ಹಾವೇರಿ: ಜಿಲ್ಲೆಯ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಜನರಿಂದ ತೆರಿಗೆ ಸಂಗ್ರಹಿಸಲು ಜುಲೈ 14 ಹಾಗೂ 15ರಂದು ವಿಶೇಷ ಅಭಿಯಾನ ನಡೆಸಲಾಗಿದ್ದು, ಎರಡು ದಿನಗಳಲ್ಲಿ ₹ 1.03 ಕೋಟಿ ತೆರಿಗೆ ಸಂಗ್ರಹವಾಗಿದೆ.

ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಸೂಚನೆ ಅನ್ವಯ ಹಾವೇರಿ ಜಿಲ್ಲಾ ಪಂಚಾಯಿತಿ ಸಿಇಒ ರುಚಿ ಬಿಂದಲ್ ಅವರು ಜಿಲ್ಲೆಯಲ್ಲಿ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ್ದರು. ಜಿಲ್ಲೆಯ ಪ್ರತಿಯೊಂದು ಗ್ರಾ.ಪಂ. ಸದಸ್ಯರು ಮನೆ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹ ಮಾಡಿದ್ದಾರೆ.

ರಾಜ್ಯ ಸರ್ಕಾರದ ನಿಯಮಾವಳಿ ಪ್ರಕಾರ ಜಿಲ್ಲೆಯ 223 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹38.78 ಕೋಟಿ ವಾರ್ಷಿಕ ತೆರಿಗೆಯ ಬೇಡಿಕೆ ಇದೆ. ಪ್ರತಿಯೊಂದು ಜಿಲ್ಲೆಯಲ್ಲೂ ಪ್ರತಿ ವಾರ್ಷಿಕ ವರ್ಷದಲ್ಲೂ ತೆರಿಗೆ ಬಾಕಿ ಉಳಿಯುತ್ತಿದೆ. ಇದೇ ಕಾರಣಕ್ಕೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ, ತೆರಿಗೆ ಸಂಗ್ರಹಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಇದರನ್ವಯ ಜಿಲ್ಲೆಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಸಿಬ್ಬಂದಿ, ನೇರವಾಗಿ ಜನರ ಬಳಿ ಹೋಗಿ ತೆರಿಗೆ ಸಂಗ್ರಹಿಸಿ ಸ್ಥಳದಲ್ಲೇ ರಶೀದಿ ನೀಡಿದ್ದಾರೆ.

ಮನೆ, ಖುಲ್ಲಾ ಜಾಗ, ಹೋಟೆಲ್, ಸ್ಥಾವರ... ಹೀಗೆ ತೆರಿಗೆ ಪಟ್ಟಿಯಲ್ಲಿರುವ ಎಲ್ಲ ಸ್ಥಳಗಳಿಗೂ ಭೇಟಿ ನೀಡಿದ್ದ ಅಧಿಕಾರಿಗಳು, ತೆರಿಗೆ ಬಾಕಿ ಬಗ್ಗೆ ಮಾಹಿತಿ ನೀಡಿದ್ದರು. ತೆರಿಗೆ ಕಟ್ಟುವುದರಿಂದ ಆಗುವ ಲಾಭಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿದ್ದರು. ನಂತರ, ಜನರಿಂದ ತೆರಿಗೆ ಕಟ್ಟಿಸಿಕೊಂಡಿದ್ದಾರೆ. ತೆರಿಗೆ ಬಗ್ಗೆ ಜಾಗೃತಿಯನ್ನೂ ಮೂಡಿಸಿದ್ದಾರೆ.

‘ಜಿಲ್ಲೆಯಲ್ಲಿ ಬೇಡಿಕೆಯಲ್ಲಿದ್ದ ₹ 38 ಕೋಟಿ ಪೈಕಿ ಜುಲೈ 13ರವರೆಗೆ ₹ 6.50 ಕೋಟಿ ತೆರಿಗೆ ಸಂಗ್ರಹಿಸಲಾಗಿತ್ತು. ತೆರಿಗೆ ಪಾವತಿಯನ್ನು ಚುರುಕುಗೊಳಿಸುವ ಉದ್ದೇಶದಿಂದ ಜುಲೈ 14 ಹಾಗೂ 15ರಂದು ವಿಶೇಷ ಅಭಿಯಾನ ನಡೆಸಲಾಯಿತು. ಎರಡು ದಿನಗಳಲ್ಲಿ ₹ 1.03 ಕೋಟಿ ಸಂಗ್ರಹವಾಗಿರುವುದು ದಾಖಲೆಯಾಗಿದೆ’ ಎಂದು ಜಿ.ಪಂ. ಸಿಇಒ ರುಚಿ ಬಿಂದಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಪ್ರಾಯೋಗಿಕವಾಗಿ ನಡೆಸಿದ್ದ ಎರಡು ದಿನಗಳ ಅಭಿಯಾನಕ್ಕೆ ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರತಿ ತಿಂಗಳು ಎರಡು ದಿನ ಅಭಿಯಾನ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಬೊಮ್ಮನಹಳ್ಳಿಗೆ ಮೊದಲ ಸ್ಥಾನ: ತೆರಿಗೆ ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ಜಿಲ್ಲೆಯ ಪ್ರತಿಯೊಂದು ಪಂಚಾಯಿತಿಗೂ ವಿಶೇಷ ಸೂಚನೆ ನೀಡಲಾಗಿತ್ತು. ಹಾನಗಲ್ ತಾಲ್ಲೂಕಿನ ಬೊಮ್ಮನಹಳ್ಳಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ಪ್ರವೀಣ ಸಾಲಗುಂದಿ, ಬಿಲ್ ಕಲೆಕ್ಟರ್ ರವಿ ಆರೇರ್ ಹಾಗೂ ಸಿಬ್ಬಂದಿ, ಎರಡು ದಿನಗಳಲ್ಲಿ ₹ 2.43 ಲಕ್ಷ ತೆರಿಗೆ ಸಂಗ್ರಹಿಸುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ.

ಹಾನಗಲ್ ತಾಲ್ಲೂಕಿನ ತಿಳವಳ್ಳಿ ಪಿಡಿಒ ವಿಶ್ವನಾಥ್ ಎಂ., ಬಿಲ್ ಕಲೆಕ್ಟರ್ ಕರಬಸಪ್ಪ ದುಮ್ಮಿಹಾಳ ಹಾಗೂ ಸಿಬ್ಬಂದಿ ₹ 2.29 ಲಕ್ಷ ತೆರಿಗೆ ಸಂಗ್ರಹಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಅಕ್ಕಿಆಲೂರಿನ ಪಿಡಿಒ ಕುಮಾರ ಮಕರವಳ್ಳಿ, ಬಿಲ್ ಕಲೆಕ್ಟರ್ ಸಂಗಮೇಶ ಕೆ., ಪ್ರಕಾಶ ಕೆ. ಹಾಗೂ ಸಿಬ್ಬಂದಿ ₹ 2.29 ಲಕ್ಷ ಸಂಗ್ರಹಿಸಿ ಮೂರನೇ ಸ್ಥಾನದಲ್ಲಿದ್ದಾರೆ.

ಸವಣೂರು ತಾಲ್ಲೂಕಿನ ಮಂತ್ರೋಡಿ ಪಿಡಿಒ ಭೋಜರಾಜ ಎಲ್., ಬಿಲ್ ಕಲೆಕ್ಟರ್ ಮಂಜುನಾಥ ಒ. ಹಾಗೂ ಸಿಬ್ಬಂದಿ ₹ 2.05 ಲಕ್ಷ ಸಂಗ್ರಹಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹುರುಳಿಕುಪ್ಪಿ ಪಿಡಿಒ ಶಿವಲೀಲಾ ಬಿ., ಬಿಲ್ ಕಲೆಕ್ಟರ್ ಮಾಲತೇಶ ಬಿಜ್ಜೂರ ಹಾಗೂ ಸಿಬ್ಬಂದಿ ₹ 1.92 ಲಕ್ಷ ಸಂಗ್ರಹಿಸಿ ಐದನೇ ಸ್ಥಾನದಲ್ಲಿದ್ದಾರೆ.

ಜಿಲ್ಲೆಯಲ್ಲಿ 223 ಗ್ರಾಮ ಪಂಚಾಯಿತಿ ಜುಲೈ 14–15ರಂದು ನಡೆದ ಅಭಿಯಾನ ತಿಳವಳ್ಳಿ ಗ್ರಾ.ಪಂ.ಗೆ ಎರಡನೇ ಸ್ಥಾನ

ಗ್ರಾಮಸ್ಥರ ಉತ್ತಮ ಸ್ಪಂದನೆಯಿಂದ ಜಿಲ್ಲೆಗೆ ಮೊದಲ ಸ್ಥಾನದಲ್ಲಿದ್ದೇವೆ. ಜನರು ತೆರಿಗೆ ತುಂಬಿದರೆ ಗ್ರಾಮಗಳ ಅಭಿವೃದ್ಧಿಗೆ ಸಹಕಾರಿಯಾಗಲಿದೆ
ಪ್ರವೀಣ ಸಾಲಗುಂದಿ ಬೊಮ್ಮನಹಳ್ಳಿ ಪಿಡಿಒ

ಗ್ರಾ.ಪಂ. ಸಿಬ್ಬಂದಿ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಎರಡು ದಿನಗಳಲ್ಲಿ ₹ 1.03 ಕೋಟಿ ಸಂಗ್ರಹಿಸಲು ಸಾಧ್ಯವಾಗಿದೆ
ರುಚಿ ಬಿಂದಲ್ ಜಿ.ಪಂ. ಸಿಇಒ

‘ವಾಣಿಜ್ಯ ಪ್ರದೇಶಗಳಲ್ಲಿ ಹಿನ್ನೆಡೆ’ ‘ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಎರಡು ದಿನಗಳ ಅಭಿಯಾನದಲ್ಲಿ ಮನೆ ಹಾಗೂ ಹೋಟೆಲ್ನವರು ಮಾತ್ರ ತೆರಿಗೆ ಪಾವತಿ ಮಾಡಿದ್ದಾರೆ. ಆದರೆ ಬಹುತೇಕ ಕೈಗಾರಿಕೆಗಳು ಸೇರಿದಂತೆ ವಾಣಿಜ್ಯ ಬಳಕೆ ಪ್ರದೇಶದವರು ತೆರಿಗೆ ಪಾವತಿ ಮಾಡಿಲ್ಲ. ಇದು ಅಭಿಯಾನಕ್ಕೂ ಹಿನ್ನೆಡೆಯುಂಟು ಮಾಡಿದೆ’ ಎಂದು ಅಧಿಕಾರಿಯೊಬ್ಬರು ಹೇಳಿದರು. ‘ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಹಲವು ಕೈಗಾರಿಕೆಗಳಿವೆ. ಅಲ್ಲಿಯ ಕೈಗಾರಿಕೆಯವರು ನಿಗದಿತ ಸಮಯಕ್ಕೆ ತೆರಿಗೆ ತುಂಬುತ್ತಿಲ್ಲ. ಸಾಕಷ್ಟು ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ’ ಎಂದು ತಿಳಿಸಿದರು.

ತಾಲ್ಲೂಕುವಾರು ತೆರಿಗೆ ಸಂಗ್ರಹ ವಿವರ ತಾಲ್ಲೂಕು;ಬೇಡಿಕೆ (₹ ಕೋಟಿಗಳಲ್ಲಿ); ಸಂಗ್ರಹ (ಜುಲೈ 14–15 ಮಾತ್ರ ₹ ಲಕ್ಷಗಳಲ್ಲಿ)ಹಾನಗಲ್; 7.90;25.25ರಾಣೆಬೆನ್ನೂರು; 6.55; 14.54ಹಾವೇರಿ; 5.56; 13.41ಬ್ಯಾಡಗಿ; 5.53; 15.17ಶಿಗ್ಗಾವಿ; 4.37; 12.26ಸವಣೂರು; 3.29; 12.71ರಟ್ಟೀಹಳ್ಳಿ; 2.82; 5.73ಹಿರೇಕೆರೂರು; 2.73; 4.37

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.