ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯೇಂದ್ರಗಿಂತ ಡಿಕೆಶಿ 10 ಪಟ್ಟು ಸ್ಟ್ರಾಂಗ್‌: ಮೊಹಮ್ಮದ್‌ ನಲಪಾಡ್‌

Published 16 ನವೆಂಬರ್ 2023, 12:33 IST
Last Updated 16 ನವೆಂಬರ್ 2023, 12:33 IST
ಅಕ್ಷರ ಗಾತ್ರ

ಹಾವೇರಿ: ‘ಬಿಜೆಪಿ ರಾಜ್ಯ ಘಟಕದ ನೂತನ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗಿಂತ ಹತ್ತು ಪಟ್ಟು ನಮ್ಮ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಪ್ರಬಲರಾಗಿದ್ದಾರೆ. ಅವರನ್ನು ಒಂದು ಬಾರಿ ಮುಟ್ಟಿದ್ದಕ್ಕೆ ಬಿಜೆಪಿ 66ಕ್ಕೆ ಇಳಿದಿದೆ. ಇನ್ನು ಮುಂದೆ ಅವರ ಹತ್ತಿರಕ್ಕೆ ಬಂದರೂ 33ಕ್ಕೆ ಬಿಜೆಪಿಯವರು ಹೊರಟು ಹೋಗುತ್ತಾರೆ’ ಎಂದು ರಾಜ್ಯ ಯುವ ಕಾಂಗ್ರೆಸ್‌ ಅಧ್ಯಕ್ಷ ಮೊಹಮ್ಮದ್‌ ನಲಪಾಡ್‌ ಹೇಳಿದರು.

ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೂ ಮುನ್ನ ಬೈಕ್‌ ರ್‍ಯಾಲಿ ನಡೆಸಿ, ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಬಿ.ವೈ.ವಿಜಯೇಂದ್ರ ಅವರು ಯುವ ಘಟಕದ ಅಧ್ಯಕ್ಷರಾಗಿದ್ದರೆ ಸಂತೋಷವಾಗುತ್ತಿತ್ತು. ಅವರ ಸಮಯ ಚೆನ್ನಾಗಿದೆ, ಅವರು ರಾಜ್ಯ ಘಟಕದ ಅಧ್ಯಕ್ಷರಾಗಿದ್ದಾರೆ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ಹೇಳಿದರು.

ಸಿಎಂ ಪುತ್ರ ಯತೀಂದ್ರ ಅವರು ‘ಶ್ಯಾಡೋ ಸಿಎಂ’ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರು ಹೇಗೆ ಆಡಳಿತ ಮಾಡುತ್ತಿದ್ದಾರೆ ನೀವೇ ನೋಡಿದ್ದೀರಿ. 2013ರಿಂದ 2018ರವರೆಗೆ ಹೇಗೆ ಉತ್ತಮ ಆಡಳಿತ ನೀಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ‘ಶ್ಯಾಡೋ ಸಿಎಂ’ ಯಾವುದೂ ಇಲ್ಲ. ಇದು ಕೆಲವರ ಆರೋಪವಷ್ಟೆ ಎಂದು ಉತ್ತರಿಸಿದರು.

ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆಯೇ ಎಂದ ಮಾಧ್ಯಮದವರ ಪ್ರಶ್ನೆಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಖರ್ಗೆಯವರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು ಸಿಎಂ ಆಗುತ್ತಾರೆ. ಇದು ಪಕ್ಷದ ಹೈಕಮಾಂಡ್‌ ನಿರ್ಧಾರ. ಆ ನಿರ್ಧಾರವನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಎಲ್ಲವೂ ಒಳ್ಳೆಯದಾಗಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT