ಗುರುವಾರ , ಸೆಪ್ಟೆಂಬರ್ 24, 2020
24 °C

ಬಿಜೆಪಿ ಮಹಿಳಾ ಮೋರ್ಚಾ: ಪದಾಧಿಕಾರಿಗಳ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾವೇರಿ: ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆಯಲ್ಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. 

ಸಿದ್ದರಾಜ ಕಲಕೋಟಿ ಮಾತನಾಡಿ, ಭಾರತೀಯ ಜನತಾ ಪಾರ್ಟಿ ಈ ಮಟ್ಟಿಗೆ ಶಕ್ತಿಶಾಲಿಯಾಗಲು ಮಹಿಳಾ ಮೋರ್ಚಾ ಕೂಡಾ ಪ್ರಮುಖ ಪಾತ್ರವಹಿಸಿದೆ. ಎಲ್ಲ ವರ್ಗದ ಮಹಿಳೆಯರನ್ನು ಎಲ್ಲ ಸ್ಥರಗಳಲ್ಲಿ ಪಕ್ಷದತ್ತ ಆಕರ್ಷಿಸಿ ಪಕ್ಷಕ್ಕೆ ಜೋಡಿಸುವ ಕೆಲಸವನ್ನು ನೂತನ ಪದಾಧಿಕಾರಿಗಳು ಮಾಡಬೇಕು ಎಂದು ಮನವಿ ಮಾಡಿದರು. 

ಆಯ್ಕೆಯಾದವರ ವಿವರ: ಅಧ್ಯಕ್ಷರಾಗಿ ಸುಮಿತ್ರಾ ಬಿ.ಪಾಟೀಲ, ಉಪಾಧ್ಯಕ್ಷರಾಗಿ ಅಬಿದಾಬಿ ಇಸ್ಮಾಯಿಲ್‌ ಸಾಬ್‌ ನದಾಫ್ ಮತ್ತು  
ಅನಸೂಯಾ ಅಜ್ಜಪ್ಪ ಯರವಿನತೆಲೆ, ಪ್ರಧಾನ ಕಾರ್ಯದರ್ಶಿಯಾಗಿ ಲಲಿತಾ ಬಸವರಾಜ ಗುಂಡೇನಹಳ್ಳಿ, ರೂಪಾ ರಾಜೇಂದ್ರ ಬಾಕಳೆ, ಕಾರ್ಯದರ್ಶಿಯಾಗಿ ಶಾಂತಾ ರಾ. ಪಾಟೀಲ, ರತ್ನಾ ಬನ್ನಿಕೊಪ್ಪ, ಭಾರತಿ ಪ್ರಭು ಕರ್ಜಗಿಯಾಗಿ ಆಯ್ಕೆಯಾಗಿದ್ದಾರೆ. 

ಕಾರ್ಯಕಾರಿಣಿ ಸದಸ್ಯರಾಗಿ ದೇವಿರಮ್ಮ ಗುಂಡೂರು, ಶಾರದಾ ಕು. ಮಕರವಳ್ಳಿ, ನಿರ್ಮಲಾ ಪಾಟೀಲ, ಲಲಿತಾ ಕುಬಸದ, ಶಂಕ್ರಮ್ಮ ಸೊರಟಿ, ಆಶಾ ಕೋರಿ, ಸುಧಾ ಚಿಂದಿ, ಪ್ರಜ್ವಲಾ ಗೋಣೆಮ್ಮವನರ, ವನಿತಾ ಎಚ್. ಗುತ್ತಲ್, ಸಾವಿತ್ರಾ ಪಾಟೀಲ, ಭಾಗ್ಯಶ್ರೀ ಪಾಟೀಲ, ಬಿಬಿಜೈನಂ ಮುನಿಯಾರ, ಹೇಮಾ ದ. ಕಾಮಣಿ, ಗೌರಮ್ಮ ಹಲಗಲಿ, ಎನ್.ವಿ. ಪದ್ಮಾ, ಅನಿತಾ ಹಬೀಬ ಆಯ್ಕೆಯಾಗಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು