ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಶಿಗ್ಗಾವಿ | ಜ್ಞಾನ ವೃದ್ಧಿಗೆ ಶಿಬಿರಗಳು ಅವಶ್ಯ: ಶಕುಂತಲಾ

Published 13 ಮೇ 2024, 15:42 IST
Last Updated 13 ಮೇ 2024, 15:42 IST
ಅಕ್ಷರ ಗಾತ್ರ

ಶಿಗ್ಗಾವಿ: ‘ಬೇಸಿಗೆ ಶಿಬಿರಗಳು ಮಕ್ಕಳ ಕಲಿಕೆಗೆ ಪೂರಕವಾಗಿದ್ದು, ಮಕ್ಕಳ ಸಾಮಾನ್ಯ ಜ್ಞಾನವೃದ್ಧಿಗೆ ಸಹಕಾರಿಯಾಗಿವೆ. ಭಾರತ ಸೇವಾ ಸಂಸ್ಥೆ ಹಮ್ಮಿಕೊಂಡ ಈ ಶಿಬಿರದ ಕಾರ್ಯ ಶ್ಲಾಘನೀಯ’ ಎಂದು ಬೆಂಗಳೂರಿನ ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯೆ ಶಕುಂತಲಾ ದುಂಡಿಗೌಡ್ರ ಹೇಳಿದರು.

ಪಟ್ಟಣದ ವಾಲ್ಮೀಕಿ ಭವನದಲ್ಲಿ ಸೋಮವಾರ ಭಾರತ ಸೇವಾ ಸಂಸ್ಥೆ ಸಹಯೋಗದಲ್ಲಿ ನಡೆದ ಉಚಿತ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಶಿಬಿರದ ಪ್ರಾಯೋಜಕತ್ವ ವಹಿಸಿದ್ದ ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ, ‘ನಗರದಲ್ಲಿ ಸಿಗುವ ಸೌಲಭ್ಯಗಳು ಗ್ರಾಮೀಣ ಪ್ರದೇಶದ ನಮ್ಮ ಮಕ್ಕಳಿಗೆ ಸಿಗಬೇಕೆಂಬ ಉದ್ದೇಶದಿಂದ ಉಚಿತ ಬೇಸಿಗೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಅದರಿಂದ ಮಕ್ಕಳ ಸರ್ವಾಂಗೀಣ ಜ್ಞಾನ ವಿಕಾಸಕ್ಕೆ ಸಹಕಾರಿಯಾಗಿದೆ’ ಎಂದರು.

ಗಂಜೀಗಟ್ಟಿ ಶಿವಲಿಂಗೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ‘ಶಿಬಿರದಲ್ಲಿ ಮಕ್ಕಳಿಗೆ ಶಿಕ್ಷಣದ ಜತೆಗೆ ಉತ್ತಮ ಸಂಸ್ಕಾರ ನೀಡಲಾಗಿದೆ. ಶಿಬಿರ ಯಶಸ್ವಿಯಾಗಿದೆ’ ಎಂದರು.

ಶಿಕ್ಷಕರಾದ ಬಸವರಾಜ ಹೊಸಹಳ್ಳಿ, ಬಿ.ಶ್ರೀನಿವಾಸ, ಭರತ ಕಳ್ಳಿಮನಿ, ಗುರು ಪಾಟೀಲ, ಪ್ರಭು ಗೊರವರ, ರಮೇಶ ವನಹಳ್ಳಿ, ರವಿ ಮಡಿವಾಳರ, ನವೀನ್ ಸಾಸನೂರ, ವಿಶ್ವನಾಥ ಗಾಣಿಗೇರ, ಚೇತನ್ ಕಲಾಲ, ಪ್ರತಿಕ್ ಕೊಳೆಕರ, ಮುತ್ತು ಯಲಿಗಾರ, ಚಂದ್ರು ಜಕ್ಕಣ್ಣವರ, ಸಾಧಿಕ ಮಲ್ಲೂರ, ದರ್ಶನ ಕರೂರ, ಬಸವರಾಜ ಸವಡಿ, ಶಿವಯ್ಯ ಪೂಜಾರ, ಸೇತ ಸನದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT