ಹಾವೇರಿ: ‘ಸಿರಿಧಾನ್ಯಗಳಿಂದ ತಯಾರಿಸಿದ ಆಹಾರ ಸೇವನೆಯು ಜೀವನ ರಕ್ಷಣೆಯ ಸಂಜೀವಿನಿಯಾಗಿದೆ. ನವಣೆ, ಸಾಮೆ, ಹಾರಕ, ಬರಗು, ಊದಲು, ರಾಗಿ ಮತ್ತು ಜೋಳ ಬಳಕೆಯಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮಧುಮೇಹಿಗಳಿಗೆ ಇವು ಸಿದ್ದೌಷಧಗಳು’ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ಹೊರವಲಯದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಅಂತರರಾಷ್ಟ್ರೀಯ ವಾಣಿಜ್ಯ ಮೇಳ–2026’ರ ಅಂಗವಾಗಿ ಕೃಷಿ ಇಲಾಖೆ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ‘ಸಿರಿಧಾನ್ಯ ಜಾಥಾ ಕಾರ್ಯಕ್ರಮ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಆರೋಗ್ಯಯುತ ಜೀವನಕ್ಕೆ ಆಹಾರ ಕ್ರಮ ಅತೀ ಮುಖ್ಯ. ಸರಿಯಾದ ಆಹಾರ ಪದ್ಧತಿಯಿಂದ ಸಮತೋಲನ ಜೀವನ ನಡೆಸಲು ಸಾಧ್ಯ. ಆಹಾರಗಳಲ್ಲಿ ಸಿರಿಧಾನ್ಯಗಳ ಪಾತ್ರ ಬಹುಮುಖ್ಯವಾಗಿದೆ. ಇಂದಿನ ಪೀಳಿಗೆ ಫಾಸ್ಟ್ ಫುಡ್ನಿಂದ ಕುಗ್ಗುತ್ತಿದೆ. ಅವರಲ್ಲಿ ಆಹಾರದ ಜಾಗೃತಿ ಮೂಡಿಸಬೇಕಿದೆ’ ಎಂದರು.

ಶಿವಬಸವ ಸ್ವಾಮೀಜಿ, ಮೃತ್ಯುಂಜಯ ಸ್ವಾಮೀಜಿ, ಶಿವಲಿಂಗ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿ.ಪಂ. ಸಿಇಒ ರುಚಿ ಬಿಂದಲ್, ಹೆಚ್ಚುವರಿ ಜಿಲ್ಲಾಧಿಕಾರಿ ನಾಗರಾಜ ಎಲ್. ಇದ್ದರು.

ಹಾವೇರಿಯ ಪ್ರವಾಸಿ ಮಂದಿರದಿಂದ ನಗರದ ವಿವಿಧ ರಸ್ತೆಗಳಲ್ಲಿ ಸಿರಿಧಾನ್ಯ ಜಾಗೃತಿ ನಡಿಗೆ ನಡೆಯಿತು.

ಸಿರಿಧಾನ್ಯಗಳಿಂದ ತಯಾರಿಸಿದ ತಿನಿಸುಗಳ ಸ್ಪರ್ಧೆ ನಡೆಯಿತು. ಸಿರಿಧಾನ್ಯ ಸಿಹಿ ತಿನಿಸು ವಿಭಾಗದಲ್ಲಿ ಶೇಕಣ್ಣ ಬತ್ತಿಕೊಪ್ಪ (ಪ್ರಥಮ), ರತ್ನಾ ಬುಡ್ಡನಗೌಡ್ರ (ದ್ವಿತೀಯ) ಹಾಗೂ ಲಕ್ಷ್ಮೀ ಕಮ್ಮಾರ (ತೃತೀಯ) ಸ್ಥಾನ ಪಡೆದರು.

ಸಿರಿಧಾನ್ಯ ಖಾರ ತಿನಿಸು ವಿಭಾಗದಲ್ಲಿ ಈರಣ್ಣ ಹುಲಗಚ್ಚ (ಪ್ರಥಮ), ಮಧುರಾ ನವುಲಿ (ದ್ವಿತೀಯ), ಸೃಷ್ಟಿ ಕೆಂಡದಮಠ (ತೃತೀಯ), ಮರೆತುಹೊದ ಖಾದ್ಯ ವಿಭಾಗದಲ್ಲಿ ಮಾಲತೇಶ ಶಿಡಗನಾಳ (ಪ್ರಥಮ), ರೂಪಾ ತೋಟದ (ದ್ವಿತೀಯ) ಹಾಗೂ ಗೀತಾ ಹಡಪದ (ತೃತೀಯ) ಸ್ಥಾನ ಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.