ರಾಣೆಬೆನ್ನೂರು (ಹಾವೇರಿ ಜಿಲ್ಲೆ): ತಾಲ್ಲೂಕಿನ ಪತ್ತೇಪುರ ಗ್ರಾಮದ ಜಮೀನಿನಲ್ಲಿ ಬುಧವಾರ ಬೆಳಿಗ್ಗೆ ವಿದ್ಯುತ್ ಸ್ಪರ್ಶದಿಂದ ಕರಬಸಪ್ಪ ಕಡೇನಾಯಕನಹಳ್ಳಿ (50) ಮತ್ತು ಅವರ ಪುತ್ರ ದರ್ಶನ (26) ಎಂಬುವರು ಮೃತಪಟ್ಟರು.
‘ನೀರೆತ್ತುವ ಮೋಟರ್ ಚಾಲು ಮಾಡುವಾಗ, ಅವಘಡ ಸಂಭವಿಸಿದೆ. ಇಬ್ಬರೂ ಸ್ಥಳದಲ್ಲೇ ಮೃತಪಟ್ಟರು. ಘಟನೆ ಕುರಿತು ಹೆಸ್ಕಾಂ ಅಧಿಕಾರಿಗಳಿಂದ ಮಾಹಿತಿ ಪಡೆದು, ಮುಂದಿನ ಕ್ರಮ ಜರುಗಿಸಲಾಗುವುದು’ ಎಂದು ಪೊಲೀಸರು ತಿಳಿಸಿದ್ದಾರೆ.