ಹಾವೇರಿ: ಚಾಲಕನ ನಿಯಂತ್ರಣ ತಪ್ಪಿ ಕಾರು ತುಂಗಾ ಎಡದಂಡೆ ಕಾಲುವೆಗೆ ಉರುಳಿ ಬಿದ್ದ ಪರಿಣಾಮ ಒಬ್ಬರು ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ತಾಲ್ಲೂಕಿನ ಕನವಳ್ಳಿ ಶಿಬಾರ ಗ್ರಾಮದ ಬಳಿ ಬುಧವಾರ ಬೆಳಿಗ್ಗೆ ನಡೆದಿದೆ.

ಸಿದ್ದನಗೌಡ ಬಿಷ್ಟನಗೌಡರ (45) ಮೃತಪಟ್ಟವರು. ನೆಗಳೂರು ಗ್ರಾಮದ ಪ್ರಕಾಶ ಬನ್ನಿಮಟ್ಟಿ (40) ಇವರು ಗಂಭೀರ ಗಾಯಗೊಂಡಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕಾಶ ಬನ್ನಿಮಟ್ಟಿ ಅವರು ನೆಗಳೂರು ಗ್ರಾಮ ಪಂಚಾಯಿತಿ ಅಭ್ಯರ್ಥಿ ಚನ್ನಬಸಪ್ಪ ಬನ್ನಿಮಟ್ಟಿ ಅವರ ಪುತ್ರ. ಬೆಳಿಗ್ಗೆ ಕನವಳ್ಳಿ ಗ್ರಾಮದ ಪರಮೇಶ್ವರ ದೇವಸ್ಥಾನದಲ್ಲಿ ತಂದೆಯ ಗೆಲುವಿಗಾಗಿ ಪೂಜೆ ಸಲ್ಲಿಸಿ, ಮರಳಿ ಹಾವೇರಿ ಮತ ಎಣಿಕೆ ಕೇಂದ್ರದತ್ತ ಬರುವಾಗ ದುರ್ಘಟನೆ ಸಂಭವಿಸಿದೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚುನಾವಣೆಯಲ್ಲಿ ಚನ್ನಬಸಪ್ಪ ಬನ್ನಿಮಟ್ಟಿ ಅವರು ಸೋಲು ಅನುಭವಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.