ಹಾವೇರಿ: ‘ಸುಭಾಷ್ ಸರ್ಕಲ್ ಬಳಿಯ ದಾನಮ್ಮದೇವಿ ದೇವಸ್ಥಾನ ಎದುರಿಗಿರುವ ಖಬರ್ಸ್ತಾನ್ದಲ್ಲಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗುತ್ತಿದೆ. ಮಳಿಗೆ ನಿರ್ಮಾಣ ಕೆಲಸವನ್ನು ಬಂದ್ ಮಾಡಿಸಬೇಕು’ ಎಂದು ಆಗ್ರಹಿಸಿ ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಸಲು ಮುಂದಾದ 50ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಮಧ್ಯಾಹ್ನ ಬಿಡುಗಡೆಗೊಳಿಸಿದರು.

ಅಂಜುಮನ್ ಸಂಸ್ಥೆಯವರು ಖಬರ್ಸ್ತಾನ್ ಜಾಗದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸುತ್ತಿದ್ದಾರೆ. ಇತ್ತೀಚೆಗೆ ಕೆಲ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿದ್ದರಿಂದ, ಮಳಿಗೆ ನಿರ್ಮಾಣ ಸ್ಥಗಿತಗೊಳಿಸುವಂತೆ ಅಂಜುಮನ್ ಸಂಸ್ಥೆಯವರಿಗೆ ನಗರಸಭೆ ಅಧಿಕಾರಿಗಳು ನೋಟಿಸ್ ನೀಡಿದ್ದರು. ಇದಾದ ನಂತರವೂ ಸುತ್ತಲಿನ ಜಾಗವನ್ನು ಬಟ್ಟೆಯಿಂದ ಮುಚ್ಚಿ ಕೆಲಸವನ್ನು ಮುಂದುವರಿಸಿರುವ ಆರೋಪವಿದೆ.

‘ಖಬರ್ಸ್ತಾನ್ನಲ್ಲಿ ನಿರ್ಮಿಸಲಾಗುತ್ತಿರುವ ಮಳಿಗೆಗಳು ಅಕ್ರಮವಾಗಿದೆ. ಈ ಕೆಲಸವನ್ನು ಶಾಶ್ವತವಾಗಿ ಬಂದ್ ಮಾಡಿಸಬೇಕು’ ಎಂದು ಆಗ್ರಹಿಸಿ ಶ್ರೀರಾಮಸೇನೆ ಸಂಘಟನೆ ನೇತೃತ್ವದಲ್ಲಿ ಸೋಮವಾರ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಪುರಸಿದ್ದೇಶ್ವದ ದೇವಸ್ಥಾನದಿಂದ ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ಮೆರವಣಿಗೆ ನಡೆಸಿ, ನಗರಸಭೆ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾನಿಸಲಾಗಿತ್ತು.

ಪುರಸಿದ್ದೇಶ್ವರ ದೇವಸ್ಥಾನ ಬಳಿ ಸೋಮವಾರ ಸೇರಿದ್ದ ಶ್ರೀರಾಮಸೇನೆ ಪದಾಧಿಕಾರಿಗಳು ಹಾಗೂ ಬಿಜೆಪಿ ಕಾರ್ಯಕರ್ತರು, ಪ್ರತಿಭಟನಾ ರ್ಯಾಲಿ ಆರಂಭಿಸಲು ಮುಂದಾಗಿದ್ದರು.

ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದ ಪ್ರತಿಭಟನಕಾರರು, ‘ಮುಸ್ಲಿಂ ಸಮುದಾಯದವರನ್ನು ಓಲೈಕೆ ಮಾಡಲು ರಾಜ್ಯ ಸರ್ಕಾರ, ಅಕ್ರಮಗಳಿಗೆ ಸಾಥ್ ನೀಡುತ್ತಿದೆ. ರಾಜ್ಯ ಸರ್ಕಾರದ ನಿಲುವಿನಿಂದಾಗಿ ಸಾಮಾನ್ಯ ವರ್ಗದ ಜನರು ಬದುಕು ಕಷ್ಟಕರವಾಗಿದೆ’ ಎಂದರು ದೂರಿದರು.

ಪ್ರತಿಭಟನಾ ಸ್ಥಳದಲ್ಲಿದ್ದ ಪೊಲೀಸರು, ‘ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಪ್ರತಿಭಟನೆಗೆ ಯಾವುದೇ ಅನುಮತಿ ಪಡೆದಿಲ್ಲ. ಹೀಗಾಗಿ, ಪ್ರತಿಭಟನೆ ಕೈ ಬಿಟ್ಟು ಸ್ಥಳದಿಂದ ಹೊರಟುಹೋಗಿ’ ಎಂದು ಕೋರಿದರು. ಆದರೆ, ಪ್ರತಿಭಟನೆ ರ್ಯಾಲಿ ಮುಂದುವರಿಸುವುದಾಗಿ ಪ್ರತಿಭಟನಕಾರರು ಪಟ್ಟು ಹಿಡಿದರು.

ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸ್ಥಳದಲ್ಲಿದ್ದ ಪ್ರತಿಭಟನಕಾರರನ್ನು ವಶಕ್ಕೆ ಪಡೆದ ಪೊಲೀಸರು, ವಾಹನದಲ್ಲಿ ಕೇರಿಮತ್ತಿಹಳ್ಳಿಯಲ್ಲಿರುವ ಮೈದಾನಕ್ಕೆ ಕರೆದೊಯ್ದರು. ಪೊಲೀಸ್ ವಾಹನದಲ್ಲಿದ್ದ ಪ್ರತಿಭಟನಕಾರು, ‘ಅಕ್ರಮವಾಗಿ ವಾಣಿಜ್ಯ ಮಳಿಗೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರು ಕುಮ್ಮಕ್ಕು ನೀಡುತ್ತಿದ್ದಾರೆ. ಅವರಿಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು. ಕೆಲ ಹೊತ್ತು ಮೈದಾನದಲ್ಲಿದ್ದ ಕಾರ್ಯಕರ್ತರನ್ನು, ಮಧ್ಯಾಹ್ನದ ನಂತರ ಬಿಟ್ಟು ಕಳುಹಿಸಲಾಯಿತು.

ಪ್ರತಿಭಟನಕಾರರು ಇನ್ನೊಂದು ಗುಂಪು, ಹುಕ್ಕೇರಿ ಮಠದಿಂದ ರ್ಯಾಲಿ ಆರಂಭಿಸಲು ಮುಂದಾಗಿತ್ತು. ಸ್ಥಳಕ್ಕೆ ಹೋಗಿದ್ದ ಪೊಲೀಸರು, ಅಲ್ಲಿಯೂ ಹಲವರನ್ನು ವಶಕ್ಕೆ ಪಡೆದರು.

ಮಾಜಿ ಶಾಸಕ ಶಿವರಾಜ ಸಜ್ಜನರ, ಸಿದ್ದರಾಜ ಕಲಕೋಟಿ, ಜಗದೀಶ ಬಸೇಗಣ್ಣಿ, ಕಿರಣ ಕೊಳ್ಳಿ, ಗವಿಸಿದ್ದಪ್ಪ ದ್ಯಾಮಣ್ಣನವರ, ವಿಜಯಕುಮಾರ ಚಿನ್ನಿಕಟ್ಟಿ, ಪ್ರಭು ಹಿಟ್ನಳ್ಳಿ, ಶಂಭಣ್ಣ ಜತ್ತಿ, ಕೆ.ಸಿ. ಪಾವಲಿ, ನಿರಂಜನ ಹೆರೂರ, ಸಂತೋಷ ಆಲದಕಟ್ಟಿ, ಮುತ್ತಣ್ಣ ಮುಷ್ಠಿ, ಬಸವರಾಜ ಹಾಲಪ್ಪನವರ, ಪ್ರವೀಣ ಶೆಟ್ಟರ್, ಶಿವಯೋಗಿ ಕೊಳ್ಳಿ, ಚನ್ನಮ್ಮ ಬ್ಯಾಡಗಿ, ರೋಹಿಣಿ ಪಾಟೀಲ ಇದ್ದರು.

ವೀರಶೈವ ತರುಣ ಸಂಘ, ಶಿವಶಕ್ತಿ ಯುವಕ ಮಂಡಳಿ, ಸುಭಾಷ್ ಚಂದ್ರ ಬೋಸ್ ಯುವಕ ಮಂಡಳಿ, ಮಾದಿಗ ದಂಡೋರ ಹೋರಾಟ ಸಮಿತಿ, ಹುಕ್ಕೇರಿಮಠ ಅಕ್ಕನ ಬಳಗ, ಲಾರಿ ಮಾಲೀಕರ ಸಂಘ, ಕಿರಾಣಿ ವ್ಯಾಪಾರಸ್ಥರ ಸಂಘ, ಹಿಂದೂ ಜಾಗರಣ ವೇದಿಕೆ, ವಿಶ್ವ ಹಿಂದೂ ಪರಿಷತ್ ಹಾಗೂ ಇತರೆ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದರು.

ಹುಕ್ಕೇರಿಮಠ, ಗಾಂಧಿರಸ್ತೆ, ಸುಭಾಷ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೆಲ ವ್ಯಾಪಾರಸ್ಥರು, ಅಂಗಡಿಗಳನ್ನು ಬಂದ್ ಮಾಡಿ ಪ್ರತಿಭಟನೆಯನ್ನು ಬೆಂಬಲಿಸಿದರು. ವಾಣಿಜ್ಯ ಮಳಿಗೆ ಸಂಬಂಧ ಹೋರಾಟ ಆರಂಭವಾಗಿರುವುದರಿಂದ, ಖಬರ್ಸ್ತಾನ್ ಬಳಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಪ್ರತಿಭಟನಾ ರ್ಯಾಲಿಗೆ ತಯಾರಿ ಪೊಲೀಸರು–ಪ್ರತಿಭಟನಕಾರರ ನಡುವೆ ವಾಗ್ವಾದ ಮಧ್ಯಾಹ್ನದ ನಂತರ ಪ್ರತಿಭಟನಕಾರರ ಬಿಡುಗಡೆ

ಖಬರ್ಸ್ತಾನ್ನಲ್ಲಿ ಮಳಿಗೆ ನಿರ್ಮಾಣ ಕೆಲಸವನ್ನು ತಾತ್ಕಾಲಿಕವಾಗಿ ಬಂದ್ ಮಾಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ. ನಗರಸಭೆ ಅಧಿಕಾರಿಗಳ ಮೂಲಕ ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ವಿಜಯ ಮಹಾಂತೇಶ ದಾನಮ್ಮನವರ ಜಿಲ್ಲಾಧಿಕಾರಿ

ಗೃಹ ಬಂಧನದಲ್ಲಿ ಮುತಾಲಿಕ್ ಪ್ರತಿಭಟನೆಗೆ ಕರೆ ನೀಡಿದ್ದ ಧಾರವಾಡ ವಿಭಾಗದ ಅಧ್ಯಕ್ಷ ಗದಿಗೆಪ್ಪ ಕುರುವತ್ತಿ ಹಾಗೂ ಹಾವೇರಿ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ ಕಾರಡಗಿ ಅವರನ್ನು ಮನೆಯಲ್ಲಿ ಸೋಮವಾರ ಬೆಳಿಗ್ಗೆ ಪೊಲೀಸರು ವಶಕ್ಕೆ ಪಡೆದರು. ಪ್ರತಿಭಟನೆ ಬಗ್ಗೆ ಮಾಹಿತಿ ತಿಳಿದಿದ್ದ ಪೊಲೀಸರು ಕಾರಡಗಿಯಲ್ಲಿರುವ ಗದಿಗೆಪ್ಪ ಅವರ ಮನೆಗೆ ತೆರಳಿ ವಶಕ್ಕೆ ಪಡೆದರು. ಹಾವೇರಿ ಪ್ರವೇಶಿಸುತ್ತಿದ್ದ ಸಂದರ್ಭದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ವಿನಾಯಕ ಇಚ್ಚಂಗಿ ಹಾಗೂ ಇತರರನ್ನು ಪೊಲೀಸರು ಕಸ್ಟಡಿಗೆ ಪಡೆದು ಕರೆದೊಯ್ದರು. ಪ್ರತಿಭಟನೆ ಹಾಗೂ ರ್ಯಾಲಿಗೆ ಅನುಮತಿ ನೀಡುವಂತೆ ಕೋರಿ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸರಿಗೆ ಮನವಿ ಸಲ್ಲಿಸಿದ್ದರು. ‘ಪ್ರತಿಭಟನೆಗೆ ಅನುಮತಿ ಇಲ್ಲ’ ಎಂದು ಪೊಲೀಸರು ಹಿಂಬರಹ ನೀಡಿದ್ದರು. ಪ್ರತಿಭಟನೆ ಮುನ್ಸೂಚನೆ ಅರಿತ ಪೊಲೀಸರು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಅವರಿಗೂ ನೋಟಿಸ್ ನೀಡಿದ್ದರು. ಅವರನ್ನು ಸೋಮವಾರ ಧಾರವಾಡದಲ್ಲಿರುವ ಮನೆಯಲ್ಲಿ ಗೃಹ ಬಂಧನದಲ್ಲಿ ಇರಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.