ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾವೇರಿ: ಲಂಚ ಪಡೆಯುತ್ತಿದ್ದ ಕೇಸ್‌ ವರ್ಕರ್‌ ಬಂಧನ

Published 5 ಜೂನ್ 2024, 15:28 IST
Last Updated 5 ಜೂನ್ 2024, 15:28 IST
ಅಕ್ಷರ ಗಾತ್ರ

ಹಾವೇರಿ: ಅಂತರ್ಜಾತಿ ವಿವಾಹದ ಪ್ರೋತ್ಸಾಹಧನದ ಎಫ್‌.ಡಿ. ಬಾಂಡ್‌ ನೀಡಲು, ಫಲಾನುಭವಿಯಿಂದ ₹10 ಸಾವಿರ ಲಂಚ ಪಡೆಯುತ್ತಿದ್ದ ಹಾವೇರಿ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕೇಸ್ ವರ್ಕರ್‌ ಬುಧವಾರ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾನೆ. 

ಆರೋಪಿ ಪೀರ್‌ಸಾಬ್‌ ದೇವಿಹೊಸೂರು ಎಂಬ ಸರ್ಕಾರಿ ನೌಕರನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. 

ಹಾವೇರಿ ತಾಲ್ಲೂಕಿನ ಹಿರೇಲಿಂಗದಹಳ್ಳಿಯ ಮಂಜಪ್ಪ ಬಂಕಾಪುರ ಮತ್ತು ರುದ್ರಪ್ಪ ಶಿರಸಂಗಿ ಅವರು ಅಂತರ್ಜಾತಿ ವಿವಾಹದ ಪ್ರೋತ್ಸಾಹಧನ ನೀಡುವ ಯೋಜನೆಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದರು. 

ಇವರ ಬ್ಯಾಂಕ್‌ ಖಾತೆಗೆ ₹1.50 ಲಕ್ಷ ಜಮಾ ಆಗಿತ್ತು. ಬಾಕಿ ₹1.50 ಲಕ್ಷದ ಎಫ್‌.ಡಿ. ಬಾಂಡ್‌ ನೀಡಲು ₹15 ಸಾವಿರ ಲಂಚಕ್ಕೆ ಬೇಡಿಕೆ ಇಡಲಾಗಿತ್ತು. ಹಾವೇರಿಯ ಪ್ರವಾಸಿ ಮಂದಿರದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದರು.  

ಲೋಕಾಯುಕ್ತ ಡಿವೈಎಸ್ಪಿ ಬಿ.ಪಿ.ಚಂದ್ರಶೇಖರ ನೇತೃತ್ವದಲ್ಲಿ ದಾಳಿ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT