ಬ್ಯಾಡಗಿ: ‘ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಆದರೆ ಅದನ್ನು ರಕ್ತದಾನದ ಮೂಲಕ ಸಂಗ್ರಹಿಸಲು ಸಾಧ್ಯವಿದೆ. ರಕ್ತದಾನ ಒಂದು ಸಾಮಾಜಿಕ ಜವಾಬ್ದಾರಿ’ ಎಂದು ಸಂಸ್ಥೆಯ ಅಧ್ಯಕ್ಷ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.

ಪಟ್ಟಣದ ಬಿಇಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ, ಪರಿಸರ ಸ್ನೇಹಿ ಬಳಗ, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ, ರಕ್ತ ಭಂಡಾರ ಕೇಂದ್ರ, ಜಿಲ್ಲಾ ಆರೋಗ್ಯ ಕೇಂದ್ರ ಹಾವೇರಿ, ಯುವ ರೆಡ್ ಕ್ರಾಸ್, ಎನ್ಎಸ್ಎಸ್, ಸ್ಕೌಟ್ ಮತ್ತು ಗೈಡ್ಸ್ ರೋವರ್ಸ್ ಮತ್ತು ರೇಂಜರ್ಸ್ ಘಟಕಗಳು ಬುಧವಾರ ಆಯೋಜಿಸಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತದಾನ ಮತ್ತೊಬ್ಬರ ಜೀವಗಳನ್ನು ಉಳಿಸುವುದಲ್ಲದೇ, ರಕ್ತದಾನ ಮಾಡಿದ ವ್ಯಕ್ತಿಯ ಆರೋಗ್ಯದ ಕ್ರಮದಲ್ಲಿಯೂ ಸುಧಾರಣೆ ಕಾಣಲಿದೆ’ ಎಂದರು.

ಡಾ.ಎಸ್.ಎನ್.ನಿಡಗುಂದಿ, ‘ನಾವು ನೀಡಿದ ರಕ್ತವು, ಸಂಕಷ್ಟದಲ್ಲಿರುವ ವ್ಯಕ್ತಿಯ ಜೀವ ಉಳಿಸಬಲ್ಲದು ಎನ್ನುವ ಸಾಮಾನ್ಯ ಪ್ರಜ್ಞೆ ನಮಗಿರಬೇಕು’ ಎಂದರು.

ಬ್ರಹ್ಮಕುಮಾರಿ ಸುರೇಖಾ, ಮೋಹನಕುಮಾರ ಹುಲ್ಲತ್ತಿ, ಪ್ರಾಚಾರ್ಯ ಎಸ್.ಜಿ.ವೈದ್ಯ, ಉಪನ್ಯಾಸಕರಾದ ಪ್ರಭುಲಿಂಗ ದೊಡ್ಮನಿ, ಎನ್.ಎಸ್.ಪ್ರಶಾಂತ, ಸುರೇಶಕುಮಾರ ಪಾಂಗಿ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.