ಬ್ಯಾಡಗಿ: ಎಲ್ಲೆಂದರಲ್ಲಿ ಕಸ, ಕಿತ್ತು ಹೋದ ತಂತಿ ಬೇಲಿ, ತುಕ್ಕು ಹಿಡಿದ ಮಕ್ಕಳ ಆಟಿಕೆಗಳು, ನಿರ್ವಹಣೆ ಕೊರತೆಯಿಂದ ಸೊರಗಿದ ಮರಗಳು.

ಇದು ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯಲ್ಲಿರುವ ಸುಭಾಷ ನಗರದ (ಜನತಾ ಪ್ಲಾಟ್) ಉದ್ಯಾನದ ದುಸ್ಥಿತಿ. ಬಡವರು ಹಾಗೂ ಮಧ್ಯಮ ವರ್ಗದವರೇ ಹೆಚ್ಚು ವಾಸವಿರುವ ಈ ನಗರದ ಅಭಿವೃದ್ಧಿ ಮರೀಚಿಕೆಯಾಗಿದೆ.

ಉದ್ಯಾನ ಅಭಿವೃದ್ಧಿಗೆ ಪುರಸಭೆ ದಿವ್ಯ ನಿರ್ಲಕ್ಷ್ಯ ವಹಿಸಿದೆ. ಅಕ್ಕ–ಪಕ್ಕದಲ್ಲಿ ಮನೆ ಕಟ್ಟುವ ಜನರು ಕಟ್ಟಡ ಸಾಮಗ್ರಿಗಳನ್ನು ಉದ್ಯಾನದಲ್ಲಿ ಹಾಕುತ್ತಿದ್ದಾರೆ. ಬೇಡವಾದ ತ್ಯಾಜ್ಯವನ್ನು ಇಲ್ಲಿಯೇ ಎಸೆಯುತ್ತಿದ್ದಾರೆ.

ಉದ್ಯಾನ ಬಳಿಯ ಚರಂಡಿಗಳು ಹೂಳು ತುಂಬಿಕೊಂಡು ದುರ್ನಾತ ಬೀರುತ್ತಿವೆ. ಸೊಳ್ಳೆಗಳ ಉತ್ಪತ್ತಿ ಹೆಚ್ಚುತ್ತಿದೆ. ಡೆಂಗಿಯಂಥ ಸಾಂಕ್ರಾಮಿಕ ಕಾಯಿಲೆ ಹರಡುವ ಭೀತಿ ಜನರಲ್ಲಿ ಕಾಡುತ್ತಿದೆ.

‘ಉದ್ಯಾನದಲ್ಲಿ ಎಸೆಯುವ ಘನ ತ್ಯಾಜ್ಯದಿಂದ ವಾತಾವರಣ ಹಾಳಾಗಿದ್ದು, ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಬೇಕಾಗಿದೆ. ಅಲ್ಲದೆ ಉದ್ಯಾನದ ಅಭಿವೃದ್ಧಿಗೆ ಪುರಸಭೆ ಮುಂದಾಗಬೇಕು‘ ಎಂದು ಸ್ಥಳೀಯ ನಿವಾಸಿ ಚಂದ್ರಶೇಖರ ಗದಗಕರ ಒತ್ತಾಯಿಸಿದರು.

‘ಇಲ್ಲಿಯ ದುಸ್ಥಿತಿಯ ಬಗ್ಗೆ ವಾರ್ಡ್ ಸದಸ್ಯರ ಗಮನಕ್ಕೆ ತರಲಾಗಿದೆ. ಶ್ರೀಮಂತರು ಹಾಗೂ ಪ್ರಭಾವಿಗಳು ಮಾತ್ರ ವಾಸವಿರುವ ಉದ್ಯಾನಗಳನ್ನು ಸಾಕಷ್ಟು ಅಭಿವೃದ್ಧಿಪಡಿಸಲಾಗಿದೆ. ಆದರೆ, ಬಡವರು ವಾಸಿಸುವ ಉದ್ಯಾನ ಜಾಗವನ್ನು ನಿರ್ಲಕ್ಷಿಸಲಾಗುತ್ತಿದೆ’ ಎಂದು ನಿವಾಸಿ ಸಂಜೀವ ಹಂಜಗಿ ದೂರಿದರು.

‘ಉದ್ಯಾನ ಜಾಗವನ್ನು ತಿಂಗಳಿಗೊಮ್ಮೆಯಾದರೂ ಸ್ವಚ್ಛಗೊಳಿಸಬೇಕು. ಉದ್ಯಾನದಲ್ಲಿ ಒಂದು ಕೊಳವೆ ಬಾವಿ ಕೊರೆಯಲಾಗಿದ್ದು, ಅದು ಸಹ ಬಂದ್ ಆಗಿದೆ. ಅದರ ದುರಸ್ತಿಗೆ ಪುರಸಭೆ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

‘ಮಕ್ಕಳ ಆಟದ ಸಾಮಗ್ರಿಗಳು ತುಕ್ಕು ಹಿಡಿದಿದ್ದು, ಅವೆಲ್ಲ ಕಿತ್ತು ಹೋಗಿವೆ. ಮೆಣಸಿನಕಾಯಿ ಚೀಲಗಳನ್ನು ಸಹ ಉದ್ಯಾನದಲ್ಲಿ ತಂದು ಹಾಕಲಾಗುತ್ತದೆ. ಅಂತಹ ವ್ಯಕ್ತಿಗಳಿಗೆ ದಂಡ ವಿಧಿಸಿದರೆ ಉಳಿದವರಿಗೆ ಭಯ ಹುಟ್ಟುತ್ತದೆ. ಈ ನಿಟ್ಟಿನಲ್ಲಿ ಪುರಸಭೆ ಜಾಗೃತರಾಗಬೇಕಾಗಿದೆ‘ ಎಂದು ನಿವಾಸಿ ಈರಪ್ಪ ಬಳಿಗಾರ ಹೇಳಿದರು.

ಸುಭಾಷನಗರ ಉದ್ಯಾನದ ಅಭಿವೃದ್ಧಿ ಬಗ್ಗೆ ಸದಸ್ಯರ ಜೊತೆ ಚರ್ಚಿಸಿ ಕ್ರಮ ಜರುಗಿಸಲಾಗುವುದು. ಸ್ಥಳೀಯರು ಸಹ ಸ್ವಚ್ಛತೆಗಾಗಿ ನಮ್ಮೊಂದಿಗೆ ಸಹಕರಿಸಬೇಕು
ವಿನಯಕುಮಾರ ಹೊಳೆಯಪ್ಪಗೋಳ, ಮುಖ್ಯಾಧಿಕಾರಿ ಬ್ಯಾಡಗಿ ಪುರಸಭೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.