ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿಹಬ್ಬ: ‘ಸುಕೋ ಸಂಜೆ’ ಕಾರ್ಯಕ್ರಮ ನಾಳೆ

Last Updated 6 ಜನವರಿ 2020, 15:53 IST
ಅಕ್ಷರ ಗಾತ್ರ

ಹಾವೇರಿ: ಸಹಕಾರಿ ಕ್ಷೇತ್ರದಲ್ಲಿ ಇಪ್ಪತ್ತೈದು ವರ್ಷ ಪೂರೈಸಿರುವ ಸುಕೋ ಬ್ಯಾಂಕ್‌ ತನ್ನ ಬೆಳ್ಳಿ ಹಬ್ಬದ ಅಂಗವಾಗಿ ನಗರದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜ.8 ರಂದು ಸಂಜೆ 5.30ಕ್ಕೆ ‘ಸುಕೋ ಸಂಜೆ’ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕ್‌ ಅಧ್ಯಕ್ಷ ಮೋಹಿತ್‌ ಮಸ್ಕಿ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ,ಬ್ಯಾಂಕ್‍ನ ಬೆಳ್ಳಿ ಹಬ್ಬದ ಸಂಭ್ರಮವನ್ನು ನಮ್ಮ ಎಲ್ಲಾ 28 ಶಾಖೆಗಳ ಗ್ರಾಹಕರೊಂದಿಗೆ ಸಂಭ್ರಮಿಸುವ ಉದ್ದೇಶದಿಂದ ಪ್ರತಿ ಶಾಖೆಯಲ್ಲೂ `ಸುಕೋ ಸಂಜೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾಂಸ್ಕೃತಿಕ ಸಂಜೆಯಲ್ಲಿ ಹಾಸ್ಯನಟ ಯಶವಂತ ಸರದೇಶಪಾಂಡೆ ಅವರ ಏಕವ್ಯಕ್ತಿ ಅಭಿನಯದ ‘ರಾಶಿಚಕ್ರ’ ಹಾಸ್ಯ ರಂಗಪ್ರಯೋಗ ಪ್ರದರ್ಶನಗೊಳ್ಳಲಿದೆ ಎಂದರು.

ಶಾಸಕರಾದ ನೆಹರು ಓಲೇಕಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸುಕೋ ಬ್ಯಾಂಕ್ ಕೇವಲ ವ್ಯವಹಾರಕ್ಕೆ ಮಾತ್ರ ಸೀಮಿತಗೊಳ್ಳದೇ, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುತ್ತಿದೆ. ಅಲ್ಲದೆ, ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸಕ್ರಿಯವಾಗಿದೆ. 2018-19ರ ಆರ್ಥಿಕ ಸಾಲಿನಲ್ಲಿ ಒಟ್ಟು ₹1,125 ಕೋಟಿ ವ್ಯವಹಾರ ನಡೆಸಿ, ₹4.5 ಕೋಟಿ ನಿವ್ವಳ ಗಳಿಕೆ ಮಾಡಿದೆ ಎಂದರು.

ಬೆಳ್ಳಿ ಹಬ್ಬದ ಅಂಗವಾಗಿ ‘ಸುಕೋ ಸೋಲಾರ್ ಶಕ್ತಿ’ ಎಂಬ ಯೋಜನೆಯನ್ನು ತರಲಾಗಿದೆ. ಇದರ ಅಡಿಯಲ್ಲಿ ಆಯ್ದ ಸೋಲಾರ್ ಮಾರಾಟಗಾರರಿಂದ ಗ್ರಾಹಕರಿಗೆ ಮಾರುಕಟ್ಟೆ ಬೆಲೆಗಿಂತಲೂ ಶೇ 15 ರಿಂದ 20 ಕಡಿಮೆ ಬೆಲೆಯಲ್ಲಿ ಸೋಲಾರ್ ಪ್ಯಾನಲ್‍ಗಳನ್ನು ಒದಗಿಸಲಿದೆ ಎಂದರು.

1 ಕಿಲೋ ವ್ಯಾಟ್ ಉತ್ಪಾದಿಸುವ ಸೋಲಾರ್ ಅಳವಡಿಸಿಕೊಂಡು ₹872 ತಿಂಗಳ ಕಂತುಗಳಲ್ಲಿ ಸಾಲ ಮರುಪಾವತಿಸಲು ಅನುಕೂಲ ಕಲ್ಪಿಸಿದೆ. ಇದರ ಲಾಭವನ್ನು ಸುಕೋ ಬ್ಯಾಂಕ್‌ ಗ್ರಾಹಕರು ಪಡೆದುಕೊಳ್ಳಬಹುದಾಗಿದೆ ಎಂದರು. ರಾಣೆಬೆನ್ನೂರು ಶಾಖೆಯ ವ್ಯವಸ್ಥಾಪಕ ಮಧುಚಂದ್ರ, ನವೀನರಾಜ್ ಕಟ್ಟೀಮನಿಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT