ಸೋಮವಾರ, ನವೆಂಬರ್ 23, 2020
22 °C
ದೀಪಾವಳಿ ಸಂದರ್ಭ ನಡೆಯುವ ವಿಶಿಷ್ಟ ಸ್ಪರ್ಧೆ

ಹೋರಿ ಹಬ್ಬಕ್ಕೆ ಅನುಮತಿ ನೀಡಿ: ಬಸವರಾಜ ಡಿ.ಬಂಡಿವಡ್ಡರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ದೀಪಾವಳಿ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಪ್ರತಿ ವರ್ಷ ನಡೆಯುವ ‘ಹೋರಿ ಹಬ್ಬ’ಕ್ಕೆ ಜಿಲ್ಲಾಡಳಿತ ಈ ವರ್ಷವೂ ಅವಕಾಶ ಮಾಡಿಕೊಡಬೇಕು ಎಂದು ಅಖಿಲ ಕರ್ನಾಟಕ ರೈತರ ಜಾನಪದ ಕ್ರೀಡೆ ಹೋರಿ ಹಬ್ಬ ಹೋರಾಟ ಸಮಿತಿ ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಡಿ.ಬಂಡಿವಡ್ಡರ ಮನವಿ ಮಾಡಿದ್ದಾರೆ. 

ದೀಪಾವಳಿ ಸಂದರ್ಭ ಜಾನುವಾರುಗಳನ್ನು ಪೂಜಿಸುವ ಸಂಪ್ರದಾಯ ನಮ್ಮಲ್ಲಿ ಮೊದಲಿನಿಂದಲೂ ಇದೆ. ಈ ಸಂದರ್ಭದಲ್ಲಿ ನಡೆಯುವ ಹೋರಿ ಹಬ್ಬ (ಹಟ್ಟಿ ಹಬ್ಬ) ಬಹಳ ವಿಶೇಷತೆ ಹೊಂದಿದೆ. ರೈತರಿಗೆ, ಯುವಕರಿಗೆ ಮತ್ತು ಪೈಲ್ವಾನರಿಗೆ ಹಾಗೂ ಕೊಬ್ಬಿದ ಹೋರಿಗಳಿಗೆ ಅತ್ಯಂತ ಉತ್ಸಾಹದಾಯಕ ಸ್ಪರ್ಧೆಯಾಗಿದೆ ಎಂದು ತಿಳಿಸಿದ್ದಾರೆ. 

ಹೋರಿಗಳ ಕೊರಳಿಗೆ ಗೆಜ್ಜೆ ಕಟ್ಟಿದ ದಿನದಿಂದ ಅವುಗಳ ನಡತೆಯೇ ಬದಲಾಗುತ್ತದೆ. ಹೋರಿಗಳು ಚಿನ್ನಾಟವಾಡಲು ಆರಂಭಿಸುತ್ತವೆ. ನಾಡಿನ ಸಂಸ್ಕೃತಿ ಮತ್ತು ಪರಂಪರೆಯ ಧ್ಯೋತಕವಾಗಿ ‘ಹೋರಿ ಹಬ್ಬ’‌ವನ್ನು ಕೋವಿಡ್‌ ಮಾರ್ಗಸೂಚಿ ಪ್ರಕಾರ ಅಂತರ ಕಾಯ್ದುಕೊಂಡು, ಸರಳವಾಗಿ ಆಚರಿಸಲು ನಿರ್ಧರಿಸಿದ್ದೇವೆ. ಈಗಾಗಲೇ ಕೃಷಿ ಸಚಿವ, ಗೃಹ ಸಚಿವ, ಸಂಸದರ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇವೆ. ಹಾಗಾಗಿ ಅವಕಾಶ ಮಾಡಿಕೊಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು