ಗುರುವಾರ , ಜುಲೈ 29, 2021
21 °C

ಹಾವೇರಿ | ‘ಆಹಾರ ಕಿಟ್‌ ಉಳ್ಳವರ ಪಾಲು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ಕಾರ್ಮಿಕ ಇಲಾಖೆಯಿಂದ ನೀಡುವ ಆಹಾರ್‌ ಕಿಟ್‌ಗಳು ದುರುಪಯೋಗವಾಗುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ನಗರಸಭೆ ಕಾಂಗ್ರೆಸ್‌ ಸದಸ್ಯರು ಸೋಮವಾರ ಕಾರ್ಮಿಕ ಇಲಾಖೆ ಸಿಬ್ಬಂದಿಗೆ ಮನವಿ ಸಲ್ಲಿಸಿದರು. 

ನೋಂದಾಯಿತ ಕಾರ್ಮಿಕರು ಮತ್ತು ಅಸಂಘಟಿತ ಕಾರ್ಮಿಕರಿಗೆ ವಿತರಿಸುತ್ತಿರುವ ಆಹಾರ್‌ ಕಿಟ್‌ಗಳು ಉಳ್ಳವರ ಪಾಲಾಗುತ್ತಿವೆ. ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಹಂಚುತ್ತಿದ್ದು, ಅದನ್ನು ಪ್ರಶ್ನಿಸಿದರೆ, ಶಾಸಕರ ಹೇಳಿದ್ದಾರೆ ಎಂದು ಬೇಜವಾಜ್ದಾರಿ ಉತ್ತರ ನೀಡುತ್ತಾರೆ. ನಮ್ಮನ್ನು ಕೇಳಲು ನೀವು ಯಾರು? ಎಂದು ಉದ್ಧಟತನದಿಂದ ಮಾತನಾಡುತ್ತಾರೆ ಎಂದು ಆರೋಪಿಸಿದರು. 

ಕಾರ್ಮಿಕ ಇಲಾಖೆಯಿಲ್ಲಿ ನೋಂದಣಿ ಮಾಡಿಕೊಂಡ ಕಾರ್ಮಿಕರಿಗೆ ಮಾತ್ರ ಕಿಟ್‌ಗಳನ್ನು ಇಲಾಖೆಯ ಸಿಬ್ಬಂದಿಯಿಂದಲೇ ವಿತರಿಸಬೇಕು ಎಂದು ಮನವಿ ಮಾಡಿದ್ದಾರೆ. 

ಕಾರ್ಮಿಕ ಇಲಾಖೆ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು. ಕಾಂಗ್ರೆಸ್‌ ಮುಖಂಡರಾದ ಐ.ಯು.ಪಠಾಣ್‌, ಪಿ.ಎಂ. ಚೋಪದಾರ, ಸಂಜೀವ ನೇರಲಗಿ, ದಾದಾಪೀರ್‌ ಐ.ಚೂಡಿಗಾರ, ಎಸ್‌.ಎಸ್‌.ಡಂಬಳ, ಎನ್‌.ಎಂ.ತಳವಾರ, ಡಿ.ಬಿ.ವೆಂಕಟೇಶ, ಎಂ.ಟಿ.ಬಿಸ್ಟನವರ, ಸಿ.ಎಸ್‌.ಲಕ್ಷ್ಮೇಶ್ವರ ಮಠ ಇತರರು ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು