ಗುತ್ತಲ: ವರದಾ ನದಿಗೆ ಅಡ್ಡಲಾಗಿದ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗೇಟುಗಳನ್ನು ತೆಗೆಯುವ ಕಾರ್ಯ ಶುಕ್ರವಾರವೂ ಅರ್ಧಕ್ಕೆ ನಿಂತಿದೆ.

’ಜೆಸಿಬಿ ಸಹಾಯದಿಂದ ಗೇಟುಗಳನ್ನು ತೆಗೆಯು ಸಂದರ್ಭದಲ್ಲಿ ಜೆಸಿಬಿಯ ಪಿನ್ ತುಂಡಾಗಿ ಗೇಟುಗಳನ್ನು ತೇಗೆಯುವ ಕಾರ್ಯವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ’ ಎಂದು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ರೇವಣೆಪ್ಪ ತಿಳಿಸಿದ್ದಾರೆ.

ಹಾವೇರಿ ತಾಲೂಕಿನ ಮರಡೂರ ಮತ್ತು ಅಕ್ಕೂರ ಗ್ರಾಮಗಳ ಮಧ್ಯ ವರದಾ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗೇಟುಗಳನ್ನು ಏಪ್ರಿಲ್ ತಿಂಗಳಲ್ಲಿ ತೇಗೆಯಬೇಕಾಗಿತ್ತು. ಅಧಿಕಾರಿಗಳ ನಿರ್ಲಕ್ಷ್ಯದಿಂದ ಗೇಟುಗಳನ್ನು ಹಾಗೆ ಬಿಟ್ಟಿದ್ದರು. ಗೇಟುಗಳನ್ನು ಹಾಗೆ ಬಿಟ್ಟ ಕಾರಣ ವರದಾ ನದಿಯ ನೀರಿನ ಮಟ್ಟ ಜಾಸ್ತಿಯಾಗಿ ರೈತರ ಜಮಿನುಗಳಿಗೆ ನುಗ್ಗುತ್ತಿರುವದನ್ನು ಕಂಡ ರೈತರು ಪ್ರಜಾವಾಣಿಗೆ ತಿಳಿಸಿದ್ದರು.

ಪ್ರಜಾವಾಣಿ ವರದಿ ಮಾಡಿದ ನಂತರ ಅಧಿಕಾರಿಗಳು ಗುರುವಾರ ಪ್ರಯತ್ನಪಟ್ಟಿದ್ದರು. ಆದರೆ ಸಫಲವಾಗಲಿಲ್ಲ. ಶುಕ್ರವಾರ ಉಳಿದ ಗೇಟುಗಳನ್ನು ತೇಗೆಯಲು ಹೋದಾಗ ನದಿಗೆ ನೀರು ಬಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು. ನದಿಯ ನೀರಿನ ಮಟ್ಟ ಕಡಿಮೆಯಾದ ನಂತರ ಗೇಟುಗಳನ್ನು ತೇಗೆಯಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

’ಅಧಿಕಾರಿಗಳು ಗೇಟುಗಳನ್ನು ತೆಗೆಯದೇ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ರೈತರು ಆಕ್ರೋಶ ವ್ಯಕ್ತಪಡಿಸಿದ ನಂತರ ಗೇಟುಗಳನ್ನು ತೆಗೆಯಲಾಗಿದೆ. ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ರೈತರಾದ ಯಲ್ಲನಗೌಡ ಮರಿಗೌಡರ ಮತ್ತು ಲೊಕೇಶ ಕುಬಸದ ಜಿಲ್ಲಾಧಿಕಾರಿಗಳಿಗೆ ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.