ಹಾವೇರಿ: ಜಿಲ್ಲೆಯ ಹಾನಗಲ್ ತಾಲ್ಲೂಕಿನ ತಿಳವಳ್ಳಿ ಬಳಿ ಅನ್ನಭಾಗ್ಯ ಯೋಜನೆಯ 4,500 ಕೆ.ಜಿ. ಪಡಿತರ ಅಕ್ಕಿ ಜಪ್ತಿ ಮಾಡಲಾಗಿದ್ದು, ಈ ಬಗ್ಗೆ ಆಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ತಿಳವಳ್ಳಿ ಗ್ರಾಮದಲ್ಲಿರುವ ತಿಳವಳ್ಳಿ–ಹಂಸಬಾವಿ ರಸ್ತೆಯಲ್ಲಿ ಟಾಟಾ ಗೂಡ್ಸ್ ವಾಹನದಲ್ಲಿ ಅಕ್ಕಿಯನ್ನು ಅಕ್ರಮವಾಗಿ ಸಾಗಿಸಲಾಗುತ್ತಿತ್ತು. ಆಹಾರ ಇಲಾಖೆ ಅಧಿಕಾರಿಗಳು ಅ. 24ರಂದು ರಾತ್ರಿ ಕಾರ್ಯಾಚರಣೆ ನಡೆಸಿ, ವಾಹನ ಸಮೇತ ಅಕ್ಕಿ ಪತ್ತೆ ಮಾಡಿದ್ದಾರೆ. ಈ ಬಗ್ಗೆ ಹಾನಗಲ್ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆಯ ಶಿರಸ್ತೆದಾರ ವೆಂಕಟೇಶ ಸಂಗಪ್ಪ ದೊಡ್ಡಮನಿ ಅವರು ದೂರು ನೀಡಿದ್ದಾರೆ’ ಎಂದು ಆಡೂರು ಠಾಣೆ ಪೊಲೀಸರು ತಿಳಿಸಿದರು.

‘100 ಚೀಲಗಳಲ್ಲಿ ತುಂಬಿದ್ದ ₹ 1.30 ಲಕ್ಷ ಮೌಲ್ಯದ 4,500 ಕೆ.ಜಿ. ಪಡಿತರ ಅಕ್ಕಿಯನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳು ಎನ್ನಲಾದ ಅಕ್ಕಿಆಲೂರಿನ ಅನಿಲಕುಮಾರ ಕರಬಸಪ್ಪ ಮಾಳಗಿ ಹಾಗೂ ಬಂಕಾಪುರದ ಸುರೇಶ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಚಾಲಕ ವಾಹನ ಬಿಟ್ಟು ಪರಾರಿಯಾಗಿದ್ದಾನೆ’ ಎಂದು ಹೇಳಿದರು.

‘ಬಿಪಿಎಲ್ ಪಡಿತರ ಚೀಟಿದಾರರಿಗೆ ಅನ್ನಭಾಗ್ಯ ಯೋಜನೆಯಡಿ ರಾಜ್ಯ ಸರ್ಕಾರ ಉಚಿತವಾಗಿ ಅಕ್ಕಿ ನೀಡುತ್ತಿದೆ. ಇದೇ ಅಕ್ಕಿಯನ್ನು ಫಲಾನುಭವಿಗಳಿಂದ ಖರೀದಿಸುತ್ತಿರುವ ಕೆಲವರು, ಅದನ್ನು ಕಾಳಸಂತೆಯಲ್ಲಿ ಮಾರುತ್ತಿರುವ ಮಾಹಿತಿಯಿದೆ. ಈಗ ಸಿಕ್ಕಿರುವ ಅಕ್ಕಿಯನ್ನು ಎಲ್ಲಿಂದ ಖರೀದಿಸಲಾಗಿತ್ತು ಹಾಗೂ ಎಲ್ಲಿಗೆ ಕಳುಹಿಸಲಾಗುತ್ತಿತ್ತು ಎಂಬುದು ತನಿಖೆ ಮೂಲಕ ತಿಳಿಯಬೇಕಿದೆ’ ಎಂದು ಪೊಲೀಸರು ತಿಳಿಸಿದರು.

ಕಾರ್ಯಾಚರಣೆ ಬಗ್ಗೆ ಪ್ರತಿಕ್ರಿಯಿಸಿದ ಆಹಾರ ಇಲಾಖೆ ಉಪನಿರ್ದೇಶಕ ಮಂಜುನಾಥ್, ‘4,500 ಕೆ.ಜಿ. ಪಡಿತರ ಅಕ್ಕಿ ಜಪ್ತಿ ಮಾಡಲಾಗಿದ್ದು, ಪೊಲೀಸರಿಗೂ ದೂರು ನೀಡಲಾಗಿದೆ. ತನಿಖೆಯಿಂದಲೇ ಮತ್ತಷ್ಟು ಮಾಹಿತಿ ತಿಳಿಯಬೇಕಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.