ರ

ಬ್ಯಾಡಗಿ: ಇಲ್ಲಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಶುಕ್ರವಾರ 2,667 ಕ್ವಿಂಟಲ್ ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಆವಕದಲ್ಲಿ ಮತ್ತೆ ಹೆಚ್ಚಳವಾಗಿದೆ.

ಕಳೆದ ಗುರುವಾರ ಮಾರುಕಟ್ಟೆಗೆ 1,030 ಕ್ವಿಂಟಲ್ ಮೆಣಸಿನಕಾಯಿ ಆವಕವಾಗಿತ್ತು. ಶುಕ್ರವಾರ ತೇವಾಂಶ ಹೆಚ್ಚಿರುವ ಹಾಗೂ ಕನಿಷ್ಠ ಗುಣಮಟ್ಟ ಹೊಂದಿರದ 47 ಲಾಟ್‌ಗಳಿಗೆ ಟೆಂಡರ್ ನಮೂದಿಸಿಲ್ಲ. 20 ಚೀಲ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 64,500 ದಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿದೆ. ಕಳೆದ ಗುರುವಾರಕ್ಕಿಂತ ₹ 3 ಸಾವಿರ ಹೆಚ್ಚಳವಾಗಿದೆ. 60 ಚೀಲ ಕಡ್ಡಿ ತಳಿ ₹ 53,301, ಗುಂಟೂರ ತಳಿ ₹ 18,709 ರಂತೆ ಗರಿಷ್ಠ ಬೆಲೆಯಲ್ಲಿ ಮಾರಾಟವಾಗಿವೆ. ಸರಾಸರಿ ಬೆಲೆಯಲ್ಲಿ ಬ್ಯಾಡಗಿ ಡಬ್ಬಿ ಮೆಣಸಿನಕಾಯಿ ಕ್ವಿಂಟಲ್‌ಗೆ ₹ 41,589, ಕಡ್ಡಿ ಮೆಣಸಿನಕಾಯಿ ₹ 32,509, ಗುಂಟೂರು ತಳಿ ₹ 16,509ರಂತೆ ಮಾರಾಟವಾಗಿದೆ. ಬೆಲೆಯಲ್ಲಿ ಸ್ಥಿರತೆ ಇದೆ. ಇಂದಿನ ಟೆಂಡರ್‌ ಪ್ರಕ್ರಿಯೆಯಲ್ಲಿ ಒಟ್ಟು76 ಖರೀದಿ ವರ್ತಕರು ಪಾಲ್ಗೊಂಡಿದ್ದರು ಎಂದು ಎಪಿಎಂಸಿ ಮೂಲಗಳು ತಿಳಿಸಿವೆ.

ಶುಕ್ರವಾರದ ದರ ಪ್ರತಿ ಕ್ವಿಂಟಲ್ ಗೆ
ಕನಿಷ್ಠ - ಗರಿಷ್ಠ
ಬ್ಯಾಡಗಿ ಕಡ್ಡಿ ₹ 2,699-₹ 53,301
ಬ್ಯಾಡಗಿ ಡಬ್ಬಿ ₹ 3,709-₹ 64,500
ಗುಂಟೂರು ತಳಿ ₹ 1,709-₹ 18,709

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT