ಅಕ್ಕಿಆಲೂರ (ಹಾವೇರಿ): ‘ರಕ್ತದಾನಿಗಳ ತವರೂರು’ ಎಂದು ಹೆಸರುವಾಸಿಯಾಗಿರುವ ಅಕ್ಕಿಆಲೂರು ಹೃದಯಸ್ಪರ್ಶಿ ಘಟನೆಯೊಂದಕ್ಕೆ ಸಾಕ್ಷಿಯಾಗಿದ್ದು, ಎರಡು ತಿಂಗಳ ಗರ್ಭಿಣಿ ‘ಜಿಪ್ಸಿ’ ಹೆಸರಿನ ನಾಯಿಗೆ ‘ಜಿಮ್ಮಿ’ ಹೆಸರಿನ ಇನ್ನೊಂದು ನಾಯಿ ರಕ್ತದಾನ ಮಾಡಿ ಗಮನ ಸೆಳೆದಿದೆ.
ಇಲ್ಲಿನ ಲಿಖಿತ್ ಹದಳಗಿ ಎಂಬುವವರಿಗೆ ಸೇರಿದ ಶ್ವಾನಕ್ಕೆ ಅನಾರೋಗ್ಯದ ಹಿನ್ನೆಲೆಯಲ್ಲಿ ಶನಿವಾರ ಪಶು ಚಿಕಿತ್ಸಾಲಯಕ್ಕೆ ಕರೆತರಲಾಗಿತ್ತು. ಆರೋಗ್ಯ ತಪಾಸಣೆ ಮಾಡಿದ ವೈದ್ಯರು ರಕ್ತದ ತುರ್ತು ಅಗತ್ಯ ಇರುವ ಬಗೆಗೆ ಗಮನಕ್ಕೆ ತಂದರು. ವಿಷಯ ತಿಳಿದು ಸ್ಥಳೀಯ ನಿವಾಸಿ ವೈಭವ ಪಾಟೀಲ ಎಂಬುವವರು ತಮಗೆ ಸೇರಿದ ನಾಯಿ ಜಿಮ್ಮಿಯನ್ನು ಕರೆತಂದರು.
ಜಿಮ್ಮಿಯ ದೇಹದಿಂದ 350 ಎಂಎಲ್ ರಕ್ತ ತೆಗೆದು ಜಿಪ್ಸಿಗೆ ಹಾಕಲಾಯಿತು. ಈ ಪ್ರಕ್ರಿಯೆಗೆ ಪಶು ವೈದ್ಯರಾದ ಡಾ.ಅಮಿತ್ ಪುಠಾಣಿಕರ ಮತ್ತು ಡಾ.ಸಂತೋಷ ನೆರವಾದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.