ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ರಟ್ಟೀಹಳ್ಳಿ | ಅನುದಾನ ಹಂಚಿಕೆಯಲ್ಲಿ ತಾರತಮ್ಯ: ಹೋರಾಟದ ಎಚ್ಚರಿಕೆ

Published : 30 ಆಗಸ್ಟ್ 2024, 16:06 IST
Last Updated : 30 ಆಗಸ್ಟ್ 2024, 16:06 IST
ಫಾಲೋ ಮಾಡಿ
Comments

ರಟ್ಟೀಹಳ್ಳಿ: ಹಿರೇಕೆರೂರ ವಿಧಾನಸಭಾ ಕ್ಷೇತ್ರಕ್ಕೆ ಶಾಸಕರ ಅನುದಾನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಕಾಮಗಾರಿಗೆ ₹1 ಕೋಟಿ‌ ಸರ್ಕಾರದಿಂದ ಮಂಜೂರಾತಿ ದೊರೆತಿದ್ದು, ಅನುದಾನ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿ (ಎಸ್.ಸಿ.) ಮಾದಿಗ ಜನಾಂಗವನ್ನು ಶಾಸಕರು ಕಡೆಗಣಿಸಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡಕರ ವಾದ) ಜಿಲ್ಲಾ ಘಟಕದ ಅಧ್ಯಕ್ಷ ಆನಂದ ಎಂ.ಎಂ. ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಪ್ರತಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ತಾಲ್ಲೂಕಿನ ಚಿಕ್ಕಯಡಚಿ, ಬನ್ನಿಹಟ್ಟಿ, ಬಾವಾಪುರ ಗ್ರಾಮಗಳ ಕಾಲೊನಿಗೆ ₹10 ಲಕ್ಷ ಗಳಂತೆ ಅನುದಾನ ಹಂಚಿಕೆ ಮಾಡಲಾಗಿದೆ. ಆದರೆ, ತಾಲ್ಲೂಕಿನಲ್ಲಿರುವ ಬಹುಸಂಖ್ಯಾತ ಎಸ್.ಸಿ. ಮಾದಿಗ ಜನಾಂಗ ವಾಸವಿರುವ ಗ್ರಾಮಗಳಲ್ಲಿ ಅಭಿವೃದ‍್ಧಿಗೆ ಅನುದಾನ ನೀಡಿಲ್ಲ. ಶಾಸಕರ ಈ ಧೋರಣೆಯನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ ವಾದ) ಖಂಡಿಸುತ್ತದೆ. ಶಾಸಕರು ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಮಾದಿಗ ಜನಾಂಗ ವಾಸವಿರುವ ಗ್ರಾಮಗಳ ಅಭಿವೃದ್ಧಿಗೆ ಅನುದಾನ ನೀಡಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮಾಧಿಗ ಸಮಾಜ ಹಿರಿಯ ಮುಖಂಡ ಹನುಮಂತಪ್ಪ ಗಾಜೇರ ಮಾತನಾಡಿದರು. ಮುಖಂಡರಾದ ಕುಮಾರ ದ್ಯಾವಣ್ಣನವರ, ನಾಗರಾಜ ನಡುವಿನಮನಿ ಸಂತೋಷ ಹೊಸಳ‍್ಳಿ, ಮಾಂತೇಶ ಬಕ್ಕೂರ, ರಮೇಶ ಸೊರಟೂರ, ಗಣೇಶ ಕುಂಚೂರು, ಅಣ್ಣಪ್ಪ ನಡುವಿನಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT