ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ | ಚೆಕ್‌ಪೋಸ್ಟ್‌: ಜಿಲ್ಲಾಧಿಕಾರಿಯಿಂದ ಪರಿಶೀಲನೆ

Published 18 ಮಾರ್ಚ್ 2024, 16:12 IST
Last Updated 18 ಮಾರ್ಚ್ 2024, 16:12 IST
ಅಕ್ಷರ ಗಾತ್ರ

ಹಾವೇರಿ: ಚುನಾವಣಾ ಅಕ್ರಮಗಳ ಬಗ್ಗೆ ಜಿಲ್ಲೆಯಾದ್ಯಂತ ತೀವ್ರ ನಿಗಾವಹಿಸಿದ್ದು, ನೀತಿಸಂಹಿತೆ ಜಾರಿಗೆ ಬಂದ ಶನಿವಾರದಿಂದಲೇ ಎಲ್ಲ ಚೆಕ್‍ಪೋಸ್ಟ್‌ಗಳಲ್ಲಿ ನಿಯೋಜಿತ ಸಿಬ್ಬಂದಿಗಳು ಕಾರ್ಯನಿರತವಾಗಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ರಘುನಂದನ್ ಮೂರ್ತಿ ಅವರು ಹಾವೇರಿ ನಗರದ ಆರ್‌ಟಿಒ ಕಚೇರಿ ಬಳಿ, ಹಾನಗಲ್ ತಾಲ್ಲೂಕು ಗೊಂದಿ, ಹೈಳ್ಳಿಬೈಲ್ ಸೇರಿದಂತೆ ವಿವಿಧ ಚೆಕ್ ಪೋಸ್ಟ್‌ಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಕಾರ್ಯಚಟುವಟಿಕೆಗಳನ್ನು ವಿಕ್ಷೀಸಿದರು.

ಹಾವೇರಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಹಾವೇರಿ ಜಿಲ್ಲೆಯಲ್ಲಿ 18 ಹಾಗೂ ಗದಗ ಜಿಲ್ಲೆಯಲ್ಲಿ 10 ಸೇರಿ ಒಟ್ಟು 28 ಚೆಕ್ ಪೋಸ್ಟ್‌ಗಳನ್ನು ಆರಂಭಿಸಲಾಗಿದೆ.

ಚುನಾವಣಾ ಬಳಕೆಗಾಗಿ ಅಕ್ರಮ ಮದ್ಯ, ಹಣ, ಹಾಗೂ ವಸ್ತುಗಳು ಸಾಗಾಣಿಕೆ ಮೇಲೆ ತೀವ್ರ ನಿಗಾವಹಿಸಲಾಗಿದೆ. ಪ್ರತಿ ವಾಹನಗಳ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಅಂತರ ಜಿಲ್ಲಾ ಗಡಿ ಭಾಗದಲ್ಲಿ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.

ಚೆಕ್ ಪೋಸ್ಟ್‌ಗಳ ವಿವರ:

ಶಿರಹಟ್ಟಿ ಕೇತ್ರದಲ್ಲಿ ಬೆಳ್ಳಟ್ಟಿ–ಹೊಳೆಇಟಗಿ ರಸ್ತೆ, ಗೋವನಾಳನ ಸವಣೂರ ರಸ್ತೆ, ರಾಮಗೇರಿಯ ಸವಣೂರ ರಸ್ತೆ, ಕೊರ್ಲಹಳ್ಳಿ ಹಡಗಲಿ ರಸ್ತೆ, ಮುಂಡರಗಿಯಯಲ್ಲಿ ಕೊಪ್ಪಳ ರಸ್ತೆಯಲ್ಲಿ ಹಾಗೂ ಗದಗದ ಕ್ಷೇತ್ರದ ದುಂದುರನ ಹುಬ್ಬಳ್ಳಿ ರಸ್ತೆಯಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.

ರೋಣ ಕ್ಷೇತ್ರದಲ್ಲಿ ಮುಂಡರಗಿ ತಾಲ್ಲೂಕು ಹಳ್ಳಿಕೇರಿ ಗ್ರಾಮದಲ್ಲಿ, ಹಿರೇಹಾಳ ಬಾದಾಮಿ ರಸ್ತೆ, ಗಜೇಂದ್ರಗಡ ಇಳಕಲ್‌ ಕ್ರಾಸ್, ಗಜೇಂದ್ರಗಡ ರೋಣ ರಸ್ತೆಯಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.

ಹಾನಗಲ್ ಕ್ಷೇತ್ರದ ಕೊಪ್ಪರಸಿಕೊಪ್ಪ, ಗೊಂದಿ, ಹಳ್ಳಿಬೈಲ್, ಸಮ್ಮಸಗಿ,, ಹಾವೇರಿ ಕ್ಷೇತ್ರದ ಯಲವಿಗಿ, ಹಾವೇರಿ ಆರ್‌ಟಿಒ ಕಚೇರಿ, ತೆರೆದಹಳ್ಳಿ, ಕಂಚಾರಗಟ್ಟಿ, ಬ್ಯಾಡಗಿ ಕ್ಷೇತ್ರದ ಕುಮ್ಮುರ ಕ್ರಾಸ್ ಹಾಗೂ ಮೊಟೇಬೆನ್ನೂರಿನಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.

ಹಿರೇಕೆರೂರು ಕ್ಷೇತ್ರದಲ್ಲಿ ಕೋಡಮಗ್ಗಿ, ಹಳ್ಳೂರು, ಹುಲಬಿಕೊಂಡ, ಜಾವಳ್ಳಿ ಹಾಗೂ ರಾಣೇಬೆನ್ನೂರು ಕ್ಷೇತ್ರದಲ್ಲಿ ಮಾಕನೂರ ಕ್ರಾಸ್, ತುಮ್ಮಿಕಟ್ಟಿ, ಹರನಗಿರಿ ಬ್ರಿಜ್ ಹಾಗೂ ಮಾಡಗೋಡ ಕ್ರಾಸ್‍ನಲ್ಲಿ ಚೆಕ್ ಪೋಸ್ಟ್ ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT