ಹಾವೇರಿ: ಅಂಚೆ ಇಲಾಖೆಯ ಕರ್ನಾಟಕ ವೃತ್ತದಲ್ಲಿ 2024–25ನೇ ವಿತ್ತೀಯ ವರ್ಷದ ವಿವಿಧ ಅಭಿಯಾನಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಅಂಚೆ ವಿಭಾಗಗಳಿಗೆ ಮತ್ತು ಸಿಬ್ಬಂದಿಗಳಿಗೆ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ‘ಉನ್ನತಿ’ ಶ್ರೇಷ್ಠತಾ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಿ ಅಭಿನಂದಿಸಲಾಯಿತು.

ರಾಜ್ಯಮಟ್ಟದಲ್ಲಿ ಸ್ಪೀಡ್ ಪೋಸ್ಟ್ ಡಾಕ್ಯುಮೆಂಟ್ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಹಾವೇರಿ ವಿಭಾಗದ ಆರ್ಪಿಎಲ್ಐ ಕೇಂದ್ರೀಯ ಸಂಸ್ಕರಣಾ ಘಟಕಕ್ಕೆ ಪ್ರಥಮ ಸ್ಥಾನ ಲಭಿಸಿತು. ಗ್ರಾಮೀಣ ಅಂಚೆ ವಿಮಾ ಸಂಗ್ರಹದಲ್ಲಿ ಕಡೂರು ಗ್ರಾಮೀಣ ಅಂಚೆ ಶಾಖೆಗೆ ದ್ವಿತೀಯ ಸ್ಥಾನ ಲಭಿಸಿತು.

ಹಾವೇರಿ ವಿಭಾಗದ ಅಂಚೆ ಅಧೀಕ್ಷಕ ಮಂಜುನಾಥ ಹುಬ್ಬಳ್ಳಿ, ಹಾವೇರಿ ಪ್ರಧಾನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಮಂಜುನಾಥ ಕಳಸೂರು, ಸಿಬ್ಬಂದಿ ಆರ್.ಕೆ ಅಬ್ಬಿಗೇರಿ, ಪಾಂಡುರಂಗ ನಡುವಿನಮನಿ ಹಾಗೂ ಕಡೂರು ಗ್ರಾಮೀಣ ಅಂಚೆ ಪಾಲಕರಾದ ರೇಣುಕಾ ಲೆಕ್ಕಪ್ಪಳವರ, ಹನುಮಂತಪ್ಪ ಕಮತಳ್ಳಿ ಅವರು ಸಮಾರಂಭದಲ್ಲಿ ಪ್ರಶಸ್ತಿ ಸ್ವೀಕರಿಸಿದರು. ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಸ್. ರಾಜೇಂದ್ರಕುಮಾರ ಪ್ರಶಸ್ತಿಗಳನ್ನು ವಿತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.