ಹಾವೇರಿ: ‘ಹರಪ್ಪ- ಮೆಹಂಜದಾರೊ ಕ್ರಿ.ಪೂ. 8000 ಸಾವಿರ ವರ್ಷಗಳ ಹಿಂದೆಯೇ ಸಿಂಧೂ ನಾಗರಿಕತೆ ಇತ್ತು ಎಂಬುದು ಅಧ್ಯಯನಗಳಿಂದ ಸಾಬೀತಾಗಿದೆ. ಈ ಸಿಂಧೂ ನಾಗರಿಕತೆಯೇ ಜಗತ್ತಿನ ಪುರಾತನ ನಾಗರಿಕತೆ ಎಂದು ಹೇಳಬೇಕಾಗುತ್ತದೆ. ಹರಪ್ಪ ನಾಗರಿಕತೆಯೊಂದಿಗೆ ಆಧುನಿಕ ನಾಗರಿಕತೆ ಬೆಳೆದು ಬಂದಿದೆ’ ಎಂದು ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಇಲ್ಲಿನ ಕಾಗಿನಲೆರಸ್ತೆಗೆ ಹೊಂದಿಕೊಂಡಿರುವ ಮುರುಘಾಮಠದಲ್ಲಿ ಚಂದ್ರಗುಪ್ತ ಮೌರ್ಯ ಫೌಂಡೇಶನ್‌ವತಿಯಿಂದ ಶನಿವಾರ ಆಯೋಜಿಸಿದ್ದ ಹರಪ್ಪ- ಮೆಹಂಜದಾರೊ ಜಿಲ್ಲಾ ಮಟ್ಟದ ವಿಚಾರ ಸಂಕಿರಣ ಮತ್ತು ಸಾಂಸ್ಕೃತಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮನುಷ್ಯರಲ್ಲಿ ನಾಗರಿಕತೆಯ ಚಿಂತನೆಗಳು ಇರುವುದರಿಂದ ಕಾಲ–ಕಾಲಕ್ಕೆ ಧಾರ್ಮಿಕ ಚಿಂತಕರು ಆಯಾ ಕಾಲಘಟ್ಟದಲ್ಲಿ ಉದ್ಭವಿಸುವ ಮೂಲಕ ಅನಾಗರಿಕತೆಯ ಸಮತೋಲನವನ್ನು ಧಾರ್ಮಿಕ ರೂಪದಲ್ಲಿ ಬೆಳಗಿದ್ದಾರೆ. 12ನೇ ಶತಮಾನದಲ್ಲಿ ಬಸವಾದಿ ಶರಣರು ವೈಜ್ಞಾನಿಕ ತಳಹದಿಯ ಮೇಲೆ ನವ ನಾಗರಿಕತೆಯ ಸಮ-ಸಮಾಜವನ್ನು ವೈಜ್ಞಾನಿಕ ತಳಹದಿಯ ಮೇಲೆ ಕಟ್ಟಲು ಹೊರಟಿದ್ದಿದ್ದು ಸ್ಪಷ್ಟವಾಗುತ್ತದೆ’ ಎಂದು ಅವರು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಪರಮೇಶ್ವರಪ್ಪ ಮೇಗಳಮನಿ ಮಾತನಾಡಿ, ‘ದಲಿತರನ್ನು ಪಶು-ಪಕ್ಷಿಗಳಿಗಿಂತ ಹೀನಾಯವಾಗಿ ನಡೆಸಿಕೊಳ್ಳುತ್ತಿದ್ದ ಕಾಲದಲ್ಲಿ ಶರಣರು ಹಾಗೂ ಡಾ.ಅಂಬೇಡ್ಕರ ಅವರು ನಾಗರಿಕತೆಯ ಬಗ್ಗೆ ಜಾಗೃತಿ ಮೂಡಿಸುತ್ತಾ ಸಮ ಸಮಾಜವನ್ನು ನಿರ್ಮಿಸಲು ಶ್ರಮಿಸಿದ ಕಾರಣಕ್ಕೆ ಇಂದು ಉಸಿರಾಡುವ ವಾತಾವರಣ ಇದೆ’ ಎಂದರು.

ಪತ್ರಕರ್ತ ಪರಶುರಾಮ ಡೂಗನವರ ಉಪನ್ಯಾಸ ನೀಡಿದರು.ಚಂದ್ರಗುಪ್ತ ಮೌರ್ಯ ಫೌಂಡೇಶನ್ ಕಾರ್ಯದರ್ಶಿ ಎನ್.ಎನ್.ಗಾಳೆಮ್ಮನವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯಾಧ್ಯಕ್ಷ ತಿಮ್ಮಣ್ಣ ಹಿರೇಮನಿ, ವಕೀಲರಾದ ಬಸವರಾಜ ಹಾದಿಮನಿ, ರವಿ ಕಬಾಡಿ, ಸುಶೀಲಾ ಕೋಮನಾಳ, ಗಿರಿಜಮ್ಮ ಅಂಚಿ, ಮಂಜುನಾಥ ಹಸವಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.