ರಾಣೆಬೆನ್ನೂರು: ಭೂಮಿ ಇಲ್ಲದವರಿಗೂ ಕೋಳಿ ಸಾಕಣೆ ಲಾಭದಾಯಕ ಉದ್ಯಮ. ತಾಲ್ಲೂಕಿನ ಚಳಗೇರಿ ಗ್ರಾಮದ ಅಜ್ಜಪ್ಪ ಕರಬಸಪ್ಪ ಬಣಕಾರ ಕೋಳಿ ಸಾಕಣೆಯ ಮೂಲಕ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ.

ಅಜ್ಜಪ್ಪ ಓದಿದ್ದು ಪಿಯುಸಿ. ಚಳಗೇರಿ ಸಮೀಪದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕೆಲಸದಿಂದ ಬೇಸತ್ತು ಕೋಳಿ ಸಾಕಣೆ ಉದ್ಯಮ ಆರಂಭಿಸಿದರು. ತಮ್ಮ ಜಮೀನಿನ 4 ಗುಂಟೆ ಜಾಗದಲ್ಲಿ 100X30 ಅಳತೆಯ ಶೆಡ್ ನಿರ್ಮಿಸಿ ಸ್ವಂತ ಉದ್ದಿಮೆ ಆರಂಭಿಸಿದ್ದಾರೆ.

ಇವರ ತಂದೆ ಹೆಸರಿನಲ್ಲಿ 3 ಎಕರೆ ಜಮೀನು ಇದ್ದು, ತಂದೆ ಕರಬಸಪ್ಪ ಮತ್ತು ತಾಯಿ ಉಜ್ಜಮ್ಮ ಅವರು ಮೂರು ಎಕರೆ ಜಮೀನಿನಲ್ಲಿ ಅಡಿಕೆ ಕೃಷಿ ಮಾಡಿಕೊಂಡಿದ್ದಾರೆ. ಪತ್ನಿ ಯಶೋದಾ ಹಾಗೂ ಸಹೋದರ ಕೋಳಿ ಸಾಕಣೆಗೆ ಸಂಪೂರ್ಣ ಸಾಥ್ ನೀಡುತ್ತಾರೆ.

ನಾಟಿ ಕೋಳಿಗಳ ಮಾಂಸ ಮೃದು ಹಾಗೂ ರುಚಿಕರ. ದರ ಕೂಡ ಹೆಚ್ಚು, ಅಧಿಕ ಪ್ರೋಟೀನ್ ಹಾಗೂ ಕಡಿಮೆ ಕೊಬ್ಬು ಹೊಂದಿದ ಶಕ್ತಿವರ್ಧಕ ಆಹಾರವಾಗಿದೆ. 150 ನಾಟಿ ಕೋಳಿಗಳು ವರ್ಷವಿಡೀ ಮೊಟ್ಟೆ ಇಡುತ್ತವೆ. ಸಾವಯವ ಕೋಳಿಗಳಿಂದ ದಿನಕ್ಕೆ 150 ಮೊಟ್ಟೆಗಳು ಉತ್ಪಾದನೆಯಾಗುತ್ತವೆ. 800 ನಾಟಿ ಕೋಳಿಗಳನ್ನು ಸಾಕಿದ್ದಾರೆ. ಕೆಲವರು ದಿನವೂ ಫಾರ್ಮ್ಗೆ ಬಂದು ಮೊಟ್ಟೆ ಮತ್ತು ಕೋಳಿಗಳನ್ನು ತೆಗೆದುಕೊಂಡು ಹೋಗುತ್ತಾರೆ. ದಾವಣಗೆರೆ, ಹರಿಹರ, ರಾಣೆಬೆನ್ನೂರಿಗೆ ಹೋಲ್ಸೇಲ್ ಮಾರಾಟ ಮಾಡುತ್ತಾರೆ. ಒಂದು ಸಾವಯವ ಕೋಳಿ 1.5 ರಿಂದ 2.5 ಕೆ.ಜಿ ತೂಕ ಇರುತ್ತದೆ. ದರ ₹ 500 ರಿಂದ ₹ 700 ಇರುತ್ತದೆ. ನಾಟಿಕೋಳಿ ಮಾಂಸದ್ದು ಕನಿಷ್ಠ 1.5 ಕೆ.ಜಿಯಿಂದ 2.5 ಕೆ.ಜಿ ತೂಕವಿರುತ್ತದೆ. ಅವು ₹ 600ರಿಂದ ₹ 700 ದರಕ್ಕೆ ಮಾರಾಟವಾಗುತ್ತವೆ. ಒಂದು ವರ್ಷದಲ್ಲಿ 750 ರಿಂದ 800 ಕೋಳಿ ಮಾರಿ ₹ 1 ಲಕ್ಷಕ್ಕೂ ಹೆಚ್ಚು ಲಾಭ ಪಡೆದಿದ್ದಾರೆ. ಮೊಟ್ಟೆಯ ಗಾತ್ರವೂ ದೊಡ್ಡದು. ಕಂದು ಬಣ್ಣಹೊಂದಿದ್ದು, ಮೊಟ್ಟೆಯೊಂದಕ್ಕೆ ₹ 10ರವರೆಗೆ ತನಕ ದರ ಸಿಗುತ್ತದೆ. ಹೀಗಾಗಿ 50 ಕೋಳಿ ಮೊಟ್ಟೆಗಳ ಮಾರಾಟದಿಂದಲೇ ತಿಂಗಳಿಗೆ ₹ 2 ರಿಂದ₹ 3 ಸಾವಿರ ಆದಾಯ ಇದೆ.

ಈ ಕೋಳಿಗಳು ಕೇವಲ ಒಂದೂವರೆ ತಿಂಗಳಲ್ಲಿ ಎರಡೂವರೆ ಕೆ.ಜಿ ತೂಕ ಪಡೆಯುತ್ತವೆ. ಒಂದು ಕೆಜಿ ತೂಕ ಬರಲು ಪ್ರತಿ ಕೋಳಿಗೆ 1.6 ಕೆ.ಜಿ ಯಿಂದ 1.75 ಕೆ.ಜಿಯಷ್ಟು ಆಹಾರ ಸಾಕಾಗುತ್ತದೆ. ಮೊಟ್ಟೆ ಕೋಳಿಗಳ ಸಾಕಣೆಗೆ ಹೊಲಿಸಿದರೆ ಮಾಂಸದ ಕೋಳಿ ಸಾಕಣೆಯ ಆರಂಭಿಕ ವೆಚ್ಚ ತೀರಾ ಕಡಿಮೆ. ಸಾಕಣೆ ಕಾಲಾವಧಿ ಕೇವಲ 4ರಿಂದ 6 ವಾರಗಳು ಮಾತ್ರ. ಇವುಗಳ ಮಾಂಸಕ್ಕೆ ಬೇಡಿಕೆ ಹೆಚ್ಚು. ಮಾರುಕಟ್ಟೆ ದರ ವಿಪರೀತ ಏರಿಳಿತ ಕಾಣುವುದರಿಂದ ಒಮ್ಮೊಮ್ಮೆ ನಷ್ಟವೂ ಆಗುತ್ತದೆ.

‘ಕೆಲ ಯುವಕರು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸರಿಯಾದ ಮಾರ್ಗದರ್ಶನವಿಲ್ಲದ ಕಾರಣ ಹಾನಿ ಎದುರಿಸಿರುವ ಉದಾಹರಣೆಗಳೂ ಇವೆ. ಸ್ವಲ್ಪ ಎಚ್ಚರಿಕೆ ಕ್ರಮ ಅನುಸರಿಸಿದರೆ, ಸಾವಿರ ಕೋಳಿಗಳನ್ನು ಒಬ್ಬರೇ ನಿರ್ವಹಿಸಬಹುದು. ಕೈತುಂಬ ಆದಾಯವನ್ನೂ ಗಳಿಸಬಹುದು. ಈ ಉದ್ಯೋಗ ಕೈಗೊಳ್ಳಲು ಪರಿಶ್ರಮದೊಂದಿಗೆ ಮುನ್ನೆಚ್ಚರಿಕೆ, ವ್ಯಾವಹಾರಿಕ ಜ್ಞಾನವೂ ಬೇಕು’ ಎನ್ನುತ್ತಾರೆ ಅಜ್ಜಪ್ಪ ಬಣಕಾರ.

