ಶುಕ್ರವಾರ, 20 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಮಕ್ಕಳಲ್ಲಿ ಸಂಶೋಧನಾ ಪವೃತ್ತಿ ಬೆಳೆಸಿ: ಗಿರೀಶ ಪದಕಿ ಸಲಹೆ

Published : 9 ನವೆಂಬರ್ 2023, 5:29 IST
Last Updated : 9 ನವೆಂಬರ್ 2023, 5:29 IST
ಫಾಲೋ ಮಾಡಿ
Comments

ಹಾವೇರಿ: ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಹಾಗೂ ಸಂಶೋಧನಾ ಪ್ರವೃತ್ತಿ ಬೆಳೆಸಲು ಶಿಕ್ಷಕರು ಮುಂದಾಗಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಗಿರೀಶ ಪದಕಿ ಸಲಹೆ ನೀಡಿದರು.

ನಗರದ ಎಸ್.ಎಂ.ಎಸ್. ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಘಟಕದ ಸಹಯೋಗದಲ್ಲಿ ಈಚೆಗೆ ಆಯೋಜಿಸಿದ್ದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾ ಮಾರ್ಗದರ್ಶಿ ಅಧ್ಯಾಪಕರಿಗಾಗಿ ಏರ್ಪಡಿಸಿದ್ದ ಪೂರ್ವಭಾವಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

‘ಸಂಶೋಧನೆಗಳಲ್ಲಿ ತೊಡಗಲು ಅವಕಾಶಗಳ ಸರಮಾಲೆಯೇ ಇದೆ. ಸಂಶೋಧನೆ ಮೂಲ ವೈಜ್ಞಾನಿಕ ಪ್ರಜ್ಞೆ. ಪ್ರತಿಯೊಂದು ಘಟನೆಯ ಹಿಂದೆ ಒಂದು ವೈಜ್ಞಾನಿಕ ಸತ್ಯ ಇರುತ್ತದೆ. ಆ ಒಂದು ಸತ್ಯವನ್ನು ಕಂಡುಕೊಳ್ಳುವ ಕ್ರಮವೇ ವೈಜ್ಞಾನಿಕ ಪ್ರಜ್ಞೆ’ ಎಂದು ಹೇಳಿದರು.

‘ಮಕ್ಕಳನ್ನು ಚಿಂತನೆಗೆ ಹಚ್ಚುವಂತಹ ಇನ್‍ಸ್ಪೈರ್ಡ್ ಅವಾರ್ಡ್, ಮಕ್ಕಳ ಸಮಾವೇಶ, ವಿಜ್ಞಾನ ಪ್ರದರ್ಶನ, ವಿಜ್ಞಾನಗೋಷ್ಠಿಗಳಂತಹ ಸಾಕಷ್ಟು ಕಾರ್ಯಕ್ರಮಗಳ ಅವಕಾಶಗಳಿವೆ. ಈ ಅವಕಾಶಗಳಿಂದ ವಿದ್ಯಾರ್ಥಿಗಳು ವಂಚಿತರಾಗಬಾರದು’ ಎಂದು ಹೇಳಿದರು.

ವಿಜ್ಞಾನ ಬರಹಗಾರ ಎಸ್.ಆರ್.ಪಾಟೀಲ ಮಾತನಾಡಿ, ‘ಮಳೆ ಕೊರತೆಯಿಂದ ಬರಗಾಲ ಎದುರಾಗಿರುವ ಈ ಪರಿಸ್ಥಿತಿಯಲ್ಲಿ ಸಾವೆ, ನವಣೆ, ಬರಗು, ಹಾರಕ, ರಾಗಿಯಂತಹ ಸಿರಿಧಾನ್ಯಗಳನ್ನು ಬೆಳೆಯುವಂತೆ ರೈತರಿಗೆ ತಲುಪಿಸುವ ಯೋಜನೆ ರೂಪಿಸಬೇಕು’ ಎಂದು ಸಲಹೆ ನೀಡಿದರು.

ನವೀಕರಿಸಲಾಗದ ಇಂಧನಗಳಿಗೆ ಪರ್ಯಾಯವಾಗಿ ಯೋಜನೆ ರೂಪಿಸಬಹುದಾಗಿದೆ. ನವೀಕರಿಸಲಾಗದ ಪೆಟ್ರೋಲಿಯಂ ಇಂಧನಗಳ ಬಳಕೆಯಿಂದ ವಾರ್ಷಿಕವಾಗಿ ಜಾಗತಿಕ ಮಟ್ಟದಲ್ಲಿ ಸುಮಾರು 21 ಬಿಲಿಯನ್ ಟನ್ ಕಾರ್ಬನ್ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಇದರಲ್ಲಿ ಶೇ 50ರಷ್ಟು ಕಾರ್ಬನ್ ಡೈ ಆಕ್ಸೈಡ್ ಮಾತ್ರ ಸಸ್ಯಗಳು ಹೀರಿಕೊಳ್ಳುತ್ತವೆ. ಉಳಿದ ಶೇ 50ರಷ್ಟು ಭಾಗ ಕಾರ್ಬನ್ ಡೈ ಆಕ್ಸೈಡ್ ಜಾಗತಿಕ ತಾಪಮಾನ ಏರಿಕೆಗೆ ಕಾರಣವಾಗಿರುವುದು ಆಘಾತಕಾರಿ’ ಎಂದು ಕಳವಳ ವ್ಯಕ್ತಪಡಿಸಿದರು.

ಶಿಕ್ಷಕ ಡಾ.ಲಿಂಗರಾಜ ರಾಮಾಪೂರ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿಜ್ಞಾನ ಪರಿವೀಕ್ಷಕ ಎಸ್.ಪಿ.ಮೂಡಲದವರ, ಡಯಟ್ ಹಿರಿಯ ಉಪನ್ಯಾಸಕ ಎಸ್.ಎಸ್.ಅಡಿಗ, ಆನಂದ ಉದಮಿ, ನಿವೃತ್ತ ಶಿಕ್ಷಕ ಪಿ.ಬಿ.ಮುದ್ದಿ ಹಾಗೂ ಮೃತ್ಯುಂಜಯ ಅಂಗಡಿ ಇದ್ದರು.

ಜಿಲ್ಲಾ ಸಂಯೋಜಕ ಕೆ.ಎಸ್.ದಳವಾಯಿ ಸ್ವಾಗತಿಸಿದರು. ಎ.ಎಚ್. ಕಬ್ಬಿಣಕಂತಿಮಠ ವಂದಿಸಿದರು. ಜಿ.ಎಸ್. ಹತ್ತಿಮತ್ತೂರ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT