ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹಾವೇರಿ: 245 ಮಂದಿಗೆ ಕಳೆದುಕೊಂಡಿದ್ದ ಮೊಬೈಲ್ ಹಸ್ತಾಂತರ

Published 23 ಜೂನ್ 2024, 6:57 IST
Last Updated 23 ಜೂನ್ 2024, 6:57 IST
ಅಕ್ಷರ ಗಾತ್ರ

ಹಾವೇರಿ: ಬಸ್, ಜಾತ್ರೆ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಮೊಬೈಲ್ ಕಳೆದುಕೊಂಡಿದ್ದ 245 ಮಂದಿಯ ಮೊಬೈಲ್ ಪತ್ತೆ ಮಾಡಿರುವ‌ ಪೊಲೀಸರು, ದೂರುದಾರರಿಗೆ ಮೊಬೈಲ್ ವಾಪಾಸು ಕೊಟ್ಟಿದ್ದಾರೆ‌.

ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಜನರು ಮೊಬೈಲ್ ಕಳೆದುಕೊಂಡಿದ್ದರು. ಈ ಬಗ್ಗೆ ಇ-ಲಾಸ್ಟ್ ಹಾಗೂ ಕೇಂದ್ರ ಸರ್ಕಾರದ ಸಿಇಐಆರ್ ಜಾಲತಾಣದಲ್ಲಿ ದೂರು ದಾಖಲಿಸಿದ್ದರು.

ಕಳ್ಳತನವಾಗಿದ್ದ‌ ಮೊಬೈಲ್‌ಗಳನ್ನು ಆರೋಪಿಗಳು, ಹಲವೆಡೆ ಮಾರಿದ್ದರು. ಅವುಗಳನ್ನು ಪತ್ತೆ ಮಾಡಿರುವ ಪೊಲೀಸರು, ಗ್ರಾಹಕರಿಂದ ಮೊಬೈಲ್‌ ಜಪ್ತಿ ಮಾಡಿ ದೂರುದಾರರಿಗೆ ವಾಪಸು ನೀಡಿದ್ದಾರೆ.

ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ‌ ಜಿಲ್ಲಾ ಎಸ್ಪಿ ಅಂಶುಕುಮಾರ್ ಹಾಗೂ ಹೆಚ್ಚುವರಿ‌ ಎಸ್ಪಿ ಸಿ.ಗೋಪಾಲ್ ಅವರು ದೂರುದಾರರಿಗೆ ಮೊಬೈಲ್ ಹಸ್ತಾಂತರಿಸಿದರು.

ಆರೋಪಿಗಳ‌ ಬಂಧನವಿಲ್ಲ: ಮೊಬೈಲ್ ಕಳ್ಳತನ ಮಾಡಿದ್ದ ಆರೋಪಿಗಳನ್ನು‌ ಪೊಲೀಸರು ಇದುವರೆಗೂ ಬಂಧನ ಮಾಡಿಲ್ಲ. ಕೇವಲ ಮೊಬೈಲ್ ಖರೀದಿಸಿದ್ದ ಗ್ರಾಹಕರನ್ನು ಮಾತ್ರ ಪತ್ತೆ ಮಾಡಿ, ಅವರಿಂದ‌ ಮೊಬೈಲ್ ಜಪ್ತಿ ಮಾಡಿದ್ದಾರೆ‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT