ಹಾವೇರಿ: ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಆಶಾ ಕಾರ್ಯಕರ್ತೆ, ಪೊಲೀಸ್, ಶೂಶ್ರೂಷಕಿ, ನ್ಯಾಯಾಂಗ, ಶಿಕ್ಷಣ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ 110 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 55 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2635 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಇದುವರೆಗೆ 1715 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಇಂದಿನ ಮೂರು ಮರಣ ಪ್ರಕರಣ ಸೇರಿ ಒಟ್ಟಾರೆ 59 ಮಂದಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಒಟ್ಟಾರೆ 861 ಸಕ್ರಿಯ ಪ್ರಕರಣಗಳಿವೆ.

ಮಂಗಳವಾರ ದೃಢಗೊಂಡ ಪ್ರಕರಣಗಳಲ್ಲಿ ಹಾವೇರಿ-40, ರಾಣೆಬೆನ್ನೂರು-25, ಹಿರೇಕೆರೂರು-16, ಹಾನಗಲ್-11, ಬ್ಯಾಡಗಿ ಹಾಗೂ ಸವಣೂರ ತಲಾ-6, ಶಿಗ್ಗಾವಿ-5 ಹೊರ ಜಿಲ್ಲೆಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ

ಬಿಡುಗಡೆ:

ಶಿಗ್ಗಾವಿ-20, ರಾಣೆಬೆನ್ನೂರು-15, ಹಾವೇರಿ-8, ಹಾನಗಲ್-07, ಸವಣೂರ-4, ಹಿರೇಕೆರೂರ ತಾಲ್ಲೂಕಿನ ಒಬ್ಬರು ಗುಣಮುಖರಾಗಿ ಕೋವಿಡ್ ಆಸ್ಪತ್ರೆಯಿಂದ ಮಂಗಳವಾರ ಬಿಡುಗಡೆ ಹೊಂದಿದ್ದಾರೆ.

ಮರಣದ ವಿವರ:

ಶಿಗ್ಗಾವಿ ತಾಲ್ಲೂಕಿನ 38 ವರ್ಷದ ಪುರುಷ (ಪಿ-204066) ಆಗಸ್ಟ್ 16ರಂದು ಶಿಗ್ಗಾವಿ ಡೆಡಿಕೆಟೆಡ್ ಕೋವಿಡ್ ಆಸ್ಪತ್ರೆಯಲ್ಲಿ ಮೃತರಾಗಿದ್ದಾರೆ.ಬನ್ನೂರಿನ 60 ವರ್ಷದ ಪುರುಷ (245590) ಆಗಸ್ಟ್ 17ರಂದು ಹಾಗೂ ರಾಣೆಬೆನ್ನೂರ ನಗರದ 49 ವರ್ಷದ ಪುರುಷ (ಪಿ-217526) ಆಗಸ್ಟ್ 16ರಂದು ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ನಿಂದ ಮೃತಪಟ್ಟಿದ್ದಾರೆ. ಮೂವರು ತೀವ್ರ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಪರೀಕ್ಷೆಯಲ್ಲಿ ಕೋವಿಡ್ ದೃಢಪಟ್ಟಿತ್ತು. ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.