ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ‘ಸ್ಥಳೀಯರಿಗೆ ಬರೆ, ಹೊರರಾಜ್ಯದವರಿಗೆ ಮಣೆ’

ಸಕ್ಕರೆ ಕಾರ್ಖಾನೆ ಮುಂಭಾಗ ರೈತರು, ಕಾರ್ಮಿಕರ ಪ್ರತಿಭಟನೆ
Last Updated 26 ಜೂನ್ 2020, 16:09 IST
ಅಕ್ಷರ ಗಾತ್ರ

ಹಾವೇರಿ: ತಾಲ್ಲೂಕಿನ ಸಂಗೂರಿನ ಕರ್ನಾಟಕ ಸಹಕಾರಿ ಸಕ್ಕರೆ ಕಾರ್ಖಾನೆಯ ಗುತ್ತಿಗೆದಾರರು ನಿಯಮದ ಪ್ರಕಾರ ನಡೆದುಕೊಳ್ಳದೆ, ಒಪ್ಪಂದ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಕಾರ್ಮಿಕರು ಮತ್ತು ಕಬ್ಬು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಖಾನೆ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ, ಹಲವಾರು ವರ್ಷಗಳಿಂದ ದುಡಿಯುತ್ತಿರುವ ಕಾರ್ಮಿಕರನ್ನು ವಿನಾಕಾರ‌ಣ ಕೆಲಸದಿಂದ ತೆಗೆದು ಹಾಕಲಾಗಿದೆ. ಸ್ಥಳೀಯರನ್ನು ಕಡೆಗಣಿಸಿ ಹೊರರಾಜ್ಯದ ಕಾರ್ಮಿಕರಿಗೆ ಮಣೆ ಹಾಕಲಾಗಿದೆ. ಕಬ್ಬು ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

‘ವಿಆರ್‌ಎಸ್‌’ ನೀಡಿ ಹಲವು ವರ್ಷವಾಗಿದ್ದರೂ, ಒಪ್ಪಂದದ ಪ್ರಕಾರ ಬಾಕಿ ಹಣವನ್ನು ಕೊಡುತ್ತಿಲ್ಲ. ಹಣ ಕೊಡಿ ಎಂದು ಕೇಳಿದರೂ ಕಾರ್ಖಾನೆ ವ್ಯವಸ್ಥಾಪಕರು ಮತ್ತು ಗುತ್ತಿಗೆದಾರು ಆಸಕ್ತಿ ತೋರುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

31 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವ ಜಿ.ಎಂ.ಶುಗರ್ಸ್‌ ಮತ್ತು ಎನರ್ಜಿ ಅವರುಕಾರ್ಮಿಕ ಹಾಗೂ ರೈತರಿಗೆ ಅನ್ಯಾಯ ಮಾಡುತ್ತಾ ಬರುತ್ತಿದ್ದಾರೆ. ಕಾರ್ಖಾನೆ ಸ್ಥಾಪನೆ ಸಮಯದಲ್ಲಿ ಜಮೀನು ಕಳೆದುಕೊಂಡವರ ಮಕ್ಕಳನ್ನು ಕೆಲಸದಿಂದ ತೆಗೆದು ಹಾಕಿರುವುದು ಮತ್ತು ಕೆಲವು ನೌಕರರನ್ನು ದುರುದ್ದೇಶದಿಂದ ಕೆಲಸದಿಂದ ತೆಗೆದುಹಾಕಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2016–17ನೇ ಸಾಲಿನ ಬಾಕಿ ಹಣ ₹130 ಪ್ರತಿ ಟನ್‌ಗೆ ನೀಡಬೇಕಾಗಿದ್ದು, ಈ ಹಣವನ್ನು ಗುತ್ತಿಗೆದಾರರಿಂದ ಶೀಘ್ರ ವಸೂಲಿ ಮಾಡುವುದು ಹಾಗೂಕೆಲಸದಿಂದ ತೆಗೆದುಹಾಕಿರುವ ಕಾರ್ಮಿಕರನ್ನು ಕೂಡಲೇ ಕೆಲಸಕ್ಕೆ ಸೇರಿಸಿಕೊಳ್ಳಬೇಕು. ಕಬ್ಬಿಗೆ ಅಂತಿಮ ದರ ನಿಗದಿಪಡಿಸಬೇಕು. ಹೊರ ರಾಜ್ಯದಿಂದ ಕೆಲಸಕ್ಕೆ ಬಂದಿದ್ದ ಕಾರ್ಮಿಕರನ್ನು ತೆಗೆಯಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಸಪ್ಪ ಚನ್ನಬಸಪ್ಪ ನೆಗಳೂರ, ಉಪಾಧ್ಯಕ್ಷ ಶಂಕರಗೌಡ ಸುಂಕದ, ಪ್ರಧಾನ ಕಾರ್ಯದರ್ಶಿ ಮಂಜಪ್ಪ ಚನ್ನಬಸಪ್ಪ ಪುಟ್ಟಣ್ಣನವರ, ಕಾರ್ಯದರ್ಶಿ ಲೋಹಿತಪ್ಪ ಹೊಂಕಳದ, ಎಸ್.ವಿ. ಸವೂರ, ಪಿ.ಎಸ್. ಪೂಜಾರ, ಮಲ್ಲೇಶಪ್ಪ ಹೋತನಹಳ್ಳಿ, ಸಿದ್ದಲಿಂಗಪ್ಪ ಕ್ಯಾಲಕೊಂಡ, ರಮೇಶ ಬಕ್ಕಣ್ಣನವರ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT