ಹಾನಗಲ್: ಎರಡು ವರ್ಷದ ಅವಧಿಗಾಗಿ ಹಾನಗಲ್ ವಕೀಲರ ಸಂಘದ ಪದಾಧಿಕಾರಿಗಳ 6 ಸ್ಥಾನಗಳಿಗೆ ಚುನಾವಣೆ ಶನಿವಾರ ನಡೆಯಿತು. ನೂತನ ಅಧ್ಯಕ್ಷರಾಗಿ ಎಂ.ಸಿ.ಮಹಾಂತಿನಮಠ ಚುನಾಯಿತರಾದರು.

ಉಪಾಧ್ಯಕ್ಷರಾಗಿ ರಮೇಶ ತಳವಾರ, ಕಾರ್ಯದರ್ಶಿಯಾಗಿ ಸತೀಶ ತಿಳವಳ್ಳಿ, ಸಹ ಕಾರ್ಯದರ್ಶಿಯಾಗಿ ಎಸ್.ಎಸ್.ಅಕ್ಕಿ, ಕೋಶಾಧ್ಯಕ್ಷರಾಗಿ ಎಸ್.ಬಿ.ಸುಬ್ಬಣ್ಣನವರ, ಗ್ರಂಥಪಾಲಕರಾಗಿ ಕಾಂಚನಾ ಆರೇರ ಚುನಾಯಿತರಾದರು.

ಇಲ್ಲಿನ ವಕೀಲರ ಸಂಘದ ಸಭಾಂಗಣದಲ್ಲಿ ಶನಿವಾರ ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆ ತನಕ ಮತದಾನ ನಡೆಯಿತು. 167 ಮತದಾರರಲ್ಲಿ 164 ಮತಗಳು ಚಲಾವಣೆಗೊಂಡವು. ಬಳಿಕ ಫಲಿತಾಂಶ ಘೋಷಿಸಲಾಯಿತು. ಚುನಾವಣಾಧಿಕಾರಿಯಾಗಿ ವಕೀಲ ಎಸ್.ಟಿ.ಕಾಮನಹಳ್ಳಿ ಕಾರ್ಯನಿರ್ವಹಿಸಿದರು. ನೂತನ ಪದಾಧಿಕಾರಿಗಳನ್ನು ವಕೀಲರು ಅಭಿನಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.