‘ಈ ಉದ್ಯಮಕ್ಕೆ ಸತತ ಶುದ್ಧ ನೀರಿನ ಸೌಕರ್ಯ ಬೇಕು. ರಾತ್ರಿಯೆಲ್ಲ ಬೆಳಕಿನ ಅವಶ್ಯಕತೆ ಇರುವುದರಿಂದ ವಿದ್ಯುತ್ ಅಗತ್ಯ. ಕೋಳಿಗಳಿಗೆ ಉತ್ತಮ ಸಮತೋಲಿತವಾಗಿರುವ ಆಹಾರ ನೀಡುತ್ತೇವೆ. ಇದರಿಂದ ಅಧಿಕ ಮೊಟ್ಟೆ ಮತ್ತು ಮಾಂಸ ಪಡೆಯಲು ಸಾಧ್ಯ. ನಾಟಿ ಕೋಳಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚು ಇರುವುದರಿಂದ ರೋಗ ಹಾವಳಿ ಕಡಿಮೆ. ಕೋಳಿ ಸಾಕಾಣೆಯ ಒಟ್ಟು ವೆಚ್ಚದಲ್ಲಿ ಶೇ 75 ರಷ್ಟು ಭಾಗ ಆಹಾರದ್ದಾಗಿರುತ್ತದೆ. ಮಾರಕ ರೋಗಗಳು ಬರದಂತೆ ಪಶುವೈದ್ಯರ ಸಲಹೆಯ ಮೇರೆಗೆ ಮರಿಗಳಿಗೆ ಮೂರು ಬಾರಿ ಲಸಿಕೆಯನ್ನು ನಾವೇ ಕೊಡುತ್ತೇವೆ. ಕೋಳಿಗಳಿಗೆ ಸಿಆರ್ಡಿ ಮಾಡುವ ಮೂಲಕ ಕಾಳಜಿಯಿಂದ ನೋಡಿಕೊಳ್ಳುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

‘ಕೋಳಿಮರಿಗಳು ಹುಟ್ಟಿದಾಗ 45 ಗ್ರಾಂನಿಂದ 50 ಗ್ರಾಂ ತೂಕ ಇರುತ್ತವೆ. ಅದನ್ನು ಪಡೆದ ರೈತರು ಪ್ರಾರಂಭದ 10-15 ದಿನಗಳ ಕಾಲ ವಿದ್ಯುತ್ ಬಲ್ಬುಗಳ ಮೂಲಕ ಕಾವು ಕೊಟ್ಟು ಪೌಷ್ಟಿಕ ಆಹಾರ ಹಾಕಿ ಸತತವಾಗಿ ನೀರುಣಿಸಬೇಕಾಗುತ್ತದೆ. ಒಂದೂವರೆ ತಿಂಗಳ ತನಕ ಸಾಕಿ ಮಾರಾಟ ಮಾಡುತ್ತಾರೆ. ಕೇವಲ 45 ದಿನಗಳಲ್ಲಿ ಕೋಳಿ ಮರಿಯು ತೂಕವನ್ನು 50 ಪಟ್ಟು ಹೆಚ್ಚಿಸಿಕೊಳ್ಳುತ್ತದೆ. ಕೋಳಿಯ ಗೊಬ್ಬರ ಹೆಚ್ಚು ಸಾರಜನಕ ಹೊಂದಿರುವುದರಿಂದ ಸದ್ಯಕ್ಕೆ ನಮ್ಮ ಜಮೀನಿಗೆ ಕಾಂಪೋಸ್ಟ್ ಮಾಡಿ ಕೃಷಿಗೂ ಬಳಸುತ್ತೇವೆ. ಸುತ್ತಮುತ್ತಲಿನ ರೈತರು ಕೋಳಿ ಗೊಬ್ಬರ ತೆಗೆದುಕೊಂಡು ಹೋಗುತ್ತಾರೆ’ ಎಂದು ತಿಳಿಸಿದರು.

ಸಾವಯವ ಕೋಳಿ ಸೇವನೆಯಿಂದ ಆರೋಗ್ಯ ಸುಧಾರಣೆ

‘ಕೋಳಿ ಸಾಕಣೆಗೆ ಶುದ್ಧಗಾಳಿ ಸ್ವಚ್ಛ ಮೇವು ನೀರು ಸ್ವಾಭಾವಿಕ ಶತ್ರುಗಳಾದ ಭಕ್ಷಕಗಳಿಂದ ರಕ್ಷಣೆ ಚಳಿ–ಮಳೆ ಗಾಳಿ ಮತ್ತು ಹೆಚ್ಚು ತಾಪಮಾನದಿಂದ ರಕ್ಷಣೆ ಅಗತ್ಯ. ಹವಾಮಾನವು ಮಹತ್ವದ ಪಾತ್ರ ವಹಿಸುತ್ತದೆ. ಹವಾಮಾನಕ್ಕೆ ತಕ್ಕಂತೆ ಸಾಕುವ ಪದ್ದತಿಗಳನ್ನು ರೂಪಿಸಿಕೊಳ್ಳಬಹುದು. ವಿಷ ಮುಕ್ತ ಸಾವಯವ ಮೊಟ್ಟೆ ಸೇವಿಸುವುದರಿಂದ ಉತ್ತಮ ಆರೋಗ್ಯ ಹೊಂದಬಹುದು. ಸಾವಯವ ಕೋಳಿಯಲ್ಲಿ ಪ್ರೊಟೀನ್ ಮತ್ತು ಓಮೆಗಾ -3 ಸಮೃದ್ಧವಾಗಿರುತ್ತದೆ. ಇದನ್ನು ತಿನ್ನುವುದರಿಂದ ಕೊಲೆಸ್ಟ್ರಾಲ್ ರಕ್ತದೊತ್ತಡ ಮಧುಮೇಹ ನಿಯಂತ್ರಣದಲ್ಲಿ ಇರುತ್ತವೆ. ಕಣ್ಣಿನ ಆರೋಗ್ಯ ಉತ್ತಮ ಗೊಳ್ಳುತ್ತದೆ. ಸ್ನಾಯುಗಳ ಬೆಳವಣಿಗೆಯಾಗುತ್ತವೆ’ ಎನ್ನುತ್ತಾರೆ ಪಶುವೈದ್ಯ ಡಾ.ಪಿ.ಎನ್. ಹುಬ್ಬಳ್ಳಿ.

ಶೆಡ್ ನಿರ್ಮಾಣ ನೀವು ದೊಡ್ಡ ಪ್ರಮಾಣದಲ್ಲಿ ಕೋಳಿ ಶೆಡ್ ನಿರ್ಮಾಣ ಮಾಡುವುದಾದರೆ ಬಯಲು ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು. ನೀರು ಗಾಳಿ ಬೆಳಕು ಹೆಚ್ಚಿದ್ದರೆ ಕೋಳಿಗಳ ಬೆಳವಣಿಗೆಗೆ ತುಂಬಾ ಅನುಕೂಲವಾಗುತ್ತದೆ. ಬೇಸಿಗೆಯಲ್ಲಿ ತಂಪಾಗಿರುವಂತೆ ಮತ್ತು ಚಳಿಗಾಲದಲ್ಲಿ ಬೆಚ್ಚಗೆ ಇರುವಂಥ ಸ್ಥಳವನ್ನು ಆಯ್ಕೆ ಮಾಡಬೇಕು ಎಂದು ಅಜ್ಜಪ್ಪ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.