ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಬಸ್ ಚಾಲಕ ಸೇರಿ 96 ಮಂದಿಗೆ ಕೋವಿಡ್‌

ಜಿಲ್ಲೆಯಲ್ಲಿ 2153ಕ್ಕೆ ಏರಿಕೆಯಾದ ಪ್ರಕರಣಗಳು: 195 ಮಂದಿ ಗುಣಮುಖ
Last Updated 13 ಆಗಸ್ಟ್ 2020, 16:23 IST
ಅಕ್ಷರ ಗಾತ್ರ

ಹಾವೇರಿ: ಅಂಚೆ, ರೈಲ್ವೆ, ಅರಣ್ಯ, ಕೆ.ಎಸ್.ಆರ್.ಟಿ.ಸಿ. ನೌಕರರು ಸೇರಿದಂತೆ ಜಿಲ್ಲೆಯಲ್ಲಿ ಗುರುವಾರ 96 ಮಂದಿಗೆ ಕೋವಿಡ್-19 ದೃಢಪಟ್ಟಿದೆ ಹಾಗೂ 195 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 2153 ಕೋವಿಡ್-19 ಪ್ರಕರಣಗಳು ದೃಢಪಟ್ಟಿವೆ. ಒಟ್ಟು 1474 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ ಹಾಗೂ ಗುರುವಾರದ ಮೂವರ ಸಾವು ಪ್ರಕರಣ ಸೇರಿ ಒಟ್ಟಾರೆ 46 ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಒಟ್ಟು 633 ಸಕ್ರಿಯ ಪ್ರಕರಣಗಳಿವೆ.

ಗುರುವಾರ ದೃಢಗೊಂಡ ಪ್ರಕರಣಗಳಲ್ಲಿ ಹಾವೇರಿ-39, ರಾಣೇಬೆನ್ನೂರು-21, ಹಿರೇಕೆರೂರು ಹಾಗೂ ಸವಣೂರು ತಲಾ -9, ಬ್ಯಾಡಗಿ-7, ಶಿಗ್ಗಾವಿ-6 ಹಾಗೂ ಹಾನಗಲ್ ತಾಲ್ಲೂಕಿನಲ್ಲಿ 5 ಮಂದಿಗೆ ಸೋಂಕು ದೃಢಪಟ್ಟಿದೆ.

ಸೋಂಕಿತರ ವಿವರ:ಹಾವೇರಿ ನಗರದ ವಿವಿಧ ಬಡಾವಣೆಯಲ್ಲಿ 17, ಕನವಳ್ಳಿ-8, ಬುಡಗಟ್ಟಿ-4, ಅಗಡಿ-3, ಯಲಗಚ್ಚ, ಸಂಗೂರ, ಬಸವಣಕಟ್ಟೆ, ತಿಮ್ಮಾಪೂರ, ಮನ್ನಂಗಿ, ಕೆಸರಳ್ಳಿ ಹಾಗೂ ದೇವಗಿರಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.
ರಾಣೆಬೆನ್ನೂರು ನಗರ-16, ಅರೇಮಲ್ಲಾಪೂರ-3, ಇಟಗಿ ಹಾಗೂ ಚಿಕ್ಕಕುರುವತ್ತಿಯಲ್ಲಿ ಒಬ್ಬರಿಗೆ, ಸವಣೂರ-5, ತಳ್ಳಿಹಾಳ, ಯಲವಿಗಿ ತಂಡಾ, ತೊಂಡೂರ ಹಾಗೂ ಹುರಳಿಕೊಪ್ಪದಲ್ಲಿ ತಲಾ ಒಬ್ಬರಿಗೆ, ಹಿರೇಕೆರೂರು ತಾಲ್ಲೂಕಿನ ಮೇದೂರು-3, ರಟ್ಟೀಹಳ್ಳಿ, ಸುತ್ತಕೋಟೆ, ಅಣಜಿ, ಮೊಗಹಳ್ಳಿ, ಕಣವಿಸದ್ದಗೇರಿ ಹಾಗೂ ಹಿರೇಕೆರೂರು ಪಟ್ಟಣದಲ್ಲಿ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಬ್ಯಾಡಗಿ ಪಟ್ಟಣದ-5, ಚಿಕ್ಕಬಾಸೂರ ಹಾಗೂ ಅಗಸನಹಳ್ಳಿಯ ತಲಾ ಒಬ್ಬರಿಗೆ, ಶಿಗ್ಗಾವಿ ಪಟ್ಟಣ ಹಾಗೂ ಕಂಕಣವಾಡ ತಲಾ -2, ಕಬನೂರ, ಅಂದಲಗಿಯಲ್ಲಿ ತಲಾ ಒಬ್ಬರಿಗೆ, ಹಾನಗಲ್ ಪಟ್ಟಣ-2, ಹೊಂಕಣ, ಕಾಡಶೆಟ್ಟಿಹಳ್ಳಿ, ನಿಟಗಿನಕೊಪ್ಪ ತಲಾ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಬಿಡುಗಡೆ:ಹಿರೇಕೆರೂರು-63, ಹಾವೇರಿ-44, ಹಾನಗಲ್ ಹಾಗೂ ಶಿಗ್ಗಾವಿ ತಲಾ 27, ಸವಣೂರು-15, ರಾಣೆಬೆನ್ನೂರು-10 ಹಾಗೂ ಬ್ಯಾಡಗಿ ತಾಲ್ಲೂಕಿನಲ್ಲಿ 9 ಮಂದಿ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ.

ಮರಣದ ವಿವರ:ರಾಣೆಬೆನ್ನೂರ ತಾಲ್ಲೂಕಿನ ಚಿಕ್ಕಕುರುವತ್ತಿಯ 80 ವರ್ಷದ ಪುರುಷ (ಪಿ-206948) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 12ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಅಂದೇ ಮೃತಪಟ್ಟಿದ್ದಾರೆ.

ಸದರಿ ನಗರದ ದೊಡ್ಡಪೇಟೆ ಗರಡಿಮನೆ ನಿವಾಸಿ 50 ವರ್ಷದ ಪುರುಷ (ಪಿ-205305) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಆಗಸ್ಟ್ 10ರಂದು ಮೃತಪಟ್ಟಿದ್ದಾರೆ.

ಹಿರೇಕೆರೂರು ತಾಲ್ಲೂಕಿನ ಕಣವಿಸಿದ್ಧಗೇರಿ ಗ್ರಾಮದ 80 ವರ್ಷದ ಮಹಿಳೆ (ಪಿ-183907) ತೀವ್ರ ಉಸಿರಾಟದ ತೊಂದರೆಯಿಂದ ಆಗಸ್ಟ್ 9ರಂದು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದರು. ರ‍್ಯಾಪಿಡ್‌ ಆ್ಯಂಟಿಜೆನ್‌ ಪರೀಕ್ಷೆಯಲ್ಲಿ ಪಾಸಿಟಿವ್ ದೃಢಪಟ್ಟಿದ್ದು, ಆಗಸ್ಟ್ 13ರಂದು ಮೃತಪಟ್ಟಿದ್ದಾರೆ. ಈ ಮೂವರನ್ನು ಕೋವಿಡ್ ನಿಯಮಾನುಸಾರ ಅಂತ್ಯಸಂಸ್ಕಾರ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT